26.4 C
Bengaluru
Wednesday, December 4, 2024

Gift Deed: ದಾನಪತ್ರ ಮಾಡಿಸುವಾಗ ಈ ಮಿಸ್ಟೆಕ್ ಮಾಡಬೇಡಿ!

#Gift deed #Gift deed draft, #Gift deed Registration rules, #Gift deed canalisation, #about Gift deed # Indian law about Gift deed

ಬೆಂಗಳೂರು: ಯಾವುದೇ ಒಬ್ಬ ವ್ಯಕ್ತಿ ತನಗೆ ಸೇರಿದ ಸ್ಥಿರ ಅಥವಾ ಚರಾಸ್ತಿಯನ್ನು ಯಾವುದೆ ಪ್ರತಿಫಲ ಆಪೇಕ್ಷಿಸದೇ ಇಷ್ಟಬಂದವರಿಗೆ ಉಡುಗೊರೆಯಾಗಿ ನೀಡುವುದನ್ನು ದಾನ ಎನ್ನುತ್ತೇವೆ. ಈ ದಾನದ ಬಗ್ಗೆ ದಸ್ತವೇಜು ಸಿದ್ಧಪಡಿಸಿ ನೋಂದಣಿ ಮಾಡಿಸುವ ಪತ್ರಕ್ಕೆ ದಾನ ಪತ್ರ ಎಂದು ಕರೆಯುತ್ತೇವೆ.

ಒಬ್ಬ ವ್ಯಕ್ತಿ ತನ್ನ ಸ್ಥಿರ ಅಥವಾ ಚರಾಸ್ತಿಯನ್ನು ಕಾನೂನು ಬದ್ಧವಾಗಿ ಉಡುಗೊರೆಯಾಗಿ ನೀಡಿ ಇದರ ಸಂಬಂಧ ಮಾಡುವ ಪ್ರಮಾಣ ಪತ್ರವನ್ನು ಗಿಫ್ಟ್ ಡೀಡ್ ಎಂದು ಹೇಳಲಾಗುತ್ತದೆ. ಇಲ್ಲಿ ದಾನ ಮಾಡುವರನ್ನು ಡೋನರ್ ಎಂದು ಕರೆಯುತ್ತೇವೆ. ದಾನ ಪಡೆದವನನ್ನು ಡೋನಿ ಎನ್ನುತ್ತೇವೆ. ಒಮ್ಮೆ ಮಾಡಿದ ದಾನ ಪತ್ರವನ್ನು ಸಂಬಂಧಪಟ್ಟ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ಆಗ ಮಾತ್ರ ಅದಕ್ಕೆ ಕಾನೂನು ಮಾನ್ಯತೆ ಮತ್ತು ಅದನ್ನು ನ್ಯಾಯಾಲಯ ಮತ್ತು ಸಕ್ಷಮ ಪ್ರಾಧಿಕಾರಗಳು ಸಾಕ್ಷಿಯನ್ನಾಗಿ ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿ ಉಡುಗೊರೆಯಾಗಿ ನೀಡಿ ಗಿಫ್ಟ್ ಡೀಡ್ ಮಾಡಿದ ಬಳಿಕ ಆ ವಸ್ತುವಿನ ಮೇಲಿನ ಹಕ್ಕು ಕಳೆದುಕೊಳ್ಳುತ್ತಾನೆ.
ಒಬ್ಬ ವ್ಯಕ್ತಿ ಯಾವುದೇ ಪ್ರತಿಫಲಾಪೇಕ್ಷೆ ತನ್ನ ವಸ್ತು ಅಥವಾ ಆಸ್ತಿಯನ್ನು ಇನ್ನೊಬ್ಬರಿಗೆ ಕೊಟ್ಟು ಅದರ ಮೇಲಿನ ಹಕ್ಕನ್ನು ಕಳೆದುಕೊಳ್ಳವುದೇ ಗಿಫ್ಟ್ ಡೀಡ್ ಅಂತಲೂ ಹೇಳಲಾಗುತ್ತದೆ.
ಸ್ವತ್ತು ಹಸ್ತಾಂತರ ಕಾಯ್ದೆ ಕಲಂ 122 ರ ಅನ್ವಯ ಯಾವದೇ ಸ್ಥಿರ ಅಥವಾ ಚರ ಸ್ವತ್ತನ್ನು ತನ್ನ ಸ್ವ ಇಚ್ಛೆಯಿಂದ ಯಾವುದೇ ಪ್ರತಿಫಲ ಆಪೇಕ್ಷೆ ಇಲ್ಲದೆ ಯಾವುದೇ ವ್ಯಕ್ತಿ ಅದನ್ನು ದಾನವಾಗಿ ಕೊಡಬಹುದು. ಅದನ್ನು ದಾನ ಮಾಡಿವನ್ನು ವೈಯಕ್ತಿವಾಗಿ ಸ್ವ ಇಚ್ಛೆಯಿಂದ ಕೊಟ್ಟಿರಬೇಕು. ಯಾವುದೇ ಬಲವಂತಕ್ಕೆ, ಒತ್ತಡಕ್ಕೆ ಮಣಿದು ಗಿಫ್ಟ್ ನೀಡುವಂತಿಲ್ಲ. ಮಿಗಿಲಾಗಿ ದಾನವನ್ನು ಕಾನೂನು ಬದ್ಧವಾಗಿ ಹಸ್ತಾಂತರಿಸಲು ಸಮ್ಮತಿಸಬೇಕು.
ದಾನ ಮಾಡುವನನ್ನು ಡೋನರ್ ಎಂದು ಕರೆಯುತ್ತೇವೆ. ದಾನ ಪಡೆದವರನ್ನು ಡೋನಿ ಎಂದು ಕರೆಯಲಾಗುತ್ತದೆ.

ಕರ್ನಾಟಕ ನೋಂದಣಿ ಮತ್ತು ಮುದ್ರಾಂಕ ಕಾಯ್ದೆ :
ಕರ್ನಾಟಕ ಮುದ್ರಾಂಕ ಕಾಯ್ದೆ ಅನುಚ್ಛೇಧ 28 ರಲ್ಲಿನ ಮುದ್ರಾಂಕ ಶುಲ್ಕದ ಅಡಿಯಲ್ಲಿ ದಾನವನ್ನು ‘ಕುಟುಂಬ’ ಎಂಬ ಪರಿಭಾಷೆಯ ವ್ಯಾಪ್ತಿಯಲ್ಲಿ ಅಂದರೆ, ತಂದೆ, ತಾಯಿ, ಗಂಡ, ಹೆಂಡತಿ, ಮಗ, ಮಗಳು, ಸೊಸೆ, ಅಳಿಯ, ಸಹೋದರರು, ಅಕ್ಕ ತಂಗಿಯರು ಹಾಗೂ ಮೊಮ್ಮಕ್ಕಳು ಇವರಲ್ಲಿ ದಾನ ಮಾಡಬಹುದಾಗಿರುತ್ತದೆ. ಇದಕ್ಕೆ ಮುದ್ರಾಂಕ ಶುಲ್ಕದಲ್ಲಿ ಕನಿಷ್ಠ ಮುದ್ರಾಂಕ ಶುಲ್ಕ ಪಾವತಿಸಬೇಕಾಗುತ್ತದೆ. ಇದನ್ನು ಹೊರತು ಪಡಿಸಿ ಕುಟುಂಬೇತರ ಸದಸ್ಯರು ಬಂದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ ಕಲಂ 20 ರ ಅನ್ವಯ ಮುದ್ರಾಂಕ ಶುಲ್ಕವನ್ನು ಸಂಬಂಧಪಟ್ಟ ಸ್ವತ್ತಿನ ಮಾರುಕಟ್ಟೆ ಮೌಲ್ಯದ ಶೇ. 6.5 ( ನೋಂದಣಿ ಮತ್ತು ಮುದ್ರಾಂಕ ಶುಲ್ಕ ) ಮುದ್ರಾಂಕ ಶುಲ್ಕವನ್ನು ಸ್ವತ್ತು ದಾನ ಪಡೆದವರು ಪಾವತಿಸಬೇಕಾಗುತ್ತದೆ. ದಾನ ಮಾಡಿದವರು ಮುದ್ರಾಂಕ ಶುಲ್ಕ ಪಾವತಿಸುವಂತಿಲ್ಲ.

ಗಿಫ್ಟ್ ಡೀಡ್ ನೋಂದಣಿ:
ದಾನಕ್ಕೆ ಒಳಗಾದ ಸ್ವತ್ತು ಯಾವ ಉಪ ನೋಂದಣಾಧಿಕಾರಿಗಳ ಕಚೇರಿ ವ್ಯಾಪ್ತಿಗೆ ಒಳಪಡುತ್ತದೆಯೋ ಆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಕಾಯ್ದೆ1908 ಕಲಂ 28 ರ ಅಡಿ ನಿಗದಿ ಪಡಿಸಿರುವ ಪ್ರದೇಶದಲ್ಲಿ ನೋಂದಾಯಿಸಬೇಕು. ನೋಂದಣಿ ಮಾಡದ ಗಿಫ್ಟ್ ಡೀಡ್ ( ದಾಸ್ತವೇಜಿಗೆ ) ಯಾವುದದೇ ಕಾನೂನು ಮಾನ್ಯತೆ ಇರುವುದಿಲ್ಲ . ಹಾಗೂ ಅದನ್ನು ಪರಿಗಣಿತ ಸಾಕ್ಷಿಯನ್ನಾಗಿ ನ್ಯಾಯಾಲಯ ಪರಿಗಣಿಸುವುದಿಲ್ಲ. ಉಪ ನೋಂದಣಾಧಿಕಾರಿಗಳು ಗಿಫ್ಟ್ ಡೀಡ್ ನ್ನು ತಮ್ಮ ಕಚೇರಿಯಲ್ಲಿ ನೋಂದಣಿ ಮಾಡಿಕೊಡುತ್ತಾರೆ.

ಗಿಫ್ಟ್ ಡೀಡ್ ಶುಲ್ಕ: Registration fee for Gift Deed: 
ದಾನ ಪತ್ರ ನೋಂದಣಿ ಕುಟುಂಬ ಸದಸ್ಯರ ನಡುವೆ ಆಗಿದ್ದಲ್ಲಿ, ಪಾವತಿಸಬೇಕಾದ ಮುದ್ರಾಂಕ ಶುಲ್ಕ
ಬಿಬಿಎಂಪಿ ಅಥವಾ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ರೂ. 5000 ರೂ,ನಗರ ಪ್ರದೇಶ ಪಟ್ಟಣ ಪಂಚಾಯಿತಿ ರೂ. 2000ಇವರೆರಡೂ ಹೊರತು ಪಡಿಸಿದ ಪ್ರದೇಶಕ್ಕೆ ರೂ. 1000ಕುಟುಂಬ ಸದಸ್ಯರು ಅಲ್ಲದ ಉಡುಗೊರೆ ಪತ್ರ ನೋಂದಣಿಗೆ ಆ ಸ್ವತ್ತಿನ( ಸ್ಥಿರ ಅಥವಾ ಚಾರಸ್ತಿ ) ಮಾರುಕಟ್ಟೆ ಮೌಲ್ಯ ನಿರ್ಧರಿಸಿರುತ್ತದೆ.

ಗಿಫ್ಟ್ ಡೀಡ್ ರದ್ದು: gift deed cancellation: 

ಒಮ್ಮೆ ಗಿಫ್ಟ್ ಡೀಡ್ ಮಾಡಿದ ಬಳಿಕ ಅದನ್ನು ರದದು ಪಡಿಸುವುದು ತುಂಬಾ ಕಷ್ಟ. ಗಿಫ್ಟ್ ನೀಡಿದವರು ಮತ್ತು ಪಡೆದವರು ಇಬ್ಬರೂ ಪರಸ್ಪರ ಸಮ್ಮತಿಸಿದ್ರೆ ಮಾತ್ರೆ, ಕರ್ನಾಟಕ ನೋಂದಣಿ ಕಾಯಿದೆ ಸೆಕ್ಷನ್ 14 ರದ್ದು ಪಡಿಸಬಹುದು. ಒಂದು ವೇಳೆ ಗಿಫ್ಟ್ ಡೀಡ್ ಮಾಡಿಕೊಟ್ಟ ವ್ಯಕ್ತಿ ಅದನ್ನು ರದ್ದು ಪಡಿಸಲು ಇಚ್ಛಿಸಿದಲ್ಲಿ, ಗಿಫ್ಟ್ ಮಾಡಿಸಿಕೊಂಡ ವ್ಯಕ್ತಿ ನಿರಾಕರಿಸಿದ್ರೆ, ಆಗ ಕೋರ್ಟ್ ಮೊರೆ ಹೋಗಬೇಕು. ಸಕಾರಣ ಆಧರಿಸಿ ಕೋರ್ಟ್‌ ಗೆ ಹೋಗಿ ರದ್ದು ಪಡಿಸಬೇಕು.

ಮಾದರಿ ಗಿಫ್ಟ್ ಡೀಡ್ ಡ್ರಾಫ್ಟ್ : Gift Deed Format: 
ಗಿಫ್ಟ್ ಡೀಡ್ ಮಾಡುವಾಗ, ಡೋನರ್ ಹೆಸರು, ವಯಸ್ಸು, ವಿಳಾಸ, ವೃತ್ತಿ ಮತ್ತು ಜಾರಿ ದಿನಾಂಕವನ್ನು ಮೊದಲ ಪ್ಯಾರಾದಲ್ಲಿ ಉಲ್ಲೇಖ ಮಾಡಬೇಕು. ಎರಡನೇ ಪ್ಯಾರಾದಲ್ಲಿ ಡೋನಿ ( ಉಡುಗೊರೆ ಪಡೆಯುತ್ತಿರುವ ವ್ಯಕ್ತಿ ) ವಿಳಾಸ, ಸಂಬಂಧ ಮತ್ತಿತರ ವಿವರಗಳಗನ್ನು ದಾಖಲಿಸಬೇಕು. ಆನಂತರ ಉಡುಗೊರೆ ಕೊಡುತ್ತಿರುವ ಆಸ್ತಿಯ ವಿವರವನ್ನು ಸಮಗ್ರವಾಗಿ ಬರೆಯಬೇಕು. ಅ ಬಳಿಕ ಶೆಡೂಲ್ಡ್ ನಲ್ಲಿ ಸ್ವಲ್ಪವೂ ವ್ಯತ್ಯಾಸವಾಗದಂತೆ ಸರಿಯಾದ ವಿವರಗಳನ್ನು ನಮೂದಿಸಬೇಕು. ಗಿಫ್ಟ್ ಡೀಡ್ ನೋಂದಣಿಗೆ ಇಬ್ಬರು ಸಾಕ್ಷಿದಾರರು ನೋಂದಣಾಧಿಕಾರಿಯ ಸಮಕ್ಷಮ ಸಹಿ ಮಾಡಬೇಕು. ಈ ಅಂಶಗಳನ್ನು ತಪ್ಪಾಗದಂತೆ ಸೂಕ್ಷ್ಮವಾಗಿ ನಮೂದಿಸಬೇಕು.
ಗಿಫ್ಟ್ ಡೀಡ್ ಪತ್ರದ ಮಾದರಿ:

Related News

spot_img

Revenue Alerts

spot_img

News

spot_img