Revenue Facts ಇದು ಅಚ್ಚ ಕನ್ನಡದ ವೆಬ್ ತಾಣ. ಎಷ್ಟೋ ಮಂದಿ ಜೀವನದಲ್ಲಿ ಒಂದು ಸೂರು ಕಟ್ಟಿಕೊಳ್ಳಬೇಕು ಎಂದು ಕನಸು ಕಾಣುತ್ತಾರೆ. ಜೀವನ ಪರ್ಯಂತ ದುಡಿದು ಹಣ ಕೂಡಿಡುತ್ತಾರೆ. ಆಫರ್ ಹೆಸರಿನಲ್ಲಿ ಹದ್ದಿನ ರೀತಿ ಬರುವ ಕೆಲವು ರಿಯಲ್ ಎಸ್ಟೇಟ್ ಕಂಪನಿಗಳು ಹಣ ಪಡೆದು ಮೋಸ ಹೋಗುತ್ತವೆ. ಹೌದು ನಿವೇಶನ, ನಿವೇಶನ ಖರೀದಿ ಬಗ್ಗೆ ಕಾನೂನು ಅರಿವು ಇಲ್ಲದ ಎಷ್ಟೋ ಮಂದಿ ಇವತ್ತು ಬೀದಿ ಪಾಲಾಗಿದ್ದಾರೆ. ಹೀಗಾಗಿ ಜನರಿಗೆ ಬೋಗಸ್ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳ ಬಗ್ಗೆ ಅರಿವು ಮೂಡಿಸುವ ಜತೆಗೆ ಲಾಭದಾಯಕ. ವಿವಾದ ರಹಿತ ನಿವೇಶನ, ಮನೆ, ಜಮೀನು ಖರೀದಿ ಮಾಡುವ ಸತ್ಯಾಂಶಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ರೆವಿನ್ಯೂ ಫ್ಯಾಕ್ಟ್ಸ್ ಹುಟ್ಟು ಹಾಕಲಾಗಿದೆ. ಅಂದಹಾಗೆ ಇಲ್ಲಿ ಜನ ಸಾಮಾನ್ಯರಿಗೆ ಕಾನೂನು ಸಲಹೆ ನೀಡಲು, ಮೋಸ ಹೋಗದಂತೆ ಎಚ್ಚರಿಕೆ ವಹಿಸಲು ನಿವೃತ್ತ ಕಂದಾಯ ಅಧಿಕಾರಿಗಳು, ನಿವೃತ್ತ ನೋಂದಣಾಧಿಕಾರಿಗಳು, ವಕೀಲರು, ನಿವೃತ್ತ ಪೊಲೀಸ್ ಅಧಿಕಾರಿಗಳ ತಂಡವನ್ನು Revenue Facts ಒಳಗೊಂಡಿದೆ. ಒಟ್ಟಾರೆಯಾಗಿ ಹೇಳಬೇಕಾದರೆ, ಮನೆ, ನಿವೇಶನ, ಕಂದಾಯ ಸೇವೆಯ ಬಗ್ಗೆ ಅರಿವು ಮೂಡಿಸುವುದು ನಮ್ಮ ಮುಖ್ಯ ಉದ್ದೇಶ.
ಇನ್ನು ನಮ್ಮಲ್ಲಿ ಹಿಂದೂ, ಮುಸ್ಲಿಂ, ಪಾರ್ಸಿ, ಸಿಖ್, ಭೌದ್ಧ ಧರ್ಮಗಳು ಇದ್ದರೂ ಸಂಪ್ರದಾಯ ವಿಚಾರಕ್ಕೆ ಬಂದರೆ ವಾಸ್ತು ನಿರಾಕರಿಸುವ ವರ್ಗ ತುಂಬಾ ಅಪರೂಪ. ಮನೆ, ನಿವೇಶನ, ಭೂಮಿ ಖರೀದಿ ವಿಚಾರ ಬಂದಾಗ ವಾಸ್ತು ಹೊರತು ಪಡಿಸಿಯಾರೂ ಖರೀದಿ ಮಾಡಲ್ಲ. ವಾಸ್ತುಗೆ ನಮ್ಮ ಸಮುದಾಯ ಅಷ್ಟು ಮಹತ್ವ ಕೊಡುತ್ತದೆ. ಇವತ್ತಿನ ದಿನ ಮಾನದಲ್ಲಿ ವಾಸ್ತು ಹೆಸರಿನಲ್ಲಿ ಅವಾಸ್ತವಗಳನ್ನು ಜನರಿಗೆ ಹೇಳಿ ಎಡವಟ್ಟು ಮಾಡುತ್ತಿರುವರು ಅನೇಕರು ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವುಗಳಿಗೆ ಮಣೆ ಹಾಕುವ ಜತೆಗೆ ಮನೆಯ ವಾಸ್ತು, ನಿವೇಶನ ವಾಸ್ತು, ಮಹಾದ್ವಾರ ಕುರಿತ ತಜ್ಞ ವಾಸ್ತುಶಾಸ್ತ್ರರಿಂದಲೇ ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ Revenue Facts ಜನರ ಮುಂದಿಡಲಿದೆ. ವೇದಿಕ್ ವಾಸ್ತು ಕುರಿತ ನೈಜ ವರದಿಗಳ ಮೂಲಕ ಜನ ಸಾಮಾನ್ಯರ ಅಂಗೈಯನಲ್ಲಿಯೇ ವಾಸ್ತು ಸಿಗುವಂತೆ ಮಾಡುವುದು ಮೂಲ ಉದ್ದೇಶ.
ಸೇವೆ:
ಇವತ್ತಿನ ಡಿಜಿಟಲ್ ಲೋಕದಲ್ಲಿ ಯಾವ ಸೇವೆಯನ್ನೂ ಬೇಕಾದರೂ ಮನೆ ಬಾಗಿಲಿಗೆ ತಲುಪಿಸಬಹುದು. ಕಾನೂನು ಸಲಹೆ, ನಿವೇಶನ, ಮನೆ ಖರೀದಿ ಸಲಹೆ, ಮನೆ – ನಿವೇಶನ ಮೌಲ್ಯದ ವಿಶ್ಲೇಷಣಾ ವರದಿ, ನೋಂದಣಿ, ಸೇರಿದಂತೆ ಹಲವು ಮಹತ್ವದ ಸೇವೆಗಳನ್ನು ಜನರ ಮನೆ ಬಾಗಿಲು ತಲುಪಿಸುವ ಆನ್‌ಲೈನ್ ಸೇವೆ ಕೂಡ ರೆವಿನ್ಯೂ ಫ್ಯಾಕ್ಟ್ಸ್ ಕೊಡಲಿದೆ ಎಂಬುದು ಮತ್ತೊಂದು ಮಹತ್ವದ ಸಂಗತಿ.
ನೇರವಾಗಿ ಸಂಪರ್ಕಿಸಿ:
ರಿಯಲ್ ಎಸ್ಟೇಟ್ ಪ್ರಾಜೆಕ್ಟಗಳು, ಅವುಗಳ ಲಾಭ ನಷ್ಟದ ಅನ್ವೇಷಣೆ, ನೋಂದಣಿ, ವಾಜ್ಯ ರಹಿತ ನಿವೇಶನ ಖರೀದಿ ಕುರಿತ ಸಲಹೆ, ರಿಯಲ್ ಎಸ್ಟೇಟ್ ವಂಚನೆ ಪ್ರಕರಣಗಳ ಬಗ್ಗೆ ಜನ ಸಾಮಾನ್ಯರು ರೆವಿನ್ಯೂ ಫ್ಯಾಕ್ಟ್ಸ್ ನೇರವಾಗಿ ಸಂಪರ್ಕಿಸಬಹುದು.
Contacts:
Nagarabhavi, Bengauru
6363386332