21.8 C
Bengaluru
Sunday, October 6, 2024

ಪ್ರಧಾನಿ ಮೋದಿಗೆ ಭೂತಾನ್‌ನಿಂದ ‘ಅತ್ಯುನ್ನತ ನಾಗರಿಕ ಪ್ರಶಸ್ತಿ’

ಬೆಂಗಳೂರು;ಭೂತಾನ್(Bootan) ಸರ್ಕಾರವು ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಆರ್ಡರ್ ಆಫ್ ಡ್ರುಕ್ ಗ್ಯಾಲ್ಲೋ'(Order of Druk Gallo) ಪ್ರಶಸ್ತಿಯನ್ನು ಘೋಷಿಸಿದೆ.ಭೂತಾನ್’ನ ಅತ್ಯುನ್ನತ ನಾಗರಿಕ ಗೌರವಕ್ಕೆ ಭಾಜನರಾದ ಮೊದಲ ವಿದೇಶಿ ರಾಷ್ಟ್ರ ಮುಖ್ಯಸ್ಥ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಭೂತಾನ್’ನಿಂದ ‘ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೊ’ ಪ್ರಶಸ್ತಿಯನ್ನ ಪಡೆದಿರುವುದು ಗೌರವದ ಸಂಗತಿ.ಇಂದು ನನ್ನ ಜೀವನದಲ್ಲಿ ಬಹಳ ದೊಡ್ಡ ದಿನವಾಗಿದೆ, ನನಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲಾಗಿದೆ. ಪ್ರತಿಯೊಂದು ಪ್ರಶಸ್ತಿಯು ವಿಶೇಷವಾಗಿದೆ, ಆದರೆ ನೀವು ಬೇರೆ ದೇಶದಿಂದ ಪ್ರಶಸ್ತಿಯನ್ನು ಸ್ವೀಕರಿಸಿದಾಗ, ಎರಡೂ ದೇಶಗಳು ಸರಿಯಾದ ಹಾದಿಯಲ್ಲಿ ಸಾಗುತ್ತಿವೆ ಎಂಬುದನ್ನು ಇದು ತೋರಿಸುತ್ತದೆ. ನಾನು ಇದನ್ನ 140 ಕೋಟಿ ಭಾರತೀಯರಿಗೆ ಅರ್ಪಿಸುತ್ತೇನೆ ಇದಕ್ಕಾಗಿ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.ಪ್ರಶಸ್ತಿ ಸ್ಥಾಪನೆಯಾದಾಗಿನಿಂದ, ಈ ಪ್ರಶಸ್ತಿಯನ್ನ ಕೇವಲ ನಾಲ್ಕು ಗಣ್ಯ ವ್ಯಕ್ತಿಗಳಿಗೆ ನೀಡಲಾಗಿದೆ. ಈ ಹಿಂದೆ 2008ರಲ್ಲಿ ರಾಯಲ್ ಕ್ವೀನ್ ಅಜ್ಜಿ ಆಶಿ ಕೆಸಾಂಗ್ ಚೋಡೆನ್ ವಾಂಗ್ಚುಕ್ ಈ ಪ್ರಶಸ್ತಿಗೆ ಭಾಜನರಾಗಿದ್ದರು. 2008 ರಲ್ಲಿ ಗೌರವಾನ್ವಿತ ಜೆ ತ್ರಿಜುರ್ ಟೆನ್ಜಿನ್ ಡೆಂಡಪ್ (ಭೂತಾನ್ ನ 68 ನೇ ಜೆ ಖೆನ್ಪೋ) ಮತ್ತು 2018 ರಲ್ಲಿ ಗೌರವಾನ್ವಿತ ಜೆ ಖೆನ್ಪೊ ಟ್ರುಲ್ಕು ಎನ್ಗಾವಾಂಗ್ ಜಿಗ್ಮೆ ಚೋಡ್ರಾ. ಜೆ ಖೆನ್ಪೋ ಭೂತಾನ್ ನ ಕೇಂದ್ರ ಸನ್ಯಾಸಿ ಸಂಸ್ಥೆಯ ಮುಖ್ಯ ಮಠಾಧೀಶರಾಗಿದ್ದಾರೆ.

Related News

spot_img

Revenue Alerts

spot_img

News

spot_img