20.8 C
Bengaluru
Saturday, July 27, 2024

ವೋಟರ್ ಐಡಿಯಲ್ಲಿ ವಿವರಗಳನ್ನು ತಿದ್ದುಪಡಿ ಮಾಡುವುದು ಹೇಗೆ,ಚುನಾವಣಾ ಕಾರ್ಡ್ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ

# amend details # Voter ID, #apply for amendment # election card

ಬೆಂಗಳೂರು;ಮತದಾರರ ಗುರುತಿನ ಚೀಟಿಯಲ್ಲಿ(Voter ID Card) ಸರಿಯಾದ ವಿವರಗಳನ್ನು ಹೊಂದಿರುವುದು ಅತ್ಯಂತ ಮಹತ್ವದ್ದಾಗಿದೆ.ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಮತದಾರರು ಚುನಾವಣಾ ಚೀಟಿಯಲ್ಲಿ ತಮ್ಮ ಹೆಸರು, ವಿಳಾಸ ಮುಂತಾದ ವಿವರಗಳನ್ನು ನವೀಕರಿಸಬಹುದು. ಸಿಸ್ಟಮ್ ದೋಷಗಳಿಂದಾಗಿ ಹೆಚ್ಚಿನ ಮತದಾರರ ಐಡಿ ಕಾರ್ಡುಗಳಲ್ಲಿ ತಪ್ಪಾದ ವಿವರಗಳಿರುತ್ತವೆ,ಇಂದು, ಎಲ್ಲವೂ ಆನ್‌ಲೈನ್‌(Online) ನಲ್ಲಿ ಸುಲಭವಾಗಿ ನಡೆಯುತ್ತಿದೆ. ವ್ಯಾಪಾರ, ಶಿಕ್ಷಣ, ಆರೋಗ್ಯ ಸೇವೆಗಳು – ಹೀಗೆ ಎಲ್ಲದರಲ್ಲೂ ಆನ್‌ಲೈನ್‌ನ ಪಾತ್ರ ಹೆಚ್ಚುತ್ತಿದೆ. ಮತದಾರರ ಗುರುತಿನ ಚೀಟಿಯ (Voter ID) ನವೀಕರಣವೂ ಸಹ ಇದಕ್ಕೆ ಹೊರತಾಗಿಲ್ಲ. ಆನ್‌ಲೈನ್ ಮೂಲಕ ಮತದಾರರು ತಮ್ಮ ವೋಟರ್ ಐಡಿ ಮಾಹಿತಿಯನ್ನು ನವೀಕರಿಸಬಹುದಾಗಿದೆ.ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ ನಲ್ಲಿ ಆನ್ಲೈನ್ ನಲ್ಲಿ ಸರಿಪಡಿಸಬಹುದು. ಮತದಾರರು ಫಾರ್ಮ್ 8 ಅನ್ನು nvsp.in ನಲ್ಲಿ ಸಲ್ಲಿಸಬೇಕು. ಫಾರ್ಮ್ 8 ರಲ್ಲಿ ಮತದಾರರು ತಮ್ಮ ಹೆಸರು, ಛಾಯಾಚಿತ್ರ, ಜನ್ಮ ದಿನಾಂಕ, ಲಿಂಗ, ಸಂಬಂಧಿಗಳ ಹೆಸರನ್ನು ಸರಿಪಡಿಸಬಹುದು / ಬದಲಾಯಿಸಬಹುದು.

ವೋಟರ್ IDಯಲ್ಲಿ ತಿದ್ದುಪಡಿ ಮಾಡಬೇಕೆ?

http://www.nvsp.in/ ಗೆ ಭೇಟಿ ನೀಡಿ,

ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ನಮೂನೆ-8 ಭರ್ತಿ ಮಾಡುವ ಮೂಲಕ ಮತದಾರರ ಕಾರ್ಡ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಫೋನ್ ಮೂಲಕ ಮಾಡಬಹುದು.

ಹೆಸರು, ವಯಸ್ಸು, ವಿಳಾಸ, ಭಾವಚಿತ್ರ, ಹುಟ್ಟಿದ ದಿನಾಂಕ, ತಂದೆ/ಗಂಡನ ಹೆಸರು ತಿದ್ದುಪಡಿ ಮಾಡಬಹುದಾಗಿದೆ.

ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಕೆಲ ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ ನ ಫಾರ್ಮ್ 8 ಗೆ ಪ್ರವೇಶಿಸಿ.

ನಿಮ್ಮ ರಾಜ್ಯ, ಜಿಲ್ಲೆ, ವಿಧಾನಸಭೆ ಕ್ಷೇತ್ರವನ್ನು ಆಯ್ಕೆ ಮಾಡಿ.

ನಿಮ್ಮ ಹೆಸರು ಮತ್ತು ಚುನಾವಣಾ ರೋಲ್ ವಿವರಗಳನ್ನು ಒದಗಿಸಿ.

ನೀವು ಸರಿಪಡಿಸಲು ಬಯಸುವ ನಮೂದುಗಳನ್ನು ಮೇಲೆ(ಹೆಸರು, ವಯಸ್ಸು, ವಿಳಾಸ, ಲಿಂಗ, ಜನ್ಮದಿನಾಂಕ ಇತ್ಯಾದಿ) ಟಿಕ್ ಮಾಡಿ.

ಸರಿಪಡಿಸಲು ಬಯಸುವ ವಿವರಗಳ ಸರಿಯಾದ ಮಾಹಿತಿ ಒದಗಿಸಿ.

ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.

ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಿ.

ನಿಮ್ಮ ಪ್ರಸ್ತುತ ಸ್ಥಳವನ್ನು ಉಲ್ಲೇಖಿಸಿ & CAPTCHA ಯನ್ನು ನಮೂದಿಸಿ.

ಅಪ್ಲಿಕೇಶನ್ ಅನ್ನು ಪೂರ್ಣಗೊಳಿಸಲು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

 

Related News

spot_img

Revenue Alerts

spot_img

News

spot_img