21.2 C
Bengaluru
Tuesday, December 3, 2024

ದಿನಕ್ಕೆ ರೂ.151 ಪಾವತಿ ಮಾಡಿದ್ರೆ 31 ಲಕ್ಷ ರೂ. ಪಡೆಯಬಹುದು.

ನವದೆಹಲಿ : ಹೆಣ್ಣುಮಕ್ಕಳಿರುವ ತಂದೆ-ತಾಯಿಗೊಂದು ಸಿಹಿ ಸುದ್ದಿ ಇದೆ.ಎಲ್​ಐಸಿ(LIC) ಹೆಣ್ಣು ಮಕ್ಕಳಿಗಾಗಿ ಉತ್ತಮ ಯೋಜನೆ ತಂದಿದೆ. ಹೆಸರು ‘ಎಲ್‌ಐಸಿ ಕನ್ಯಾದಾನ ನೀತಿ(Kannyadana policy). ಈ ಯೋಜನೆಯಲ್ಲಿ ನೀವು ಪ್ರತಿದಿನ 151 ರೂಪಾಯಿಗಳನ್ನು ಠೇವಣಿ ಮಾಡಿದರೆ, ನೀವು ಮುಕ್ತಾಯದ ಸಮಯದಲ್ಲಿ 31 ಲಕ್ಷ ರೂಪಾಯಿಗಳನ್ನು ಪಡೆಯುತ್ತೀರಿ.1 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹೆಣ್ಮಕ್ಕಳ ಹೆಸರಿನಲ್ಲಿ ಪಾಲಕರು ಪಡೆಯಬಹುದಾದ ಎಲ್​ಐಸಿ(LIC) ಕನ್ಯಾದಾನ್ ಸ್ಕೀಮ್​ನಲ್ಲಿ ಹಲವು ಫೀಚರ್​ಗಳಿದ್ದು, ಹೆಣ್ಮಗುವಿನ ಭವಿಷ್ಯಕ್ಕೆ ಹೇಳಿಮಾಡಿಸಿದ ಯೋಜನೆಯಾಗಿದೆ.ಪಿಂಚಣಿ(Pension) ಪಡೆಯಲು, ಜೀವ ವಿಮ ಪಾಲಿಸಿ ಸೇರಿದಂತೆ ಇನ್ನಿತರ ಸಣ್ಣ ಉಳಿತಾಯದ ಯೋಜನೆಗಳನ್ನು LIC ಪರಿಚಯಿಸುತ್ತಿದೆ.ನೀವು ಕನಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚಿನ ‌ಲಾಭ ಗಳಿಸಬಹುದಾಗಿದೆ‌. ಇಲ್ಲಿ ನೀವು ಪ್ರತಿದಿನ ಒಂದಿಷ್ಟು ಮೊತ್ತವನ್ನ ಠೇವಣಿ(Deposit) ಇಡುವುದರಿಂದ ಮದುವೆಯ ಖರ್ಚು ವೆಚ್ಚಗಳಿಗೆ, ಶಿಕ್ಷಣಕ್ಕೆ ಸಹಾಯವಾಗಬಹುದು.ಎಲ್ ಐಸಿ(LIC) ಕನ್ಯಾದಾನ ಪಾಲಿಸಿ ಖರೀದಿಸಬೇಕಾದರೆ ಕನಿಷ್ಠ 30 ವರ್ಷ ವಯಸ್ಸಾಗಿರಬೇಕು. ಮತ್ತು ಮಗುವಿಗೆ 1 ವರ್ಷ. ಈಗಾಗಲೇ ಹೇಳಿದಂತೆ ಪಾಲಿಸಿ ಅವಧಿ 25 ವರ್ಷಗಳು. ಆದರೆ ಪ್ರೀಮಿಯಂ ಅನ್ನು 22 ವರ್ಷಗಳವರೆಗೆ ಪಾವತಿಸಬೇಕು.ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಪ್ರೀಮಿಯಮ್(Premium) ಕಟ್ಟುವ ಅವಕಾಶ ಇದರಲ್ಲಿ ಇದ್ದು‌ಈ ಪಾಲಿಸಿಯ ಯಾವುದೇ ಮೊತ್ತಕ್ಕೂ ತೆರಿಗೆ ಭರಿಸುವುದಿಲ್ಲ.

ಅದೇ ರೀತಿ ಪಾಲಿಸಿಯ ಫಲಾನುಭವಿ ಅಪಘಾತದಲ್ಲಿ ಮೃತಪಟ್ಟರೆ ಕುಟುಂಬ ಸದಸ್ಯರಿಗೆ 10 ಲಕ್ಷ ರೂ ಪರಿಹಾರ ಕೂಡ ಸಿಗುತ್ತದೆ. ಈ ಪಾಲಿಸಿಯನ್ನು ನೀವು ಮಾಡುದಾದರೆ ಹತ್ತಿರದ ಶಾಖೆಯಲ್ಲಿ ಮಾಡಿಸಬಹುದು‌‌,ಹಾಗೆಯೆ ಕನ್ಯಾದಾನ ಪಾಲಿಸಿಯಲ್ಲಿ ದಿನಕ್ಕೆ ರೂ.121 ಠೇವಣಿ ಇಟ್ಟರೆ 27 ಲಕ್ಷ ರೂ. ಗಳಿಸಬಹುದು. ಎಲ್ಐಸಿ ಕನ್ಯಾದಾನ ಪಾಲಿಸಿಯು ವಿಮಾ ಯೋಜನೆಯನ್ನು ಸಹ ಹೊಂದಿದೆ. ಪಾಲಿಸಿದಾರನ ಹಠಾತ್ ಮರಣದ ಸಂದರ್ಭದಲ್ಲಿ ಕುಟುಂಬವು ಪ್ರೀಮಿಯಂ ಪಾವತಿಸಬೇಕಿಲ್ಲ. ವಿಮಾದಾರನ ತಂದೆ ಆಕಸ್ಮಿಕವಾಗಿ ಸಾವನ್ನಪ್ಪಿದರೆ 10 ಲಕ್ಷ ರೂ. ನೀಡಲಾಗುತ್ತದೆ. ನಿಮ್ಮ ಹೆಣ್ಣು ಮಗಳ ಉತ್ತಮ ಭವಿಷ್ಯಕ್ಕಾಗಿ ಇಂದೇ ಈ ಯೋಜನೆಯಲ್ಲಿ ಹೂಡಿಕೆಯ್ನನು ಮಾಡುವುದು ಉತ್ತಮ.ಕನ್ಯಾದಾನ ಪಾಲಿಸಿಯನ್ನು ಯಾವುದೇ LIC ಕಚೇರಿಯಿಂದ ಖರೀದಿಸಬಹುದು. ಇದಕ್ಕಾಗಿ ಗ್ರಾಹಕರು ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಬಹುದು. ಇದಲ್ಲದೆ, ಗ್ರಾಹಕರು LIC ಏಜೆಂಟ್‌ನಿಂದ ಕನ್ಯಾದಾನ ಪಾಲಿಸಿಯನ್ನು ಸಹ ಖರೀದಿಸಬಹುದು.ಕನ್ಯಾದಾನ ಪಾಲಿಸಿಯ (LIC Kanyadan Policy) ಮೂಲಕ ನೀವು ದಿನಕ್ಕೆ ರೂ.151 ಪಾವತಿ ಮಾಡಿದ್ರೆ ರೂ.4530 ಆಗಲಿದೆ. 25 ವರ್ಷ ಪೂರೈಸಿದ ನಂತರ ನೀವು 31 ಲಕ್ಷ ರೂ. ಪಡೆಯಬಹುದು. ಈ ಹಣವನ್ನು ‌ನೀವು ನಿಮ್ಮ ಮಗಳ ಮುಂದಿನ ವ್ಯಾಸಂಗಕ್ಕೆ ಅಥವಾ ಮದುವೆಗೆ ಬಳಸಬಹುದು.

Related News

spot_img

Revenue Alerts

spot_img

News

spot_img