21.8 C
Bengaluru
Sunday, October 6, 2024

ಲೋಕಸಭೆ ಚುನಾವಣೆ 2024 ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ;17 ಕ್ಷೇತ್ರಗಳ ಟಿಕೆಟ್‌ ಯಾರಿಗೆ

ಬೆಂಗಳೂರು;ಕಾಂಗ್ರೆಸ್ ಎರಡನೇ ಪಟ್ಟಿಯನ್ನು(Congress second list) ಬಿಡುಗಡೆ ಮಾಡಿದ್ದು, 17 ಕ್ಷೇತ್ರಗಳಲ್ಲಿ ಐವರು ಮಹಿಳೆಯರಿಗೆ ಮಣೆ ಹಾಕಿದೆ.ಮಾ. 8ರಂದು ಏಳು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿತ್ತು. ಈಗ 17 ಕ್ಷೇತ್ರಗಳಲ್ಲಿ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಉಳಿದಂತೆ 4 ಕ್ಷೇತ್ರಗಳಿಗೆ ಅಭ್ಯರ್ಥಿ ಬಾಕಿ ಇದೆ.ಕಾಂಗ್ರೆಸ್‌ ಇಂದು 57 ಮಂದಿಗೆ ಟಿಕೆಟ್ ಘೋಷಿಸಿದೆ. ಕರ್ನಾಟಕದ 17 ಕ್ಷೇತ್ರಗಳಿಗೆ ಒಮ್ಮೆಲೇ ಅಭ್ಯರ್ಥಿಗಳ ಘೋಷಣೆಯಾಗಿದೆ. ಈ ಬಾರಿ ಸಚಿವರ ಮಕ್ಕಳಿಗೆ & ನಾಯಕರ ಸಂಬಂಧಿಕರಿಗೆ ಮಣೆಹಾಕಲಾಗಿದೆ. ಸಚಿವರಾದ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ(ಚಿಕ್ಕೋಡಿ), ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ(ಬೆಂಗಳೂರು ದಕ್ಷಿಣ), ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ(ಬಾಗಲಕೋಟೆ), ಈಶ್ವ‌ರ್ ಖಂಡ್ರೆ ಪುತ್ರ ಸಾಗರ್‌(ಬೀದರ್) ಅವರನ್ನು ಕಣಕ್ಕಿಳಿಸಲಾಗಿದೆ.

ಲೋಕಸಭೆ ಚುನಾವಣೆ 2024 ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ

ಚಿತ್ರದುರ್ಗ- ಬಿ.ಎನ್.ಚಂದ್ರಪ್ಪ

ಬೆಳಗಾವಿ- ಮೃಣಾಲ್

ಚಿಕ್ಕೋಡಿ- ಪ್ರಿಯಾಂಕಾ ಜಾರಕಿಹೊಳಿ

ಬಾಗಲಕೋಟೆ- ಸಂಯುಕ್ತಾ ಪಾಟೀಲ್

ಧಾರವಾಡ- ವಿನೋದ್ ಅಸೂಟಿ

ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ

ಕೊಪ್ಪಳ- ರಾಜಶೇಖರ

ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ

ಬೀದರ್- ಸಾಗರ್ ಖಂಡ್ರೆ

ದಕ್ಷಿಣ ಕನ್ನಡ- ಪದ್ಮರಾಜ್

ಉಡುಪಿ ಚಿಕ್ಕಮಗಳೂರು-ಜಯಪ್ರಕಾಶ್ ಹೆಗ್ಡೆ

ಬೆಂಗಳೂರು ದಕ್ಷಿಣ- ಸೌಮ್ಯ ರೆಡ್ಡಿ

ಬೆಂಗಳೂರು ಸೆಂಟ್ರಲ್-ಮನ್ಸೂರ್ ಅಲಿಖಾನ್

ಬೆಂಗಳೂರು ಉತ್ತರ-ಪ್ರೊ.ರಾಜೀವ್ ಗೌಡ

ಮೈಸೂರು-ಎಂ.ಲಕ್ಷ್ಮಣ್

ರಾಯಚೂರು- ಕುಮಾರ ನಾಯಕ್

ಉತ್ತರ ಕನ್ನಡ- ಡಾ.ಅಂಜಲಿ ನಿಂಬಾಳ್ಕರ್‌

ಬಾಕಿ ಇರುವ ಕ್ಷೇತ್ರಗಳು ಯಾವುವು?
ಬಳ್ಳಾರಿ

ಚಾಮರಾಜನಗರ

ಚಿಕ್ಕಬಳ್ಳಾಪುರ

ಕೋಲಾರ

Related News

spot_img

Revenue Alerts

spot_img

News

spot_img