25.8 C
Bengaluru
Saturday, October 5, 2024

ರಾಜ್ಯ ಸರ್ಕಾರದಿಂದ ರೈತರಿಗೆ ಬಿಗ್ ಶಾಕ್;ಪಂಪ್‌ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್ ಸಹಿತ ಉಚಿತ ಯೋಜನೆ ಕೈಬಿಟ್ಟ ಸರ್ಕಾರ

# farmers # state government #dropped #free #scheme # transformer # pumpsets

ಬೆಂಗಳೂರು;ರಾಜ್ಯ ಸರ್ಕಾರ ಈ ಹಿಂದೆ ಕೃಷಿ ಪಂಪ್ ಸೆಟ್ ಗಳಿಗೆ ಟ್ರಾನ್ಸ್ ಫಾರ್ಮರ್ ಸಮೇತ ಉಚಿತವಾಗಿ ಮೂಲ ಸೌಕರ್ಯವನ್ನು ಒದಗಿಸುವ ಯೋಜನೆಯನ್ನು ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ ಸದ್ಯ ಸರ್ಕಾರ ಈ ಯೋಜನೆಯ ಕುರಿತು ರೈತರಿಗೆ ಶಾಕ್ ನೀಡಿದೆ.ಅಕ್ರಮ ಸಕ್ರಮ(Illegal is legal) ಯೋಜನೆಯಡಿ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ಟ್ರಾನ್ಸ್ ಫಾರ್ಮರ್(Transformer) ಸಹಿತ ಮೂಲ ಸೌಕರ್ಯ ನೀಡುವುದನ್ನು ಸರ್ಕಾರ ಕಡಿತಗೊಳಿಸಿದೆ,ಕೃಷಿ ಪಂಪ್ ಸೆಟ್(Agricultural pump set) ಗಳಿಗೆ ವಿದ್ಯುತ್ ಸಂಪರ್ಕ ಸಹಿತ ಟ್ರಾನ್ಸ್ ಫಾರ್ಮರ್ (ಟಿಸಿ) ಅನ್ನು ಸ್ವಂತ ಖರ್ಚಿನಲ್ಲೇ ಪಡೆಯಬೇಕಿದೆ.ಈ ಮೊದಲು ಅಕ್ರಮ ಸಕ್ರಮ ವಿದ್ಯುತ್ ಯೋಜನೆಯಡಿ ರೈತರಿಂದ ಪ್ರತಿ ಕೊಳವೆ ಬಾವಿಗೆ ಶುಲ್ಕದ ರೂಪದಲ್ಲಿ 24000 ರೂ. ಮಾತ್ರ ಕಟ್ಟಿಸಿಕೊಳ್ಳುತ್ತಿತ್ತು. ಸದ್ಯ ರಾಜ್ಯ ಸರ್ಕಾರ ಈ ಯೋಜನೆಯನ್ನು ರದ್ದು ಮಾಡಿದೆ.ಇಂಧನ ಇಲಾಖೆ ಆದೇಶ ಪ್ರಕಾರ 2023ರ ಸೆ.22ಕ್ಕೂ ಮುನ್ನ ವಿದ್ಯುತ್‌ ಸಂಪರ್ಕಕ್ಕಾಗಿ ನೋಂದಣಿ ಮಾಡಿಸಿರುವ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗಲ್ಲ. ಸೆ.22ರ ನಂತರ ನೋಂದಣಿಯಾದ ರೈತರಿಗೆ ವಿದ್ಯುತ್‌ ಸಂಪರ್ಕವು ದುಬಾರಿಯಾಗಲಿದೆ.

ಇದಕ್ಕೂ ಮೊದಲು ರಾಜ್ಯ ಸರ್ಕಾರದ ಶೀಘ್ರ ವಿದ್ಯುತ್ ಮತ್ತು ಅಕ್ರಮ ಸಕ್ರಮ ಯೋಜನೆ ರೂಪಿಸಿತ್ತು,ಕೃಷಿ ಪಂಪ್‌ಸೆಟ್‌ಗಳಿಗೆ ಫ್ರೀ ಟ್ರಾನ್ಸ್‌ಫಾರ್ಮರ್‌ ಜೊತೆಗೆ ಮೂಲಸೌಕರ್ಯ ಒದಗಿಸುವುದು ಸರಕಾರದ ಖಜಾನೆಗೆ ದೊಡ್ಡ ಆರ್ಥಿಕ ಹೊರೆಯಾಗಿತ್ತು. ಟ್ರಾನ್ಸ್‌ಫಾರ್ಮರ್‌ಗಳ ಖರೀದಿ, ದುರಸ್ತಿ, ನಿರ್ವಹಣೆ ಮತ್ತು ಬದಲಾವಣೆಗೆ ಇಂಧನ ಇಲಾಖೆಯು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಈ ಆರ್ಥಿಕ ಹೊರೆ ತಪ್ಪಿಸಲು ಸರಕಾರ, ಅಕ್ರಮ ಸಕ್ರಮ ಮತ್ತು ಶೀಘ್ರ ವಿದ್ಯುತ್‌ ಯೋಜನೆಯ ಸೌಕರ್ಯ ನಿಲ್ಲಿಸಲು ಮುಂದಾಗಿದೆ.ರಾಜ್ಯ ಸರ್ಕಾರ ಉಚಿತ ಟಿಸಿ‌ ನೀಡುವ ಯೋಜನೆಯನ್ನು ರದ್ದುಗೊಳಿಸಿದೆ. ರೈತರು ಹೊಸದಾಗಿ ಕೊಳವೆ ಬಾವಿ ಕೊರೆದ್ರೆ, ಸ್ವಂತ ಖರ್ಚಿನಲ್ಲಿಯೇ ಟಿಸಿ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಈಗ ಇದ್ದಕ್ಕಿದ್ದಂತೆ ಈ ಎರಡೂ ಯೋಜನೆಗಳನ್ನು ನಿಲ್ಲಿಸಲು ಹೊರಟಿರುವ ಸರಕಾರ ರೈತರನ್ನು ಆರ್ಥಿಕ ಇಕ್ಕಟ್ಟಿಗೆ ದೂಡಿದೆ.

Related News

spot_img

Revenue Alerts

spot_img

News

spot_img