21.2 C
Bengaluru
Tuesday, December 3, 2024

ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳ ತೆರವಿಗೆ BBMP ಆದೇಶ

#BBMP #banglore #unauthorised #flex #banners

ಬೆಂಗಳೂರು ಆ.15;ಬೆಂಗಳೂರು ನಗರದಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳನ್ನು ನಿಷೇಧಿಸುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದರು. ಅದರಂತೆ ಬಿಬಿಎಂಪಿಯಿಂದ ಬೆಂಗಳೂರಲ್ಲಿ ಪ್ಲೆಕ್ಸ್, ಬ್ಯಾನರ್ ಸಂಪೂರ್ಣ ನಿಷೇಧ ಮಾಡಿ ಅಧಿಕೃತವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.ತಪ್ಪಿತಸ್ಥರಿಗೆ ಪ್ರತಿ ಬ್ಯಾನರ್‌ಗೆ 50,000 ರೂ. ದಂಡ ವಿಧಿಸುವಂತೆ ಹೇಳಿತ್ತು.ಅದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪ್ಲೆಕ್ಸ್ ಬ್ಯಾನರ್ಸ್, ಫ್ಲಾಗ್, ಬಂಟಿಂಗ್ಸ್ ಇತ್ಯಾದಿಗಳನ್ನು ನಿಯಮಾನುಸಾರ ತೆರವುಗೊಳಿಸಿ ಅಂತಹವರ ವಿರುದ್ಧ ಕ್ರಮ ಜರುಗಿಸುವ ಸಂಬಂಧ ಬಿಬಿಎಂಪಿಯ ಅಧಿಕಾರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನೀಡಿ ಆದೇಶ ಹೊರಡಿಸಲಾಗಿರುತ್ತದೆ ಎಂದಿದ್ದಾರೆ.

Related News

spot_img

Revenue Alerts

spot_img

News

spot_img