20.8 C
Bengaluru
Thursday, December 5, 2024

ನಿಮ್ಮ ಭವಿಷ್ಯ ನಿಧಿ ಮೂಲಕ ನಿವೃತ್ತಿಯಲ್ಲಿ 72 ಲಕ್ಷ ಪಡೆಯಬಹುದು

ಬೆಂಗಳೂರು, ಜು. 20 : ಪ್ರತಿಯೊಬ್ಬರು ಉದ್ಯೋಗಿಗಳ ಭವಿಷ್ಯ ನಿಧಿ ಅವರ ಬದುಕಿನಲ್ಲಿ ಮಹತ್ವದ ಉಳಿತಾಯ ಹಣವಾಗಿರುತ್ತದೆ. ಇಪಿಎಫ್ ಎಷ್ಟಿದೆ ಎಂದು ವರ್ಷಾಂತ್ಯದಲ್ಲಿ ಪರಿಶೀಲಿಸಬಹುದು. ಇಪಿಎಫ್ ಖಾತೆಗೆ ಸಂಬಳದ ಶೇ.12 ರಷ್ಟು ಹಣವನ್ನು ಪ್ರತಿ ತಿಂಗಳು ಜಮಾ ಮಾಡಲಾಗುತ್ತದೆ. ಕಂಪನಿಗಳು ಸಂಬಳ ಪಡೆಯುವವರ ಖಾತೆಗೆ ಕಂಪನಿಗಳು ಹಣವನ್ನು ಸಂದಾಯ ಮಾಡುತ್ತವೆ. ನಿಮ್ಮ ಸಂಬಳದ ವಂತಿಕೆ ಹಾಗೂ ಕಂಪನಿಯೂ ವಂತಿಕೆಯನ್ನು ಸೇರಿಸಿ, ಇಂತಿಷ್ಟು ಎಂದು ಹಣ ನಿಮ್ಮ ಇಪಿಎಫ್ ಖಾತೆಗೆ ಸಂದಾಯವಾಗುತ್ತದೆ.

ನಿಮ್ಮ ಪಿಎಫ್ ಹಣವನ್ನು ಹಿಂಪಡೆಯಬೇಕಿದ್ದರೆ, ಮೊದಲಿಗೆ ಕೆವೈಸಿ ಪ್ರಕ್ರಿಯೆಗಳನ್ನು ಮುಗಿಸಿ. ನಂತರ ಆನ್ ಲೈನ್ ಮೂಲಕ ಪಿಎಫ್ ಹಣವನ್ನು ಹಿಂಪಡೆಯಿರಿ. ಅಗತ್ಯಕ್ಕೆ ಹಣ ಬೇಕಿದ್ದರೆ, ಪಿಎಫ್ ಹಣದಲ್ಲಿ ಸ್ವಲ್ಪ ಮೊತ್ತವನ್ನಷ್ಟೇ ಹಿಂಪಡೆಯಬಹುದು. ನಿವೃತ್ತಿ ಹೊಂದಿದ ಬಳಿಕ ಸಂಪೂರ್ಣವನ್ನು ಪಡೆಯುವ ಅವಕಾಶವಿರುತ್ತದೆ. ಆದರೆ, ಈ ಪಿಎಫ್‌ ಹಣವನ್ನು ನೀವು ಒಂದು ಬಾರಿಯೂ ಪಡೆಯದಿದ್ದರೆ, ನಿಮ್ಮ ನಿವೃತ್ತಿಯಲ್ಲಿ ಬರೋಬ್ಬರಿ 72 ಲಕ್ಷ ರೂಪಾಯಿಯನ್ನು ಒಟ್ಟಿಗೆ ಪಡೆಯಬಹುದು.

ನಿಮ್ಮ ಸಂಬಳ ಕನಿಷ್ಠ 20 ಸಾವಿರ ರೂಪಾಯಿ ಎಂದು ತಿಳಿಯೋಣ. ಅಲ್ಲಿಗೆ ನಿಮಗೆ 35 ವರ್ದಿಂದ 58 ವರ್ಷದ ವರೆಗೂ ನಿಮ್ಮ ಪಿಏಫ್‌ ಖಾತೆಯಿ<ದ ನೀವು ಹಣವನ್ನು ಹಿಂಪಡೆಯದೇ ಇದ್ದಲ್ಲಿ. ನಿಮ್ಮ ಸಂಬಳದ ಉಳಿತಾಯದ ಹಣ, ಕಂಪನಿ ನೀಡಿದ ಹಣ ಹಾಗೂ ಇದಕ್ಕೆ ಸಂದ ಬಡ್ಡಿ ಎಲ್ಲವೂ ಸೇರಿ ಒಟ್ಟು 72 ಲಕ್ಷ ರೂಪಾಯಿ ಪಿಎಫ್‌ ಭವಿಷ್ಯ ನಿಧಿ ಮೂಲಕ ಸಿಗುತ್ತದೆ. ಅದಕ್ಕೆ ಹೇಳುವುದು ನಿಮ್ಮ ಪಿಎಫ್‌ ಖಾತೆಯಲ್ಲಿ ಆದಷ್ಟು ಹಣ ಹಿಂಪಡೆಯದೇಯೇ, ಕೊನೆಯವರೆಗೂ ಹಾಗೆ ಉಳಿಸಿಕೊಳ್ಳಿ ಎಂದು. ಆಗ ದೊಡ್ಡ ಮೊತ್ತದ ಹಣ ನಿಮ್ಮ ಕೈ ಸೇರುವುದರಲ್ಲಿ ಅನುಮಾನವೇ ಇಲ್ಲ.

Related News

spot_img

Revenue Alerts

spot_img

News

spot_img