26.8 C
Bengaluru
Thursday, July 18, 2024

World’s Powerful Passport: ವಿಶ್ವದ ಶಕ್ತಿಶಾಲಿ ಪಾಸ್‌ಪೋರ್ಟ್ ಪಟ್ಟಿ ಬಿಡುಗಡೆ

#World’s #Powerful #Passport # List #Released

ನವದೆಹಲಿ;ಪಾಸ್‌ಪೋರ್ಟ್‌ ಕೂಡ ಒಂದು ಪ್ರಬಲ ವೈಯಕ್ತಿಕ ದಾಖಲೆಯಾಗಿದೆ.ರಾಷ್ಟ್ರೀಯ ಸರ್ಕಾರವು ತನ್ನ ದೇಶದ ನಾಗರೀಕನಿಗೆ ಇನ್ನೊಂದು ದೇಶಕ್ಕೆ ಪ್ರವಾಸ ಮಾಡಲು ಹೋಗುವಾಗ ಆತನ ಗುರುತು ಮತ್ತು ರಾಷ್ಟ್ರೀಯತೆಯನ್ನು ಗುರುತಿಸಲು ನೀಡುವ ದಾಖಲೆ ಪಾಸ್‌ಪೋರ್ಟ್‌‌‌‌ಗಿದೆ.ಹೆನ್ಲಿ ಪಾಸ್​ಪೋರ್ಟ್​ ಇಂಡೆಕ್ಸ್(Henley Passport Index) 2024ರ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್(Powerful Passports) ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪು‌ರ್ ಮತ್ತು ಸ್ಪೇನ್ ಈ ಪಟ್ಟಿಯಲ್ಲಿ ಸೇರಿವೆ. ನೀವು ಈ ದೇಶಗಳ ಪಾಸ್‌ಪೋರ್ಟ್ ಹೊಂದಿದ್ದರೆ, ವೀಸಾ(Visa) ಇಲ್ಲದೆ ವಿಶ್ವದ 194 ದೇಶಗಳಿಗೆ ಪ್ರಯಾಣಿಸಬಹುದು. ಭಾರತೀಯ ಪಾಸ್‌ಪೋರ್ಟ್‌ನೊಂದಿಗೆ, ವೀಸಾ ಇಲ್ಲರ್ಥ್ಯದ ಆಧಾರದ ಮೇಲೆ 199 ಪಾಸ್‌ಪೋರ್ಟ್‌ಗಳನ್ನು ಹೊಂದಿದೆ. ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಂತಹ ಜನಪ್ರಿಯ ಪ್ರವಾಸಿ ತಾಣಗಳಿಗೆ ಭಾರತೀಯರಿಗೆ ದೆಯೂ ಸಹ 62 ದೇಶಗಳಿಗೆ ಪ್ರಯಾಣಿಸಬಹುದು ಹೀಗಾಗಿ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಪಟ್ಟಿಯಲ್ಲಿ ಭಾರತ 85 ನೇ ಸ್ಥಾನವನ್ನು ಪಡೆದುಕೊಂಡಿದೆ.ಏಷ್ಯಾದ ಪ್ರಬಲ ರಾಷ್ಟ್ರವಾಗಿರುವ ಚೀನಾ ಹಲವಾರು ಯುರೋಪಿಯನ್ ರಾಷ್ಟ್ರಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡಿದ ನಂತರ 66 ರಿಂದ 64 ಕ್ಕೆ ಏರಿಕೆ ಕಂಡಿದೆ.

ಯಾವ ದೇಶದ ಪಾಸ್​ಪೋರ್ಟ್​ ಯಾವ ಸ್ಥಾನದಲ್ಲಿದೆ?

1. ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ್, ಸ್ಪೇನ್ (194 ದೇಶಗಳಿಗೆ ವೀಸಾ ಫ್ರೀ)
2. ಫಿನ್ಲ್ಯಾಂಡ್, ದಕ್ಷಿಣ ಕೊರಿಯಾ, ಸ್ವೀಡನ್ (193 ದೇಶಗಳು)
3. ಆಸ್ಟ್ರಿಯಾ, ಡೆನ್ಮಾರ್ಕ್, ಐರ್ಲೆಂಡ್, ನೆದರ್ಲ್ಯಾಂಡ್ಸ್ (192 ದೇಶಗಳು)
4. ಬೆಲ್ಜಿಯಂ, ಲಕ್ಸೆಂಬರ್ಗ್, ನಾರ್ವೆ, ಪೋರ್ಚುಗಲ್, ಯುನೈಟೆಡ್ ಕಿಂಗ್‌ಡಮ್ (191 ದೇಶಗಳು)
5. ಗ್ರೀಸ್, ಮಾಲ್ಟಾ, ಸ್ವಿಟ್ಜರ್ಲೆಂಡ್ (190 ದೇಶಗಳು)
6. ಜೆಕ್ ರಿಪಬ್ಲಿಕ್, ನ್ಯೂಜಿಲ್ಯಾಂಡ್, ಪೋಲೆಂಡ್ (189 ದೇಶಗಳು)
7. ಕೆನಡಾ, ಹಂಗೇರಿ, ಯುನೈಟೆಡ್ ಸ್ಟೇಟ್ಸ್ (188 ದೇಶಗಳು)
8. ಎಸ್ಟೋನಿಯಾ, ಲಿಥುವೇನಿಯಾ (187 ದೇಶಗಳು)
9. ಲಾಟ್ವಿಯಾ, ಸ್ಲೋವಾಕಿಯಾ, ಸ್ಲೊವೇನಿಯಾ (186 ದೇಶಗಳು)
10. ಐಸ್ಲ್ಯಾಂಡ್ (185 ದೇಶಗಳು)

Related News

spot_img

Revenue Alerts

spot_img

News

spot_img