20.8 C
Bengaluru
Thursday, December 5, 2024

ಲೋಕಸಭೆಯಲ್ಲಿ ಬಹುಮತದೊಂದಿಗೆ ಅಂಗೀಕಾರ ಪಡೆದ ಮಹಿಳಾ ಮೀಸಲು ವಿಧೇಯಕ;ಇಂದು ರಾಜ್ಯಸಭೆಯಲ್ಲಿ ಮಂಡನೆ

#womans #reservation #bill #passed #loksabha #majority

ನವದೆಹಲಿ: ದಶಕಗಳ ಬಹು ನಿರೀಕ್ಷೆಯ, ಮಹಿಳಾ ಮೀಸಲು ಸೌಲಭ್ಯದ ನಾರಿ ಶಕ್ತಿ ವಂದನಾ ಅಧಿನಿಯಮ-2023 ವಿಧೇಯಕಕ್ಕೆ ಲೋಕಸಭೆ ಬುಧವಾರ ಸಂಜೆ ಬಹುಮತದೊಂದಿಗೆ ಅಂಗೀಕರಿಸಲಾಯಿತು. ಆ ಮೂಲಕ ದೇಶದ ಶಾಸನ’ ಸಭೆಗಳಲ್ಲಿ ಮಾತೆಯರು, ಸೋದರಿಯರಿಗೆ ಶೇ.33ರಷ್ಟು ಮೀಸಲು ಸೌಲಭ್ಯ ಒದಗಿಸಿ ಕೊಡುವ ವಿಧೇಯಕ್ಕೆ ಮೊದಲ ಜಯ ಸಿಕ್ಕಿದೆ. ವಿಧೇಯಕ ರಾಜ್ಯಸಭೆಯಲ್ಲಿ ಗುರುವಾರವೇ ಮಂಡನೆಯಾಗಿ ಅಲ್ಲೂ ಅಂಗೀಕಾರ ಪಡೆಯುವ ಎಲ್ಲ ಸಾಧ್ಯತೆಗಳಿವೆ.ಸಂಸತ್‍ನಲ್ಲಿ ಬುಧವಾರ ಸುಮಾರು 8 ಗಂಟೆಗಳ ಚರ್ಚೆಯ ಬಳಿಕ ಲೋಕಸಭೆ ಸ್ವೀಕರ್ ಓಂ ಬಿರ್ಲಾ ಅವರು ನಾರಿ ಶಕ್ತಿ ವಂದನ್ ವಿಧೇಯಕವನ್ನು ಮತಕ್ಕೆ ಹಾಕಿದರು. ಬಹುತೇಕ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ವು ಬೆಂಬಲಿಸಿದವು. ವಿಧೇಯಕದ ಪರವಾಗಿ 454 ಸಂಸದರು ಮತ ಚಲಾಯಿಸಿದರು.

ವಿಧೇಯಕಕ್ಕೆ ಲೋಕಸಭೆಯ 454 ಸಂಸದರು ಧ್ವನಿಮತದ ಮೂಲಕ ಬೆಂಬಲ ಸೂಚಿಸಿದರು. ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ಸೇರಿ ಪಕ್ಷದ ಇಬ್ಬರು ಸಂಸದರು ವಿಧೇಯಕದ ವಿರುದ್ಧ ಮತಹಾಕಿದ್ದಾರೆ. ಈ ವಿಧೇಯಕ ಸಂಸತ್ತಿನಲ್ಲಿ ಕಡಿಮೆ ಪ್ರಾತಿನಿಧ್ಯ ಹೊಂದಿರುವ ಒಬಿಸಿ ಮತ್ತು ಮುಸ್ಲಿಂ ಮಹಿಳೆಯರಿಗೆ ಏಕೆ ಕೋಟಾ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಓವೈಸಿ, ನಾನು ಈ ಕಾನೂನನ್ನು ವಿರೋಧಿಸುತ್ತೇನೆ ಎಂದಿದ್ದಾರೆ. ದೇಶದಲ್ಲಿ ಶೇಕಡ ಏಳರಷ್ಟು ಮುಸ್ಲಿಂ ಮಹಿಳೆಯರಿದ್ದಾರೆ. ಆದರೆ, ಈ ಲೋಕಸಭೆಯಲ್ಲಿ ಅವರ ಪ್ರಾತಿನಿಧ್ಯ ಕೇವಲ ಶೇ.0.7 ಮಾತ್ರ ಎಂದು ಅಸಮಾಧಾನ ಹೊರಹಾಕಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ 213 ಸದಸ್ಯರ ಬೆಂಬಲ ಅಗತ್ಯವಿತ್ತು.ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ನಾರಿ ಶಕ್ತಿ ವಂದನ್ ವಿಧೇಯಕವನ್ನು ಕೇಂದ್ರ ಸರ್ಕಾರ ನಾಳೆ ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಈ ಮಸೂದೆ ಮೂಲಕ ಸಂವಿಧಾನದ 330 ಮತ್ತು 332ನೇ ವಿಧಿಗಳಿಗೆ ತಿದ್ದುಪಡಿ ತರಲಾಗುತ್ತಿದೆ. ಈ ಮೂಲಕ ಲೋಕಸಭೆಯ 543 ಸ್ಥಾನಗಳ ಪೈಕಿ 181 ಸ್ಥಾನಗಳನ್ನು ಮತ್ತು ರಾಜ್ಯ ವಿಧಾನಸಭೆಗಳ 4,109 ಸ್ಥಾನಗಳ ಪೈಕಿ 1,370 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.ನೂತನ ಸಂಸತ್ ಭವನದಲ್ಲಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ಮಹಿಳಾ ಮೀಸಲಾಯಿತ ಮಸೂದೆಯನ್ನು ಮಂಗಳವಾರ ಮಂಡಿಸಿದ್ದರು.

Related News

spot_img

Revenue Alerts

spot_img

News

spot_img