#Woman ASI #caught # Lokayukta’s trap # accepting bribe
ಮೈಸೂರು;ಮಹಿಳಾ ಎಎಸ್ಐ ಶಕೀಲಾವತಿ ಎಂಬುವವರು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಹೆಚ್.ಡಿ.ಕೋಟೆ(H.D.Kote) ಪೊಲೀಸ್ ಠಾಣೆ ಎಎಸ್ಐ.ಕೆಂಡಗಣ್ಣ ನಾಯ್ಕ ಎಂಬುವರು ನಾಗೇಂದ್ರಗೆ 1.25 ಲಕ್ಷ ಸಾಲ ನೀಡಿದ್ದರು. ಈ ಮೊತ್ತದಲ್ಲಿ ನಾಗೇಂದ್ರ ಅವರು 25 ಸಾವಿರ ರೂಪಾಯಿ ವಾಪಸ್ ನೀಡಿದ್ದು, 1 ಲಕ್ಷ ರೂ. ಬಾಕಿ ಇರಿಸಿಕೊಂಡು ಕೆಂಡಗಣ್ಣ ಅವರಿಗೆ ಸತಾಯಿಸುತ್ತಿದ್ದನು. ಈ ಬಗ್ಗೆ ಕೆಂಡಗಣ್ಣ ಅವರು ಹೆಚ್.ಡಿ. ಕೋಟಿ ಠಾಣೆಗೆ ದೂರು ನೀಡಿದ್ದರು.ಸಾಲದ ಹಣ ಮರಳಿ ಕೊಡಿಸುವುದಕ್ಕೆ ಎಎಸ್ಐ(ASI) ಶಕೀಲಾವತಿ ಅವರು ಮೂರು ಸಾವಿರ ರೂಪಾಯಿ ಲಂಚಕ್ಕೆ(Bribe) ಬೇಡಿಕೆ ಇಟ್ಟಿದ್ದರು.ಈ ಕುರಿತಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಕೆಂಡಗಣ್ಣ ದೂರು ನೀಡಿದ್ದರು.ಅದರಂತೆ ಲಂಚದ ಹಣ ಕೆಂಡಗಣ್ಣ ಅವರಿಂದ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ(Lokayukta) ಅಧಿಕಾರಿಗಳು ಬಂಧಿಸಿದ್ದಾರೆ.