25.5 C
Bengaluru
Friday, September 20, 2024

The Registration of Births and Deaths act 1969 ಜನನ – ಮರಣ ಯಾಕೆ ನೋಂದಣಿ ಮಾಡಿಸಬೇಕು ?

#Birth Certificate #Death Certificate, #The Registration of Births and Deaths act 1969,
ಬೆಂಗಳೂರು, ಡಿ. 03: ಭಾರತ ಮೂಲದ ದಂಪತಿಗೆ ವಿದೇಶದಲ್ಲಿ ಮಗು ಜನಿಸಿದರೆ ಭಾರತದಲ್ಲಿ ಜನನ ಪ್ರಮಾಣ ಪತ್ರ ಪಡೆಯಬಹುದೇ ?ವಿದೇಶದಲ್ಲಿ ಮೃತಪಟ್ಟ ವ್ಯಕ್ತಿಯ ಮರಣ ಪ್ರಮಾಣ ಪತ್ರವನ್ನು ಭಾರತದಲ್ಲಿ ಪಡೆಯಬಹುದೇ ?

ಜನನ ಪ್ರಮಾಣ ಮತ್ತು ಮರಣ ಪ್ರಮಾಣ ಪತ್ರ ಯಾಕೆ ಬೇಕು ?
*ಕಾಡಿನಲ್ಲಿ ಜನಿಸುವ ಮಗುವಿನ ಜನನ ಮಾಹಿತಿಯನ್ನು ಯಾರಿಗೆ ನೀಡಬೇಕು ? ಹೇಗೆ ನೋಂದಣಿ ಮಾಡಿ ಜನನ ಪ್ರಮಾಣ ಪತ್ರ ಪಡೆಯಬೇಕು ?
*ಚಿಕಿತ್ಸೆ ಫಲಕಾರಿಯಾಗದೇ ಅಸ್ಪತ್ರೆಯಲ್ಲಿ ಜನಿಸಿದ ವ್ಯಕ್ತಿಯ ಮರಣವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೇ ?
*ಜನನ ಅಥವಾ ಮರಣ ಬಗ್ಗೆ ಮಾಹಿತಿ ನೀಡಿ ನೋಂದಣಿ ಮಾಡಿಸದಿದ್ದರೆ ಏನಾಗುತ್ತದೆ ? ಜನನ ಮತ್ತು ಮರಣ ಪ್ರಮಾಣದ ಪತ್ರದ ಬಗ್ಗೆ ಕಾಡುವ ಪ್ರಶ್ನೆಗಳು ಮೂಡುವ ಗೊಂದಲ ಒಂದೆರಡಲ್ಲ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

2021 ರಲ್ಲಿ ಉತ್ತರಖಂಡದಲ್ಲಿ ಸಂಭವಿಸಿದ ಪ್ರವಾಹದಿಂದ ಭಾರೀ ಅನಾಹುತ ಸಂಭವಿಸಿತ್ತು. ಸಾವಿರಾರು ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಯಾರು ಕಾಣೆಯಾಗಿದ್ದಾರೆ ಎಂಬುದನ್ನು ಪತ್ತೆ ಮಾಡಲು ಹರ ಸಾಹಸ ಮಾಡಬೇಕಾಯಿತು. ಎಷ್ಟೋ ಮಂದಿಯ ಗುರುತು ವಿವರ ಕೊನೆಗೂ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಹಾಯದಿಂದ ಉತ್ತರಖಂಡ ಸರ್ಕಾರ ಜನನ ಮತ್ತು ಮರಣ ಪ್ರಮಾಣ ನೋಂದಣಿ ಕಾಯಿದೆ 1969 ಕಟ್ಟು ನಿಟ್ಟಾಗಿ ಜಾರಿಗೆ ತಂದಿತು. ಆ ಬಳಿಕ ಸರ್ಕಾರ ಮೃತರ ಗುರುತು ಪತ್ತೆ ಮಾಡಿ ಪ್ರಮಾಣ ಪತ್ರ ನೀಡಿತು. ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಲು ಈ ಕಾಯಿದೆ ಜಾರಿ ತುಂಬಾ ಅನುಕೂಲವಾಯಿತು.

ಅಂದಹಾಗೆ ಒಬ್ಬ ಜೀವಂತ ವ್ಯಕ್ತಿ ನಾನಾ ಕಾರಣಗಳಿಗೆ ಜನನ ಪ್ರಮಾಣ ಪತ್ರವನ್ನು ನೀಡಬೇಕು. ಇನ್ನು ಮೃತ ವ್ಯಕ್ತಿಯ ಆಸ್ತಿ ಹಂಚಿಕೆ, ಪಾಲುದಾರಿಕೆಯನ್ನು ಸಂಬಂಧಿಕರು ಪಡೆಯಬೇಕಾದರೆ ವ್ಯಕ್ತಿ ಮೃತಪಟ್ಟಿರುವುದನ್ನು ಸಾಬೀತು ಮಾಡಲೇಬೇಕು. ಇದಕ್ಕೆ ಇರುವ ಏಕೈಕ ದಾರಿ ಮೃತ ವ್ಯಕ್ತಿಯ ಮರಣ ಪ್ರಮಾಣ ಪತ್ರ ಮಾಡಿಸುವುದು. ಅಂದರೆ ಒಬ್ಬ ವ್ಯಕ್ತಿಯ ಜೀವನದಲ್ಲಿಸರ್ಕಾರಿ ಉದ್ಯೋಗದಿಂದ ಹಿಡಿದು ಪ್ರತಿಯೊಂದಕ್ಕೂ ಒಂದಲ್ಲಾ ಒಂದು ರೂಪದಲ್ಲಿ ಜನನ ಪ್ರಮಾಣ ಪತ್ರದ ಅಗತ್ಯ ಬೀಳುತ್ತದೆ. ಹೀಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ತಮ್ಮ ಕುಟುಂಬದಲ್ಲಿ ಜನಿಸುವ ಮಕ್ಕಳನ್ನು ನೊಂದಣಿ ಮಾಡಿಸಬೇಕು. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಜನನ ಮತ್ತು ಮರಣ ಪ್ರಮಾಣ ಪತ್ರ ನೋಂದಣಿ ಕಾಯಿದೆ `1969 ಜಾರಿಗೆ ತಂದಿದೆ. ಈ ಕಾಯಿದೆಯ ಸ್ವರೂಪ, ಜನನ ಮತ್ತು ಮರಣ ಪ್ರಮಾಣ ಪತ್ರ ನೋಂದಣಿ, ಇಲಾಖೆಗಳ ನೋಂದಣಿ ಮತ್ತಿತರ ಪೂರ್ಣ ವಿವರ ರೆವಿನ್ಯೂ ಫ್ಯಾಕ್ಟ್ಸ್‌ ನಲ್ಲಿ ವಿವರಿಸಲಾಗಿದೆ.

ರಿಜಿಸ್ಟ್ರಾರ್ ಜನರಲ್ ನೇಮಕ ಮತ್ತು ಅಧಿಕಾರ: ಈ ಕಾಯಿದೆ ಸೆಕ್ಷನ್ 3 ರ ಪ್ರಕಾರ ಕೇಂದ್ರ ಸರ್ಕಾರ ರಿಜಿಸ್ಟ್ರಾರ್ ಜನರಲ್ ಅವರನ್ನು ನೇಮಕ ಮಾಡುತ್ತದೆ. ಇವರ ಕಾರ್ಯ ಭಾರತದಲ್ಲಿ ಜನಿಸುವ ಹಾಗೂ ಮೃತಪಡುವ ವ್ಯಕ್ತಿಗಳ ವಿವರ ನೋಂದಣಿ ಮಾಡಿ ಅಂಕಿ ಅಂಶ ಸಂಗ್ರಹಿಸಿ ಭಾರತ ಸರ್ಕಾರಕ್ಕೆ ಸಲ್ಲಿಸಬೇಕು. ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್‌ ಮೂಲಕ ಅರ್ಹ ವ್ಯಕ್ತಿಯನ್ನು ರಿಜಿಸ್ಟ್ರಾರ್ ಜನರಲ್ ಅವರನ್ನು ನೇಮಿಸುತ್ತದೆ.

ಅಧಿಕಾರ: ರಿಜಿಸ್ಟ್ರಾರ್ ಜನರಲ್ ಅವರು ಭಾರತದಲ್ಲಿ ಜನಿಸುವ ಹಾಗೂ ಮೃತಪಡುವ ವ್ಯಕ್ತಿಗಳ ನೋಂದಣಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡುತ್ತಾರೆ. ಅಲ್ಲದೇ ಜನನ ಮತ್ತು ಮರಣ ಕುರಿತ ವಾರ್ಷಿಕ ವರದಿಗಳನ್ನು ಸಲ್ಲಿಸುವ ಮುಖ್ಯ ರಿಜಿಸ್ಟ್ರಾರ್‌ ಅವರಿಂದ ವರದಿ ಸ್ವೀಕರಿಸಿ ಸರ್ಕಾರಕ್ಕೆ ಸಲ್ಲಿಸುತ್ತಾರೆ.

ಮುಖ್ಯ ರಿಜಿಸ್ಟ್ರಾರ್‌ ನೇಮಕ ಮತ್ತು ಅಧಿಕಾರ: ರಿಜಿಸ್ಟ್ರಾರ್‌ ಜನರಲ್‌ ಅಧೀನದಲ್ಲಿ ಕೆಲಸ ನಿರ್ವಹಿಸುವ ಮುಖ್ಯ ರಿಜಿಸ್ಟ್ರಾರ್‌ ಗಳನ್ನು ಕೇಂದ್ರ ಸರ್ಕಾರವೇ ನೇಮಿಸುತ್ತದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಇವರು ಕೆಲಸ ನಿರ್ವಹಿಸುತ್ತಾರೆ. ಆದರೆ ರಾಜ್ಯಗಳ ಮುಖ್ಯ ರಿಜಿಸ್ಟ್ರಾರ್‌ ಕಾರ್ಯ ನಿರ್ವಾಹಕರ ನೇಮಕ ವಿಚಾರದಲ್ಲಿ ರಾಜ್ಯ ಸರ್ಕಾರಗಳ ನಿರ್ದೇಶನ ಸ್ವೀರಿಸಲಾಗುತ್ತದೆ. ಇವರ ಮುಖ್ಯ ಕಾರ್ಯ ವೆಂದರೆ ರಾಜ್ಯಸ ಸರ್ಕಾರಕ್ಕೆ ನಿರ್ದೇಶನ ನೀಡುವುದು ಮತ್ತು ರಾಜ್ಯಗಳಲ್ಲಿ ಜನನ ಮತ್ತು ಮರಣ ನೋಂದಣಿ ಕಾರ್ಯವನ್ನು ಮೇಲುಸ್ತುವಾರಿ ಮಾಡುವುದು.

ಜಿಲ್ಲಾ ನೋಂದಣಾಧಿಕಾರಿ: ಕಾಯಿದೆ ಸೆಕ್ಷನ್‌ 6 ಪ್ರಕಾರ ಪ್ರತಿ ಜಿಲ್ಲೆಗೂ ಜಿಲ್ಲಾ ನೋಂದಣಾಧಿಕಾರಿಯನ್ನು ರಾಜ್ಯ ಸರ್ಕಾರ ನೇಮಕ ಮಾಡುತ್ತದೆ. ಅಲ್ಲದೇ ಜಿಲ್ಲೆಗಳಲ್ಲಿ ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿಗಳನ್ನು ಅವರ ಅರ್ಹತೆ ಮೇಲೆ ನೇಂಇಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೀಡುವ ಜತೆಗೆ ಅಂಕಿ ಅಂಶಗಳನ್ನು ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ನೀಡಬೇಕು.

ತಾಲೂಕು ನೋಂದಣಾಧಿಕಾರಿಗಳ ನೇಮಕ: ತಾಲೂಕು ಹಾಗೂ ಮುನಿಸಿಪಾಲಿಟಿ ಹಾಗೂ ಪಂಚಾಯಿತಿ ಹಂತದಲ್ಲಿ ತಾಲೂಕು ಮಟ್ಟದ ನೋಂದಣಾಧಿಕಾರಿಗಳನ್ನು ನೇಮಿಸಲಾಗುತ್ತದೆ. ರಾಜ್ಯ ಸರ್ಕಾರವೇ ಈ ಸಿಬ್ಬಂದಿಯನ್ನು ನೇಮಿಸಲಿದೆ. ಇವರು ತಮ್ಮ ವ್ಯಾಪ್ತಿಯಲ್ಲಿ ಜನಿಸುವ ಪ್ರತಿ ಮಗುವಿನ ಹೆಸರು ನೋಂದಣಿ ಮಾಡುವುದು. ಮೃತರ ವಿವರವನ್ನು ಸಂಗ್ರಹಿಸಿ ಪ್ರಮಾಣ ಪತ್ರ ನೀಡುವುದು . ಮುಖ್ಯ ರಿಜಿಸ್ಟ್ರಾರ್‌ ಅವರ ಸೂಚನೆ ಮೇರೆಗೆ ಉಪ ನೋಂದಣಾಧಿಕಾರಿಗಳು ಜನನ ಮತ್ತು ಮರಣ ಗಳನ್ನು ನಮೂದಿಸುತ್ತಾರೆ.
ಜನನ ಮತ್ತು ಮರಣ ಮಾಹಿತಿ ಯಾರು ನೀಡಬೇಕು?

ಯಾವುದೇ ಕುಟುಂಬದಲ್ಲಿ ಒಂದು ಮಗು ಜನಿಸಿದರೆ ಅಥವಾ ವ್ಯಕ್ತಿ ಮೃತಪಟ್ಟರೆ ಆ ಮನೆಯ ಮುಖ್ಯಸ್ಥರು ಸ್ಥಳೀಯ ನೋಂದಣಾಧಿಕಾರಿಗೆ ಮಾಹಿತಿಯನ್ನು ನೀಡಬೇಕು. ಅವರ ಗೈರು ಸಂದರ್ಭದಲ್ಲಿ ಕುಟುಂಭದ ಇತರೆ ಸದಸ್ಯ ಮಾಹಿತಿ ನೀಡಬೇಕು.

ಆಸ್ಪತ್ರೆ- ಆರೋಗ್ಯ ಕೇಂದ್ರ, ಹಾಸ್ಟಲ್, ಧರ್ಮಶಾಲೆ, ನರ್ಸಿಂಗ್ ಕೇಂದ್ರಗಳು ತಮ್ಮ ಕೇಂದ್ರಗಳಲ್ಲಿ ಜನಿಸುವ ಹಾಗೂ ಮೃತಪಡುವರ ವಿವರಗಳನ್ನು ಸ್ಥಳೀಯ ಪ್ರಾಧಿಕಾರಕ್ಕೆ ತಪ್ಪದೇ ವರದಿ ಮಾಡಬೇಕು. ಧರ್ಮಚತ್ರ, ಹಾಸ್ಟಲ್ ಧರ್ಮಶಾಲೆ, ಲಾಡ್ಜ್‌, ಟ್ರಾವೆಲ್ , ಸಾರ್ವಜನಿಕ ಸಾರಿಗೆ ಪ್ರದೇಶದಲ್ಲಿ ಜನಿಸವ ಹಾಗೂ ಮೃತಪಡುವರ ವಿವರಗಳನ್ನು ಸಂಬಂಧಪಟ್ಟ ನೋಂದಣಾಧಿಕಾರಿಗೆ ಮಾಹಿತಿ ಒದಗಿಸಬೇಕು.

ಜೈಲು: ಜೈಲಿನಲ್ಲಿ ಜನಿಸುವ ಹಾಗು ಮೃತಪಡುವರ ಬಗ್ಗೆ ಜೈಲಿನ ಅಧೀಕ್ಷಕರು ಮಾಹಿತಿಯನ್ನು ಒದಗಿಸಬೇಕು.
ನವಜಾತ ಶಿಶುಗಳು ಜನಿಸಿದರೆ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಸಿಕ್ಕು ಮಕ್ಕಳು ಹಾಗೂ ಮೃತದೇಹಗಳ ಬಗ್ಗೆಯೂ ನೊಂದಣಿ ಮಾಡಬೇಕು. ಅದರಲ್ಲೂ ಸಾರ್ವಜನಿಕ ಪ್ರದೇಶಲದಲ್ಲಿ ಸಿಗುವ ಅಪರಿಚಿತ ನವಜಾತ ಶಿಶುಗಳನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ವಹಿಸಿ ನವಜಾತ ಶಿಶುವಿನ ಮೃತ ದೇಹವನ್ನು ತೆರವುಗೊಳಿಸಬೇಕು. ಪೊಲೀಸರು ಈ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ತಿಳಿಸಬೇಕು.

ವಿಶೇಷ ಅವಕಾಶ: ಒಂದು ವೇಳೆ , ಕಾಡು- ಮೇಡಿನಲ್ಲಿ, ಅರಣ್ಯದ ಪ್ಲಾಂಟೇಷನ್‌ ಗಳಲ್ಲಿ ಜನಿಸುವ ಹಾಗೂ ಮೃತಪಡುವ ವ್ಯಕ್ತಿಗಳ ಬಗ್ಗೆ ಸೆಕ್ಷನ್ 9 ಪ್ರಕಾರ ಜಿಲ್ಲಾ ಅರಣ್ಯ ಅಧಿಕಾರಿ, ಪ್ಲಾಂಟೇಷನ್ ಸೂಪರ್‌ ವೈಸರ್‌ ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟವರಿಗೆ ವರದಿ ನೀಡಬೇಕು. ಪ್ಲಾಂಟೇಷನ್ ಅಂದರೆ ನಾಲ್ಕು ಎಕರೆಗಿಂತಲೂ ಹೆಚ್ಚು ಜಾಗ ಇರುವ ಪ್ರದೇಶದಲ್ಲಿ ವಾಸವಾಗಿದ್ದರೆ ಮಾತ್ರ ಈ ನಿಯಮ ಅನ್ವಯ ಆಗುತ್ತದೆ.

Regarding Births and Deaths of Citizens outside India: ಸೆ. 23 ಪ್ರಕಾರ, ಭಾರತದ ಹೊರಗೆ ಭಾರತದ ಪ್ರಜೆ ಮೃತಪಟ್ಟರೆ ಅಥವಾ ಭಾರತದ ದಂಪತಿಗೆ ಭಾರತ ಹೊರತು ಪಡಿಸಿದ ದೇಶದಲ್ಲಿ ಮಗು ಜನಿಸಿದರೆ ಅದರ ನೋಂದಣಿ ಪ್ರಕ್ರಿಯೆ ಬಗ್ಗೆ ಹೇಳುತ್ತದೆ. ಭಾರತದ ಹೊರಗೆ ಜನಿಸುವ ಮಕ್ಕಳ ಬಗ್ಗೆ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ವಿವರಗಳನ್ನು ಸಲ್ಲಿಸಬೇಕು. ಮೃತರ ಬಗ್ಗೆಯೂ ವಿವರಗಳನ್ನು ಸಲ್ಲಿಸಬೇಕು. ಒಂದು ವೇಳೆ ಹೊರ ದೇಶದಲ್ಲಿ ಮಗು ಜನಿಸಿದರೆ ಭಾರತತಕ್ಕೆ ಆಗಮಿಸಿದ 60 ದಿನದಲ್ಲಿ ರಿಜಿಸ್ಟ್ರಾರ್‌ ಜನರಲ್ ಅವರಿಗೆ ಮಾಹಿತಿ ನೀಡಿ ನೋಂದಣಿ ಮಾಡಬೇಕು.

ಜನನ ಮತ್ತು ಮರಣದ ಬಗ್ಗೆ ನೋಟಿಫಿಕೇಷನ್: ಸೆಕ್ಷನ್ 10 ರ ಪ್ರಕಾರ, ಕೆಲವು ಸಂದರ್ಭದಲ್ಲಿ ಜನನ ಮತ್ತು ಮರಣದ ಬಗಗೆ ಅಧಿಕೃತ ನೋಟಿಫಿಕೇಷನ್ ನೀಡಬೇಕು. ಮಾಲ್ಡೀವ್‌ ಅಥವಾ ಬೇರೆ ವೈದ್ಯಕೀಯ ಕಾರಣದಿಂದ ಇತರೆ ಕಾರಣದಿಂದ ವ್ಯಕ್ತಿ ಮೃತಪಟ್ಟರೆ ಅಂತಹ ವ್ಯಕ್ತಿಯ ಮೃತ ದೇಹ ಪರಭಾರೆ ಮಾಡಲು ಜಿಲ್ಲಾ ನೋಂದಣಾಧಿಕಾರಿಗೆ ಸಂಪೂರ್ಣ ಮಾಹಿತಿ ಒದಗಿಸಬೇಕು.

Delay in Birth Registration: ಈ ಕಾಯಿದೆಯ ಸೆಕ್ಷನ್ 13 ತಡವಾಗಿ ಜನನ ಮತ್ತು ಮರಣ ನೊಂದಣಿ ಮಾಡಿಸುವ ಬಗ್ಗೆ ವಿವರಿಸುತ್ತದೆ. ಯಾವುದೇ ಒಂದು ಮಗು ಜನಿಸಿದರೆ ಅಥವಾ ಒಬ್ಬ ವ್ಯಕ್ತಿ ಮೃತಪಟ್ಟರೆ, ಆ ದಿನದಿಂದ ಹಿಡಿದು 30 ದಿನಗಳ ಒಳಗೆ ನೊಂದಣಿ ಮಾಡಬೇಕು. ಮಾಡದಿದ್ದರೆ ದಂಡ ಪಾವತಿ ಮಾಡಬೇಕು.
ಒಂದು ವೇಳೆ ಮಗು ಜನಿಸಿದ ಅಥವಾ ವ್ಯಕ್ತಿ ಮೃತಪಟ್ಟ ಒಂದು ತಿಂಗಳಿನಿಂದ ಹಿಡಿದು ಒಂದು ವರ್ಷದ ಒಳಗೆ ನಿಗದಿತ ದಂಡವನ್ನು ಪಾವತಿ ಮಾಡಿ, ಸಕ್ಷಮ ಪ್ರಾಧಿಕಾರಕ್ಕೆ ಲಿಖಿತವಾಗಿ ಮಾಹಿತಿ ನಿಡಿ ಪ್ರಮಾಣ ಪತ್ರವನ್ನು ನೋಟರಿ ಮಾಡಿಸಿ ನೋಂದಣಿ ಮಾಡಿಸಬಹುದು.

ಮಗು ಜನಿಸಿದ ಅಥವಾ ವ್ಯಕ್ತಿ ಮೃತಪಟ್ಟ ಒಂದು ವರ್ಷದ ಅವಧಿಯಲ್ಲಿ ನೋಂದಣಿ ಮಾಡಿಸದಿದ್ದರೆ ಸಕ್ಷಮ ನ್ಯಾಯಾಲಯದಲ್ಲಿ ದಾವೆ ಹಾಕಿ ನ್ಯಾಯಾಲಯದ ನಿರ್ದೇಶನ ಮೇರೆಗೆ ನೋಂದಣಿ ಮಾಡಿಸಬೇಕು. ಆದರೆ ನ್ಯಾಯಾಲಯ ಇಲ್ಲಿ ಮೃತ ಅಥವಾ ಜನಿಸಿದ ವ್ಯಕ್ತಿಯ ಬಗ್ಗೆ ಸಂಪೂರ್ಣ ದಾಖೆಗಳನ್ನು ಪರಿಶೀಲಿಸಿ ಸರಿಯಾಗಿದ್ದರೆ ಮಾತ್ರ ಜನನ ಅಥವಾ ಮರಣ ನೋಂದಣಿಗೆ ಅದೇಶ ಮಾಡುತ್ತದೆ.ನಿಗದಿತ ಕಾಲಮಿತಿಯಲ್ಲಿ ಜನನ ಮತ್ತು ಮರಣ ವನ್ನು ನೋಂದಣಿ ಮಾಡಿಸದಿದ್ದರೆ ಈ ಕಾಯದೆಯ ಪ್ರಾಕಾರ ನೋಂದಣಿ ಮಾಡದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು.

ಜನನ ಪ್ರಮಾಣ ನೋಂದಣಿ ಪ್ರಕ್ರಿಯೆ ? ಕಾಯದೆ ಸೆಕ್ಷನ್ 8 ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ಬಗ್ಗೆ ಹೇಳುತ್ತದೆ. ಜನನ ಮತ್ತು ಮರಣ ಪ್ರಮಾಣ ನೋಂದಣಿ ಮಾಡಲು ಕೆಲವು ಅಧಿಕಾರಿಗಳಿಗೆ ಇರುವ ಜವಾಬ್ಧಾರಿ ಬಗ್ಗೆಯೂ ವಿವರಿಸುತ್ತದೆ. ಯಾವುದೇ ಒಬ್ಬ ವ್ಯಕ್ತಿ ಜನಿಸಿದರೆ ಅಥವಾ ಮೃತಪಟ್ಟರೆ ಮೌಖಿಕವಾಗಿ ಅಥವಾ ಲಿಖಿತವಾಗಿ ಅವರ ಹೆಸರು, ವಿಳಾಸ, ವಿವರವನ್ನು ನೀಡಿ ಸಹಿ ಮಾಡಬೇಕು. ಓದು ಬರಹ ಬರದಿದ್ದರೆ ಮೌಖಿಕವಾಗಿ ಹೇಳಿ ಪತ್ರಕ್ಕೆ ಸಹಿ / ಹೆಬ್ಬಟ್ಟು ಹಾಕಬೇಕು.

ದಂಡ ಪಾವತಿ: ಸೆಕ್ಷನ್ 23 ಜನನ ಮತ್ತು ಮರಣ ನೊಂದಣಿ ಮಾಡದಿದ್ದರೆ ವಿಧಿಸಬಹುದಾದ ದಂಡದ ಬಗ್ಗೆ ಹೇಳುತ್ತದೆ.ಯಾವುದೇ ವ್ಯಕ್ತಿಯ ಜನನ ಮತ್ತು ಮರಣದ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡುವುದು ಅವರ ಕರ್ತವ್ಯ. ಹೀಗಾಗಿ ಜನಿಸಿದ /ಮೃತಪಟ್ಟ ವ್ಯಕ್ತಿಯ ವಿವರ ನೀಡಬೇಕು. ನೀಡದಿದ್ದರೆ ದಂಡ ವಿಧಿಸಬಹುದು.

ಒಂದು ವೇಳೆ ನೋಂದಣಿಗಾಗಿ ಸುಳ್ಳು ಮಾಹಿತಿ ನೀಡಿದರೆ, ಅಥವಾ ಜನಿಸಿದ ಮಗು, ಮೃತಪಟ್ಟ ವ್ಯಕ್ತಿಯ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ ಸೆಕ್ಷನ್ 11 ರ ಪ್ರಕಾರ ಕ್ರಮ ಜರುಗಿಸಬಹುದು. ಜನನ ಮತ್ತು ಮರಣ ಪ್ರಮಾಣ ವಿವರ ನೋಂದಣಿ ಮಾಡದೇ ಕರ್ತವ್ಯಲೋಪ ಎಸಗಿದ ನೋಂದಣಾಧಿಕಾರಿಗಳಿಗೂ ದಂಡ ವಿಧಿಸಬಹುದು.
ಕ್ಲಾಸ್‌ 3 ಪ್ರಕಾರ ಜನಿಸಿದ ಮಗು ಅಥವಾ ಮೃತ ವ್ಯಕ್ತಿಯ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ, ವೈದ್ಯರು ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಇಲ್ಲದಿದ್ದರೆ ಅಂತಹ ವೈದ್ಯರಿಗೆ ದಂಡ ವಿಧಿಸಬಹುದು.
ಈ ಕಾಯ್ದೆ ಉಲ್ಲಂಘನೆ ಮಾಡಿ ಜನನ ಅಥವಾ ಮರಣ ನೋಂದಣಿ ಮಾಡಿಸದೇ ಇದ್ದರೆ, ನೋಂದಣಾಧಿಕಾರಿಗಳು ನೋಂದಣಿ ಮಾಡಿಕೊಳ್ಳದಿದ್ದರೆ ನ್ಯಾಯಾಲಯಗಳು ಅಂತಹ ಪ್ರಕರಣ ವಿಚಾರಣೆ ನಡೆಸಿ ದಂಡನೆ ಮಾಡಲು ನ್ಯಾಯಾಲಯಗಲಿಗೆ ಅಧಿಕಾರ ನೀಡಲಾಗಿದೆ

ದಾಖಲೆಗಳ ನಿರ್ವಹಣೆ: ಈ ಕಾಯಿದೆ ಸೆಕ್ಷನ್ 16 ಪ್ರಕಾರ ರಿಜಿಸ್ಟ್ರಾರ್‌ ಅವರು ತಮ್ಮ ವ್ಯಾಪ್ತಿಯ ಜನನ ನೋಂದಣಿ ಪುಸ್ತಕ ಹಾಗೂ ಮರಣ ನೋಂದಣಿ ಪುಸ್ತಕವನ್ನು ನಿರ್ವಹಣೆ ಮಾಡಬೇಕು. ಈ ಪುಸ್ತಕದಲ್ಲಿ ಜನನ ಮತ್ತು ಮರಣದ ವಿವರಗಳನ್ನು ನಮೂದಿಸಬೇಕು. ಅಲ್ಲದೇ ನೊಂದಣಿ ಮಾಡಿದ ವಿವರಗಳನ್ನು ರಿಜಿಸ್ಟ್ರಾರ್‌ ಅವರು ಮುಖ್ಯ ರಿಜಿಸ್ಟ್ರಾರ್‌ ಅವರಿಗೆ ಅಂಕಿ ಅಂಶಗಳನ್ನು ಸಲ್ಲಿಸಬೇಕು.ಇದು ಜನನ ಮತ್ತು ಮರಣ ನೋಂದಣಿ ಕಾಯಿದೆ ಕುರಿತು ಜನ ಸಾಮಾನ್ಯರಿಗೆ ಗೊತ್ತಿರಲೇಬೇಕಾದ ಸಂಗತಿಗಳು.

Related News

spot_img

Revenue Alerts

spot_img

News

spot_img