21.4 C
Bengaluru
Saturday, July 27, 2024

2024 ರ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ? ಸಂಪೂರ್ಣ ವಿಜೇತರ ಪಟ್ಟಿ ಇಲ್ಲಿದೆ

ನ್ಯೂಯಾರ್ಕ್:2024 ರ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು(Golden Globe Awards 2024) ಪ್ರಕಟಗೊಂಡಿದೆ. ಹಲವಾರು ವಿಭಾಗದ ವಿಜೇತರನ್ನು ಈಗಾಗಲೇ ಪ್ರಕಟಿಸಲಾಗಿದೆ .‘ಬಾರ್ಬಿ’ ಸಿನಿಮಾ ಮತ್ತು ಬಾಕ್ಸ್ ಆಫೀಸ್ ಸಾಧನೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡರೆ ‘ಓಪನ್‌ಹೈಮರ್’ ಪ್ರಮುಖ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.‘ಓಪನ್​​ಹೈಮರ್’ ಸಿನಿಮಾ 8 ವಿಭಾಗಗಳಲ್ಲಿ ಹಾಗೂ ‘ಬಾರ್ಬಿ’ ಸಿನಿಮಾ 9 ವಿಭಾಗಗಳಲ್ಲಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ (Golden Globe Awards 2024) ನಾಮ ನಿರ್ದೇಶನಗೊಂಡಿದ್ದವು.81ನೇ ಸಾಲಿನ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ (Golden Globe Awards 2024) ಕಾರ್ಯಕ್ರಮ ಭಾನುವಾರ ಸಂಜೆ (ಭಾರತೀಯ ಕಾಲಮಾನ ಸೋಮವಾರ ಬೆಳಿಗ್ಗೆ) ನಡೆದವು.ಅಮೆರಿಕದ ಲಾಸ್ ಏಂಜಲೀಸ್​ನಲ್ಲಿ ಈ ಅವಾರ್ಡ್ ಫಂಕ್ಷನ್ ನಡೆಯಿತು. ‘ಓಪನ್​​ಹೈಮರ್’ ಸಿನಿಮಾ 8 ವಿಭಾಗಗಳಲ್ಲಿ ಹಾಗೂ ‘ಬಾರ್ಬಿ’ (Barbie) ಸಿನಿಮಾ 9 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದವು. ಎರಡೂ ಸಿನಿಮಾಗಳು ಹಲವು ಪ್ರಶಸ್ತಿ ಗೆದ್ದಿವೆ.

ಈ ವರ್ಷದ ವಿಜೇತರ ಪಟ್ಟಿ ಇಲ್ಲಿದೆ:

ಓಪನ್‌ಹೈಮರ್ – ಅತ್ಯುತ್ತಮ ಮೋಷನ್ ಸಿನಿಮಾ ಪೂರ್ ಥಿಂಗ್ಸ್ – ಅತ್ಯುತ್ತಮ ಮೋಷನ್ ಸಿನಿಮಾ (ಮ್ಯೂಸಿಕಲ್) ದಿ ಬಾಯ್ ಅಂಡ್ ದಿ ಹೆರಾನ್ – ಅತ್ಯುತ್ತಮ ಮೋಷನ್ ಸಿನಿಮಾ (ಅನಿಮೆಟೆಡ್) ಬಾರ್ಬಿ – ಸಿನಿಮ್ಯಾಟಿಕ್ ಅಂಡ್ ಬಾಕ್ಸಾಫೀಸ್ ಸಾಧನೆ ಅನಾಟಮಿ ಆಫ್ ಎ ಫಾಲ್ – ಅತ್ಯುತ್ತಮ ಮೋಷನ್ ಸಿನಿಮಾ (ಇಂಗ್ಲಿಷೇತರ ಸಿನಿಮಾ) ಸಿಲಿಯನ್ ಮರ್ಫಿ – ಅತ್ಯುತ್ತಮ ನಟ (ಡ್ರಾಮ, ಓಪನ್‌ಹೈಮರ್) ಲಿಲಿ ಗ್ಲಾಡ್‌ಸ್ಟೋನ್ – ಅತ್ಯುತ್ತಮ ನಟಿ (ಡ್ರಾಮ, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್) ಎಮ್ಮಾ ಸ್ಟೋನ್ – ಅತ್ಯುತ್ತಮ ನಟಿ (ಮ್ಯೂಸಿಕಲ್, ಪೂರ್ ಥಿಂಗ್ಸ್) ಪಾಲ್ ಗಿಯಾಮಟ್ಟಿ – ಅತ್ಯುತ್ತಮ ನಟ (ಮ್ಯೂಸಿಕಲ್/ಕಾಮಿಡಿ, ದಿ ಹೋಲ್ಡೋವೆರ್ಸ್) ರಾಬರ್ಟ್ ಡೌನಿ ಜೂ. – ಅತ್ಯುತ್ತಮ ಪೋಷಕ ನಟ ( ಓಪನ್‌ಹೈಮರ್) ಡೇವಿನ್ ಜಾಯ್ ರಾಂಡೋಲ್ಫ್ – ಅತ್ಯುತ್ತಮ ಪೋಷಕ ನಟಿ (ದಿ ಹೋಲ್ಡೋವರ್ಸ್) ಕ್ರಿಸ್ಟೋಫರ್ ನೋಲನ್ – ಅತ್ಯುತ್ತಮ ನಿರ್ದೇಶಕ (ಓಪನ್‌ಹೈಮರ್) ಜಸ್ಟಿನ್ ಟ್ರೈಟ್, ಆರ್ಥರ್ ಹರಾರಿ – ಅತ್ಯುತ್ತಮ ಚಿತ್ರಕತೆ (ಅನಾಟಮಿ ಆಫ್ ದಿ ಫಾಲ್) ವಾಟ್ ವಾಸ್ ಐ ಮೇಡ್ ಫಾರ್ – ಬೆಸ್ಟ್ ಒರಿಜಿನಲ್ ಸಾಂಗ್ (ಬಾರ್ಬಿ) ಲುಡ್ವಿಗ್ ಗೊರಾನ್ಸನ್ – ಬೆಸ್ಟ್ ಒರಿಜಿನಲ್ ಸ್ಕೋರ್ (ಓಪನ್‌ಹೈಮರ್) ಸಕ್ಸೇಷನ್ – ಅತ್ಯುತ್ತಮ ಟಿವಿ ಸೀರಿಸ್ ( HBO/Max) ದಿ ಬೇರ್ – ಅತ್ಯುತ್ತಮ ಟಿವಿ ಸೀರಿಸ್ (ಮ್ಯೂಸಿಕಲ್) ಬೀಫ್ – ಅತ್ಯುತ್ತಮ ಟಿವಿ ಸೀರಿಸ್ (ಲಿಮಿಟೆಡ್ ಸೀರಿಸ್, ನೆಟ್‌ಫ್ಲಿಕ್ಸ್) ಸಾರಾ ಸ್ನೋಕ್ – ಅತ್ಯುತ್ತಮ ನಟಿ (ಟಿವಿ ಸೀರಿಸ್, ಸಕ್ಸೇಷನ್) ಕೀರನ್ ಕುಲ್ಕಿನ್ – ಅತ್ಯುತ್ತಮ ನಟ (ಟಿವಿ ಸೀರಿಸ್, ಸಕ್ಸೇಷನ್) ಆಯೊ ಎಡೆಬಿರಿ – ಅತ್ಯುತ್ತಮ ನಟಿ (ಟಿವಿ ಸೀರಿಸ್, ಮ್ಯೂಸಿಕಲ್) ಜೆರೆಮಿ ಅಲ್ಲೆನ್ ವೈಟ್ – ಅತ್ಯುತ್ತಮ ನಟ (ಟಿವಿ ಸೀರಿಸ್, ದಿ ಬೇರ್) ಅಲಿ ವೊಂಗ್ – ಅತ್ಯುತ್ತಮ ನಟಿ (ಟಿವಿ ಲಿಮಿಟೆಡ್ ಸೀರಿಸ್, ಬೀಫ್) ಸ್ಟೀವನ್ ಯೂನ್ – ಅತ್ಯುತ್ತಮ ನಟ (ಟಿವಿ ಲಿಮಿಟೆಡ್ ಸೀರಿಸ್, ಬೀಫ್) ಎಲಿಜಬೆತ್ ಡೆಬಿಕಿ – ಅತ್ಯುತ್ತಮ ಪೋಷಕ ನಟಿ (ಟಿವಿ, ದಿ ಕ್ರೌನ್) ಮ್ಯಾಥ್ಯೂ ಮ್ಯಾಕ್‌ಫಾಡೆನ್ – ಅತ್ಯುತ್ತಮ ಪೋಷಕ ನಟ (ಟಿವಿ, ಸಕ್ಸೆಷನ್) ರಿಕಿ ಗೆರ್ವೈಸ್, ರಿಕಿ ಗೆರ್ವೈಸ್ – ಬೆಸ್ಟ್ ಸ್ಟ್ಯಾಂಡಪ್ ಕಾಮಿಡಿ (ಆರ್ಮಗೆಡಾನ್)

Related News

spot_img

Revenue Alerts

spot_img

News

spot_img