ಸಾಮಾನ್ಯವಾಗಿ ಕೃಷಿ ಭೂಮಿಗೆ ಹಂದಿಕೊಂಡಂತೆ ಖರಾಬು ಜಮೀನು ಇರುತ್ತದೆ. ಕೃಷಿ ಜಮೀನು ಜತೆಗೆ ಕರಾಬು ಜಮೀನಿನಲ್ಲಿ ಸಹ ರೈತರು ಕೃಷಿ ಮಾಡಿ ಬೆಳೆ ಬೆಳೆಯುತ್ತಾರೆ. ತನ್ನದೇ ಜಮೀನು ಎಂಥಲೂ ಹೇಳಿಕೊಳ್ಳುತ್ತಾರೆ. ಆದರೆ ಕೃಷಿ ಜಮೀನಿಗೆ ಹೊಂದಿಕೊಂಡಿರುವ ಖರಾಬು ಜಮೀನು ಯಾವ ವರ್ಗಕ್ಕೆ ಸೇರಿದ್ದು ? ಅದರ ಮೇಲೆ ರೈತರಿಗೆ ಇರುವ ಹಕ್ಕು ಎಷ್ಟು ? ಅದರ ಅಸಲಿ ಮಾಲೀಕ ಯಾರು ? ಅದರ ಮಾರಾಟ ಪ್ರಕ್ರಿಯೆ ಹೇಗೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..
ಖರಾಬು ಭೂಮಿ ಅರ್ಥ:
ಖರಾಬು ಭೂಮಿ ಎಂದರೆ, ವ್ಯವಸಾಯಕ್ಕೆ ಉಪಯೋಗವಾಗದ ಜಮೀನು ಎಂದರ್ಥ. ಖರಾಬು ಜಮೀನಿನಲ್ಲಿ ಎರಡು ವಿಧ. ಒಂದು A ಖರಾಬು. ಮತ್ತೊಂದು B ಖರಾಬು.
A ಖರಾಬು ಜಮೀನು ಕೃಷಿ ಮಾಡುವ ರೈತನ ಜಮೀನಿನೊಡಗೆ ಇರುತ್ತದೆ. ಎ ಖರಾಬು ಭೂಮಿ ಅಥವಾ ಫುಟ್ ಖರಾಬು ಅಥವಾ ಪಾಟ್ ಖರಾಬು ಹೆಸರಿನಿಂದ ಕರೆಯುತ್ತೇವೆ. ಈ ಖರಾಬು ಜಮೀನಿನಲ್ಲಿ ಕೆಲ ಸಂದರ್ಭದಲ್ಲಿ ವ್ಯವಸಾಯ ಮಾಡಬಹುದು. ಸರ್ಕಾರಿ ಲೆಕ್ಕದಲ್ಲಿ ಖರಾಬು ಜಮೀನಿಗೆ ಭೂ ಕಂದಾಯ ಭೂ ಕಂದಾಯ ಪಾವತಿ ಮಾಡುವುದಿಲ್ಲ. ಆದರೆ, ಆ ಜಮೀನಿನಲ್ಲಿ ಬೆಳೆಯುವ ಬೆಲೆ, ಫಸಲನ್ನು ರೈತರು ಅನುಭವಿಸಬಹುದು. ಒಂದು ವೇಳೆ ಖರಾಬು ಜಮೀನನ್ನು ಮಾರಾಟ ಮಾಡಿದರೆ, ಅವನ ಜಮೀನಿನ ಜತೆಗೆ ಖರಾಬು ಜಮೀನಿಗೂ ಬೆಲೆ ಮಾತನಾಡಿಕೊಂಡು ಪರಭಾರೆ ಮಾಡುತ್ತಾರೆ. ಆದರೆ ಸರ್ಕಾರಿ ಲೆಕ್ಕದಲ್ಲಿ ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕ, ಭೂ ಕಂದಾಯ, ಆದಾಯ ತೆರಿಗೆ ಇನ್ನಿತರೆ ಯಾವುದೇ ಶುಲ್ಕಗಳನ್ನು ಖರಾಬು ಜಮೀನಿಗೆ ಕಟ್ಟುವುದಿಲ್ಲ.
ಉದಾಹರಣೆಗೆ, ಚವಳು ಭೂಮಿ. ಈ ಖರಾಬು ಜಮೀನಿಗೆ ಸರ್ಕಾರದ ಕಿಮ್ಮತ್ತು ಹಣ ಕಟ್ಟಿ ಭೂ ಮಾಲಿಕತ್ವ ಪಡೆಯಬಹುದು. ತನ್ನ ಉಪಯೋಗಕ್ಕೆ ರೈತ ಬದಲಾಯಿಸಿಕೊಳ್ಳಬಹುದು. ಇದನ್ನು ಬಳಕೆ ಖರಾಬು ಎಂದು ಕರೆಯುತ್ತೇವೆ. ಈ ಖರಾಬು ಜಮೀನು ಸರ್ಕಾರದ ಭೂ ದಾಖಲೆಗಳಲ್ಲಿ ಯಾವ ಮಾಲೀಕನ ಜತೆ ಇರುತ್ತದೆಯೋ ಅವನು ಆ ಜಮೀನನ್ನು ವರ್ಗಾವಣೆ ಮಾಡಿದಾಗ (ಯಾರಿಗೆ ಮಾರುತ್ತಾರೋ ಅವರಿಗೆ ಪರಭಾರೆ) ವರ್ಗಾವಣೆಯಾದವರಿಗೆ ಖರಾಬು ಭೂಮಿ ಸಹ ವರ್ಗಾವಣೆಯಾಗುತ್ತದೆ. ಎ ಖರಾಬು ಜಮೀನು ಇಷ್ಟವಾದರೆ, ರೈತನೊಬ್ಬ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ, ಸರ್ಕಾರ ಇಚ್ಛಿಸಿದರೆ ಆ ಜಮೀನನ್ನು ಸಂಬಂಧಪಟ್ಟ ಶುಲ್ಕಗಳನ್ನು ಪಾವತಿಸಿಕೊಂಡು ಮಾಲೀಕತ್ವವನ್ನು ವರ್ಗಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ.
B ಖರಾಬು:
ಜಮೀನನ್ನು ಸರ್ವೆ ಮಾಡಿದಾಗ ಕೃಷಿ ಉದ್ದೇಶಕ್ಕೆ ಅಥವಾ ಸಾಗುವಳಿಗೆ ಬಳಸಲಾಗದ ಭೂಮಿಯನ್ನು ಬಿ ಖರಾಬು ಭೂಮಿ ಎಂದು ಕರೆಯುತ್ತೇವೆ. ಕರ್ನಾಟಕ ಭೂ ಕಂದಾಯ ನಿಯಮ 1956 ರ ಅನ್ವಯ, ಯಾವ ಭೂಮಿ ಖರಾಬು ಎಂದು ಗುರುತಿಸಲಾಗಿರುತ್ತದೆಯೋ ಅದರ ಒಡೆತನ ಸರ್ಕಾರಕ್ಕೆ ಸೇರಿರುತ್ತದೆ.
ಬಿ ಖರಾಬು ಎಂದರೆ, ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟಿರುವ ಸರ್ಕಾರದ ಅಧಿಪತ್ಯದಲ್ಲಿರುವ ಜಮೀನನ್ನು ಬಿ ಖರಾಬು ಎಂದು ಕರೆಯುತ್ತೇವೆ. ಈ ಬಿ ಖರಾಬನ್ನು ಸಾರ್ವಜನಿಕ ಉದ್ದೇಶಕ್ಕೆ ಮಾತ್ರ ಉಪಯೋಗಿಸಲ್ಪಡುತ್ತದೆ. ಉದಾಹರಣೆಗೆ ಗುಡ್ಡ, ಕೆರೆ, ಸ್ಮಶಾನ ಜಾಗಗಳು. ಕೆಲವು ವಿಶೇಷ ಸಂದರ್ಭದಲ್ಲಿ ಬಿ ಖರಾಬು ಭೂಮಿಯನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ 2020 ರ ಅನ್ವಯ ಕೆಲವು ಷರತ್ತುಗಳೊಡನೆ ಬಿ ಖರಾಬು ಜಮೀನನ್ನು ಸಾರ್ವಜನಿಕ ಯೋಜನೆಗಳಿಗೆ ಬಳಕೆ ಮಾಡುವ ಅವಕಾಶ ಇರುತ್ತದೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಸರ್ಕಾರ ಈ ನಿರ್ಣಯ ಕೈಗೊಳ್ಳುತ್ತದೆ. ಜಮೀನಿನಲ್ಲಿ ಹಾದು ಹೋಗಿರುವ ಬಂಡಿದಾರಿ, ಕಾಲು ದಾರಿ ಕೂಡ ಬಿ ಕರಾಬು ವ್ಯಾಪ್ತಿಗೆ ಬರುತ್ತದೆ.
ಖರಾಬು ಜಮೀನು ಮೇಲಿನ ಹಕ್ಕು:
ಯಾವುದೇ ಒಬ್ಬ ರೈತನ ಕೃಷಿ ಜಮೀನಿಗೆ ಎ ಖರಾಬು ಹೊಂದಿಕೊಂಡಿದ್ದರೆ, ಅದರ ಅನುಭವದಾರ ಆ ರೈತನೇ ಆಗಿರುತ್ತಾನೆ. ಅದರ ಪರೋಕ್ಷ ಮಾಲೀಕನೂ ಹೌದು. ರೈತ ತನ್ನ ಒಡೆತನದ ಜಮೀನನ್ನು ಮಾರಾಟ ಮಾಡುವಾಗ ತನ್ನ ಜಮೀನಿಗೆ ಹೊಂದಿರುವ ಎ ಕರಾಬು ಜಮೀನನ್ನು ಅಧಿಕೃತವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಕ್ರಯಪತ್ರ ಮಾಡುವಾಗ, ವಿಭಾಗ ಪತ್ರ ಮಾಡುವಾಗ ಸಾಗುವಳಿ ಜಮೀನಿನ ಜತೆಗೆ ಕರಾಬು ಜಮೀನು ಉಲ್ಲೇಖಿಸುತ್ತಾರೆ. ಕಾನೂನು ಅನ್ವಯ ಬರೆದರೂ ಸಹ ಈ ಜಮೀನು ಯಾರ ಹೆಸರಿಗೂ ವರ್ಗಾವಣೆಯಾಗುವುದಿಲ್ಲ.