24.8 C
Bengaluru
Sunday, May 19, 2024

ಗ್ರಾಮ ಲೆಕ್ಕಾಧಿಕಾರಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

Lokayukta#Mandya#Villageaccountent#Bribe#Roopa ms
ಮಂಡ್ಯ ;ಮಂಡ್ಯ ನಗರದ ಗುತ್ತಲು ಗ್ರಾಮ ಲೆಕ್ಕಾಧಿಕಾರಿ (ವಿಎ)ಯೊಬ್ಬರು ಬುಧವಾರ ಬೆಳಿಗ್ಗೆಮಂಡ್ಯ ನಗರದ ಗುತ್ತಲು ಬಡಾವಣೆಯ ನಿವಾಸಿ ರೈತ ಆತ್ಮಾನಂದ ಎಂಬ ರೈತರೊಬ್ಬರಿಂದ 5 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಗ್ರಾಮ ಲೆಕ್ಕಾಧಿಕಾರಿ ಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.ಗ್ರಾಮ ಲೆಕ್ಕಾಧಿಕಾರಿ ರೂಪ ಎಂ.ಎಸ್ ಲೋಕಾಯುಕ್ತ ಬಲೆಗೆ ಬಿದ್ದವರು.ಆತ್ಮಾನಂದ ಅವರ ಜಮೀನಿನನ್ನು ಒಟ್ಟುಗೂಡಿಸಿ ಪೋಡಿ ಮಾಡಿ ಆರ್‌ಟಿಸಿ ಮಾಡಿಕೊಡಲು ರೂಪ ಅವರು 15 ಸಾವಿರ ರೂ. ಬೇಡಿಕೆ ಇಟ್ಟಿದ್ದು, ಬುಧವಾರ ಮುಂಗಡವಾಗಿ 5 ಸಾವಿರ ರೂ. ಪಡೆಯುತ್ತಿದ್ದಾಗ ಬಂಧನವಾಗಿದೆ ಎಂದು ತಿಳಿದು ಬಂದಿದೆ.ಲೋಕಾಯುಕ್ತ ಇನ್ಸ್’ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದ ತಂಡ ಮಂಡ್ಯ ನಗರದಲ್ಲಿ ರೈತನಿಂದ 5 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿ ಹಣ ಸಹಿತ ಅಧಿಕಾರಿಯನ್ನು ಬಂಧಿಸಲಾಗಿದೆ.ಲೋಕಾಯುಕ್ತ ಎಸ್ಪಿ ಪುಟ್ಟಮಾದಯ್ಯ,ಸಿಬ್ಬಂದಿಗಳಾದ ಶಂಕರ್, ಶರತ್, ಹೇಮಾವತಿ, ನಂದಿನಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

Related News

spot_img

Revenue Alerts

spot_img

News

spot_img