ಹಾವೇರಿ;ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ ಸೋಮವಾರ ಲಂಚ ಸ್ವೀಕರಿಸುವ ವೇಳೆ ತಾಲೂಕು ಉಪ ಖಜಾನೆ ಇಲಾಖೆಯ ಸಹಾಯಕ ಖಜಾನೆ ಅಧಿಕಾರಿ ಬಸವರಾಜ ಕಡೇಮನಿ ಮತ್ತು ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಅಮ್ಮಿನಬಾವಿ ಲಂಚ ಸ್ವೀಕರಿಸುವ ವೇಳೆ ಹಾವೇರಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ತಾಲೂಕಿನ ಹಳ್ಳೂರು ಗ್ರಾಮದ ಪಶು ಚಿಕಿತ್ಸಾಲಯದ ಬಿಲ್ ಪಾಸ್ ಮಾಡಲು ಇಬ್ಬರೂ ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿದ್ದರು.
ಆಸ್ಪತ್ರೆ ಪಶುವೈದ್ಯಾಧಿಕಾರಿ ಡಾ. ಅಮೃತರಾಜ ಜಿ.ಕೆ. ಜು. 11 ರಂದು ಖಜಾನೆ ಇಲಾಖೆಗೆ 5 ಬಿಲ್‌ಗಳನ್ನು ಮಂಜೂರಾತಿಗೆ ಸಲ್ಲಿಸಿದ್ದರು. ಈ ವೇಳೆ ಖಜಾನೆ ಅಧಿಕಾರಿಗಳು ಪ್ರತಿ ಬಿಲ್ ಮಂಜೂರಾತಿಗೆ 1200 ರೂಪಾಯಿ ಲಂಚ ನೀಡಲು ಬೇಡಿಕೆ ಇಟ್ಟಿದ್ದಾರೆ.ಇದೇ ವೇಳೆ ಅಮೃತರಾಜ ಜಿ.ಕೆ. ಪೊಲೀಸ್ ಠಾಣೆಗೆ ಇಬ್ಬರೂ ಅಧಿಕಾರಿಗಳ ಮೇಲೆ ಲಂಚ ಕೇಳಿದ ಆರೋಪದ ವಿರುದ್ಧ ದೂರು ನೀಡಿದ್ದರು. ಹಾಗೆಯೆ ಪಶುವೈದ್ಯಾಧಿಕಾರಿ ಅವರಿಂದ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರು ರೆಡ್ಹ್ಯಾಂಡಾಗಿ ಹಿಡಿದಿದ್ದಾರೆ.ಲೋಕಾಯುಕ್ತ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.