lokayukta#billapporved#2,5 lakhs#bribe#lokayutapolice
ಚಾಮರಾಜನಗರ ಏ 6: ಕೃಷಿ ಉಪಕರಣಗಳ ಬಿಲ್ ಮಂಜೂರು ಮಾಡುವುದಕ್ಕೆ ₹2.5 ಲಕ್ಷ ಪಡೆಯುತ್ತಿದ್ದ ಇಲ್ಲಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್ ಕುಮಾರ್, ತಾಂತ್ರಿಕ ಕೃಷಿ ಅಧಿಕಾರಿ ಸತೀಶ್ ಮತ್ತು ಹೊರಗುತ್ತಿಗೆಯ ಗ್ರೂಪ್ ಡಿ ನೌಕರ ಅರುಣ್ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. 70-80 ಫೈಲ್ ಗಳನ್ನು ಪೆಂಡಿಂಗ್ ಇಟ್ಟು ಲಂಚಕ್ಕೆ ಬೇಡಿಕೆ ಇಟ್ಟ ಕೃಷಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.ಬಿಲ್ ಮಂಜೂರು ಮಾಡುವುದಕ್ಕಾಗಿ ಕೃಷಿ ಅಧಿಕಾರಿ ಸತೀಶ್ ₹1.5 ಲಕ್ಷ, ಸಹಾಯಕ ನಿರ್ದೇಶಕ ಪ್ರವೀಣ್ ಕುಮಾರ್ ಅವರು ₹1 ಲಕ್ಷ ಲಂಚವನ್ನು ಕುಮಾರಸ್ವಾಮಿ ಬಳಿ ಕೇಳಿದ್ದರು.
ಬುಧವಾರ ಸಂಜೆ 4.10ರ ಸುಮಾರಿಗೆ ಇಬ್ಬರು ಕೇಳಿದ್ದ ಮೊತ್ತವನ್ನು ಡಿ ಗ್ರೂಪ್ ನೌಕರ ಅರುಣ್ ಕುಮಾರಸ್ವಾಮಿ ಅವರಿಂದ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಮೂವರನ್ನೂ ಬಂಧಿಸಿ, ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಟ್ರೇಡರ್ಸ್ ಮಾಲೀಕ ಕುಮಾರಸ್ವಾಮಿ ಲೋಕಾಯುಕ್ತ ದೂರು ಕೊಟ್ಟು ಕೃಷಿ ಅಧಿಕಾರಿ 1.5 ಲಕ್ಷ, ಸಹಾಯಕ ನಿರ್ದೇಶಕ 1 ಲಕ್ಷ ಹಣ ಲಂಚ ಕೇಳುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದರು, ಪಡೆದು ಲೋಕಾಯುಕ್ತ ಪೊಲೀಸರು ಕಾರ್ಯಚರಣೆ ನಡೆಸಿ ಎರಡೂವರೆ ಲಕ್ಷ ರೂ ಲಂಚ ಪಡೆಯುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಎಸ್‌ಪಿ ಸುರೇಶ್‌ಬಾಬು ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್‍ಪಿ ಮ್ಯಾಥ್ಯೂ ಥಾಮಸ್, ಇನ್‌ಸ್ಪೆಕ್ಟರ್‌ಗಳಾದ ಶಶಿಕುಮಾರ್, ರವಿಕುಮಾರ್, ಸಿಬ್ಬಂದಿ ಮಹಾಲಿಂಗಸ್ವಾಮಿ, ಮಹದೇವಸ್ವಾಮಿ, ಗುರುಪ್ರಸಾದ್, ಶ್ರೀನಿವಾಸ್, ಗೌತಮ್, ನಾಗೇಂದ್ರ, ಕೃಷ್ಣಗೌಡ, ಇಸಾಕ್, ಪುರುಷೋತ್ತಮ್, ಶಕುಂತಲ ಕಾರ್ಯಾಚರಣೆ ನಡೆಸಿದ್ದರು.