ವ್ಯಕ್ತಿಯೊಬ್ಬ ತನ್ನ ಅಸ್ತಿಯನ್ನು ಇಷ್ಟ ಬಂದವರಿಗೆ ವಿಲ್ ಬರೆದು ಬಿಟ್ಟರೆ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿರುತ್ತದೆ. ತನ್ನ ಸಾವಿನ ನಂತರ ತನ್ನ ಅಸ್ತಿಗಳು ಯಾರಿಗೆ ಹೋಗಬೇಕು ಎಂದು ಬರೆದಿಡುವ ಪತ್ರವೇ ಡೆಪಾಸಿಟ್ ಅಫ್ ವಿಲ್ ಎಂದೇ ಕರೆಯುತ್ತೇವೆ. ಯಾವುದೇ ವ್ಯಕ್ತಿಯು ತನ್ನ ಸ್ವತ್ತುಗಳನ್ನು ತನ್ನ ಸಾವಿನ ನಂತರ ಯಾರಿಗೆ ಹೋಗಬೇಕು ಎಂಬ ವಿಚಾರ ಮೊದಲೇ ಹೇಳಿಬಿಟ್ಟರೆ ಜೀವಕ್ಕೆ ಅಪಾಯ ಅಗುವ ಸಾಧ್ಯತೆಯಿರುತ್ತದೆ. ಅಂತಹ ಸಂದರ್ಭದಲ್ಲಿವ್ಯಕ್ತಿ ಬರೆದಿಡುವ ಪತ್ರವೇ ಮರಣ ಶಾಸನ ಎಂದು ಕರೆಯುತ್ತೇವೆ. ಇದನ್ನು ಬರೆದಿಟ್ಟ ವ್ಯಕ್ತಿ ಮೃತಪಟ್ಟ ಬಳಿಕ ಜಾರಿಗೆ ಬರುತ್ತದೆ.
ಯಾರಿಗೂ ಗೊತ್ತಾಗದಂತೆ ತನ್ನ ಅಸ್ತಿಯ ಪಾಲುದಾರಿಕೆ ಬಗ್ಗೆ ಬರೆದಿಡುವ ಮರಣ ಶಾಸನವನ್ನು ತನ್ನ ಮಕ್ಕಳಿಗೆ ಗೊತ್ತಾದಂತೆ ವಿಲ್ ಬರೆದ ಪ್ರಮಾಣ ಪತ್ರವನ್ನು ತನ್ನ ಮಕ್ಕಳಿಗೆ ಗೊತ್ತಾಗದಂತೆ ವಿಲ್ ನ್ನು ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಡೆಪಾಸಿಟ್ ಮಾಡಬಹುದು. ವಿಲ್ ನ್ನು ನೋಂದಣಾಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ಸ್ವೀಕರಿಸಿ ರಹಸ್ಯವಾಗಿ ಇಡುತ್ತಾರೆ. ಇದಕ್ಕೆ ಪ್ರತಿಯಾಗಿ ಮುಚ್ಚಿದ ಲಕೋಟೆಯಲ್ಲಿ ನೀಡುವ ಸ್ವೀಕೃತಿಯನ್ನು ವಿಲ್ ಡೆಪಾಸಿಟ್ ಮಾಡಿದ ವ್ಯಕ್ತಿ ಮರಣದ ನಂತರ ತೆರೆಯಬಹುದು. ಅಲ್ಲಿಯ ವರೆಗೂ ವಿಲ್ ನಲ್ಲಿ ಏನು ಬರೆದಿಡಲಾಗಿದೆ ಎಂದು ಯಾರಿಗೂ ಬಹಿರಂಗಪಡಿಸಲಾಗುವುದಿಲ್ಲ.
ಈ ಮರಣ ಶಾಸನವನ್ನು ವ್ಯಕ್ತಿ ತನ್ನ ಜೀವಿತ ಕಾಲದಲ್ಲಿ ಎಷ್ಟು ಸಲ ಬೇಕಾದರೂ ಬದಲು ಮಾಡಬಹುದು. (ತಿದ್ದುಪಡಿ) ಈ ರೀತಿ ಬದಲಾವಣೆ ಮಾಡುವ ಪತ್ರಗಳಿಗೆ ” ಕೋಡೊಸಿಲ್ ಅಫ್ ವಿಲ್- Codocil of will” ಎಂದು ಕರೆಯುತ್ತೇವೆ. ಮರಣ ಶಾಸನ ಬರೆಯುವರನ್ನು ಟೆಸ್ಟೇಟರ್ ( Testator) ಎಂದು ಕರೆಯುತ್ತೇವೆ.
ಈ ರೀತಿ ಮರಣ ಶಾಸನವನ್ನು ಸ್ವತಃ ಕೈ ಬರಹದಲ್ಲೂ ಬರೆಯಬಹುದು. ಬರೆದು ಸಹಿ ಮಾಡಿದ ನಂತರ, ಕಡ್ಡಾಯವಾಗಿ ಎರಡು ಸಾಕ್ಷಿಗಳು ಸಹಿ ಹಾಕಿರಲೇಬೇಕು. ವಿಲ್ ಪತ್ರಗಳಿಗೆ ಪತ್ರ ಬರೆದ ದಿನಾಂಕ ಬಗ್ಗೆ ನೋಂದಣಿ ಮಾಡಲು ಯಾವುದೇ ಕಾಲಮಿತಿ ಇರಲ್ಲ ಎಂದು ಭಾರತೀಯ ನೋಂದಣಿ ಕಾಯ್ದೆ ತಿಳಿಸುತ್ತದೆ.
ಸಾಮಾನ್ಯವಾಗಿ ಯಾವುದೇ ಕ್ರಯ, ಇನ್ನಿತರ ಪತ್ರಗಳ ನೋಂದಣಿಗೆ ನಾಲ್ಕು ತಿಂಗಳ ವಾಯಿದೆ ಇರುತ್ತದೆ. ಇನ್ನೂ ನಾಲ್ಕು ತಿಂಗಳು ದಂಡದ ಸಮೇತ ನೋಂದಣಿ ಮಾಡಲು ಅವಕಾಶವಿದೆ. ಅದರೆ ಜಿಲ್ಲಾ ಉಪ ನೋಂದಣಾಧಿಕಾರಿಗಳಿಗೆ ಸಕಾರಣ ಈಡಿ ಅನುಮತಿ ಪಡೆದ ಬಳಿಕ ನೋಂದಣಿ ಮಾಡಿಸಲಾಗುತ್ತದೆ. ಅದರೆ ಮರಣ ಶಾಸನಕ್ಕೆ ಈ ನಿಯಮ ಅನ್ವಯ ಅಗುವುದಿಲ್ಲ. ಯಾವಾಗ ಬೇಕಾದರೂ ನೋಂದಣಿ ಮಾಡಿಸಬಹುದು.
ಮರಣ ಶಾಸನ ನೊಂದಣಿಗೆ ಮುದ್ರಾಂಕ ಶುಲ್ಕ ಪಾವತಿಸುವಂತಿಲ್ಲ. ಮಿಲಟರಿ , ಕಂಟೋನ್ಮೆಂಟ್, ಯುದ್ಧಭೂಮಿ ಪ್ರದೇಶದಲ್ಲಿ ಇರುವರು ಹೇಳಿಕೆ ಮೂಲಕ ದಾಖಲಿಸಿದರೂ ಅದಕ್ಕೆ ಕಾನೂನಿನಲ್ಲಿ ವಿಲ್ ಮಾನ್ಯತೆ ಸಿಗುತ್ತದೆ.
( ಉದಾಹರಣೆಗೆ ಯುದ್ಧ ಭೂಮಿಯಲ್ಲಿ ಸಾವನ್ನಪ್ಪುವ ಸಂದರ್ಭದಲ್ಲಿ ಹೇಳಿಕೆ ಮೂಲಕ ನೀಡಿದರೂ ಅದು ವಿಲ್ ಅಗುತ್ತದೆ) ಬಾಯಿ ಮಾತನ್ನು ದಾಖಲಿಸಿ ಮಿಲಟರಿ ಕಂಟೋನ್ಮೆಂಟ್ ಅದನ್ನು ತಂದು ಕೊಟ್ಟರೆ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.
ವಿಲ್ ಎಲ್ಲಿ ನೋಂದಣಿ ಮಾಡಿಸಬೇಕು? : ಮರಣ ಶಾಸನವನ್ನು ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಡೆಪಾಸಿಟ್ ಮಾಡಬೇಕು. ಡೆಪಾಸಿಟ್ ಮಾಡಲು ಇದಕ್ಕೆ ಒಂದು ಸಾವಿರ ರೂ. ಶುಲ್ಕ ಪಾವತಿಸಬೇಕು. ಈ ನಿಯಮವನ್ನು ಹೊಸದಾಗಿ ಜಾರಿಗೆ ತರಲಾಗಿದೆ. ನೋಂದಣಿ ಶುಲ್ಕ ಪಡೆದು ಜಿಲ್ಲಾ ನೋಂದಣಾಧಿಕಾರಿಗಳು ” ಮುಚ್ಚಿದ ಲಕೋಟೆ ಸ್ವೀಕರಿಸಿದೆ. ಒಳಗೆ ಏನಿದೆ ಎಂಬುದನ್ನು ಗೊತ್ತಿಲ್ಲ ಎಂಬ ವಾಖ್ಯದ ಸೀಲ್ ಕವರ್ನ್ನು ಡೆಪಾಸಿಟ್ ಇಟ್ಟ ವ್ಯಕ್ತಿಗೆ ನೀಡುತ್ತಾರೆ. ಡೆಪಾಸಿಟ್ ಮಾಡಿದ ವ್ಯಕ್ತಿ ಮೃತಪಟ್ಟರೆ, ವಾರಸುದಾರರು ಮರಣ ಪ್ರಮಾಣ ಪತ್ರವನ್ನು ಜಿಲ್ಲಾ ನೋಂದಣಿ ಕಚೇರಿಯಲ್ಲಿ ನೀಡಿ ಅ ಮುಚ್ಚಿದ ಲಕೋಟೆಯನ್ನು ತೆರೆದು ಬೇರೆ ಅಸ್ತಿ ನೋಂದಣಿ ಮಾಡಿದಂತೆ ವಿಲ್ ನ್ನು ನೋಂದಣಿ ಮಾಡಬಹುದು. ನೋಂದಣಿ ಪುಸ್ತಕ ಮೂರರಲ್ಲಿ ದಾಖಲಿಸಲಾಗುತ್ತದೆ.