20 C
Bengaluru
Wednesday, January 22, 2025

ಏನಿದು TDR? ನಿಮ್ಮ ಆಸ್ತಿಗೆ ಟಿಡಿಆರ್ ಸಿಕ್ಕಿದೆಯಾ?

#TDR #BDA, #FAR #Law

ಬೆಂಗಳೂರು, ಮೇ. 11: ಎರಡು ವರ್ಷದ ಹಿಂದೆ ಬೆಂಗಳೂರಿಗಳು ಅತಿ ಹೆಚ್ಚಾಗಿ ಕೇಳಿದ ಪದ ಟಿಡಿಅರ್ ಅಕ್ರಮ! ಏನಿದು ಟಿಡಿಆರ್ ? ಟಿಡಿಅರ್‌ ಎಲ್ಲಿ ಅನ್ವಯ ಆಗುತ್ತದೆ ? ಇದರಿಂದ ಯಾರಿಗೆ ಅನುಕೂಲ ? ಇದಕ್ಕೆ ಅನ್ವಯಿಸುವ ನಿಯಮಗಳ ಬಗ್ಗೆ ಸಮಗ್ರ ವಿವರ ಇಲ್ಲಿ ನಿಡಲಾಗಿದೆ.

ಟಿಡಿಅರ್ : ಟಿಡಿಆರ್ ಎಂದ್ರೆ ಟ್ರಾನ್ಸ್ ಫರ್ಮರ್ ಆಫ್ ಡೆವಲಪ್‌ಮೆಂಟಲ್ ರೈಟ್ಸ್ ಎಂದು ಕರೆಯುತ್ತೇವೆ. ಕನ್ನಡದಲ್ಲಿ ಅಭಿವೃದ್ಧಿ ಹಕ್ಕಿನ ವರ್ಗಾವಣೆ ಎಂದು ಹೇಳಲಾಗುತ್ತದೆ. ಇದು ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಗೆ ಬರುವ ಆಸ್ತಿಗಳಿಗೆ ಮಾತ್ರ ಅನ್ವಯ ಆಗುತ್ತದೆ. ಬೆಂಗಳೂರಿನಲ್ಲಿ ರಸ್ತೆ ಹಾಗೂ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಸರ್ಕಾರ ಜಮೀನು ಮಾಲೀಕರಿಂದ ವಶಪಡಿಸಿಕೊಳ್ಳುವ ಭೂಮಿಯ ವಿಸ್ತೀರ್ಣಕ್ಕೆ ಶೇ. 50 ರಷ್ಟು ಹೆಚ್ಚುವರಿ ವಿಸ್ತೀರ್ಣ ಸೇರಿಸಿ ಟಿಡಿರ್ ಕೊಡುವ ಪದ್ಧತಿ ಚಾಲ್ತಿಯಲ್ಲಿದೆ. ಬೆಂಗಳೂರಿನಲ್ಲಿ ರಸ್ತೆಗೆ ಸ್ವಾಧೀನಕ್ಕೆ ಒಳಪಡುವ ಆಸ್ತಿಗಳಿಗೆ ಅದರ ಬೆಲೆಯನ್ನು ಪಾವತಿ ಮಾಡುವುದು ತುಂಬಾ ಕಷ್ಟದ ಕೆಲಸ. ಹೀಗಾಗಿ ಬೆಂಗಳುರು ಮಹಾನಗರ ವ್ಯಾಪ್ತಿಯಲ್ಲಿ ರಸ್ತೆಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಬದಲಾಗಿ ಟಿಡಿಅರ್ ಹಕ್ಕು ನೀಡಲಾಗುತ್ತದೆ.

ಉದಾಹರಣೆಗೆ ಸುಂಕದಕಟ್ಟೆಯಲ್ಲಿ ರೈತನೊಬ್ಬನಿಗೆ ಸೇರಿದ 500 ಚದರಡಿ ಜಾಗ ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡರೆ, 750 ಚದರಡಿ ಅಭಿವೃದ್ಧಿ ವರ್ಗಾವಣೆ ಹಕ್ಕು ಸ್ವಾಧೀನ ಪಡಿಸಿಕೊಳ್ಳುವ ಸರ್ಕಾರಿ ಸಂಸ್ಥೆ ( ಬಿಡಿಎ) ಸಂಬಂಧಪಟ್ಟ ರೈತನಿಗೆ ನೀಡುತ್ತದೆ. ಈ ಅಭಿವೃದ್ಧಿಯ ಹಕ್ಕನ್ನು ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುವ ಕಂಪನಿಗಳಿಗೆ ಮಾರಾಟ ಮಾಡಿ ಕಳೆದುಕೊಂಡ ಭೂಮಿಗೆ ಪರಿಹಾರ ಪಡೆಯುವ ಪದ್ಧತಿ ಇದಾಗಿದೆ.

ರಸ್ತೆ ನಿರ್ಮಾಣಕ್ಕಾಗಿ ಬಿಡಿಎ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಸಂಬಂಧಿಸಿದಂತೆ ಭೂಮಿಯ ಮಾಲೀಕರು ಪರಿತ್ಯಾಜ್ಯನಾ ಪತ್ರ ಮಾಡಿಕೊಡಬೇಕು. ಈ ಮೂಲಕ ಆಸ್ತಿಯ ಹಕ್ಕನ್ನು ಪರಿತ್ಯಜಿಸಿದ ನಂತರ ಡಿಟಿಅರ್ ಹಕ್ಕು ನೀಡುತ್ತಾರೆ.

ಪ್ರಸ್ತುತ ನೋಂದಣಿ ಮತ್ತು ಮುದ್ರಾಂಕ ಕಾಯ್ದೆಯ ಪ್ರಕಾರ ಟಿಡಿಆರ್ ನೋಂದಣಿ ಮಾಡಲು ಕರ್ನಾಟಕ ಮುದ್ರಾಂಕ ಕಾಯ್ದೆ ಆರ್ಟಿಕಲ್ 20 ರ ಅನ್ವಯ ಶೇ. 1 ರಷ್ಟು ಸ್ಟಾಂಪ್ ಡ್ಯೂಟಿ ಹಾಗೂ ಶೇ. 1 ರಷ್ಟು ಮುದ್ರಾಂಕ ಶುಲ್ಕವನ್ನು ಪಾವತಿಸಿ ನೋಂದಣಿ ಮಾಡಿಸಬೇಕು. ಟಿಡಿಆರ್ ನೋಂದಣಿ ವೇಳೆ ದಾಸ್ತವೇಜಿನಲ್ಲಿ ಸೂಚಿಸಿರುವ ಮೊತ್ತಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಬೇಕು.

Use of TDR : ಟಿಡಿಆರ್ ಕೂಡ ಒಂದು ಸ್ವತ್ತು ಇರುವಂತೆ. ಆದ್ರೆ ಅದು ಭೌತಿಕವಾಗಿ ಕಾಣುವುದಿಲ್ಲ. ಯಾವುದೇ ಒಂದು ಅಪಾರ್ಟ್‌ಮೆಂಟ್ ಕಟ್ಟುವಾಗ ಸಂಬಂಧಪಟ್ಟ ಯೋಜನಾ ಪ್ರಾಧಿಕಾರ ರಸ್ತೆ ಹಾಗೂ ಜಮೀನಿಗೆ ಅನುಗುಣವಾಗಿ ಪ್ಲೋರ್‌ ಏರಿಯಾ ರೇಶ್ಯೂ ( FAR ) ನಿಗದಿ ಪಡಿಸಿರುತ್ತದೆ. ಎಷ್ಟು ಚದರ ಮೀಟರ್ ಎತ್ತರದ ವರೆಗೂ ಬಿಲ್ಡಿಂಗ್ ಕಟ್ಟಡ ನಿರ್ಮಾಣ ಮಾಡಬಹುದು ಎಂದು ತೀರ್ಮಾನಿಸಲಾಗುತ್ತದೆ.

ಅಪಾರ್ಟ್‌ಮೆಂಟ್ ಗಳಲ್ಲಿ ಮೇಲೆ ಹೋದಂತೆ ಪ್ಲಾಟ್ ಗಳ ಬೆಲೆ ಜಾಸ್ತಿ. ಹೀಗಾಗಿ ಹೆಚ್ಚು ಪ್ಲೋರ್ ನಿರ್ಮಿಸಲು ಆಸೆ ಪಡುತ್ತಾರೆ. ಆದ್ರೆ ಪ್ಲೋರ್ ಏರಿಯಾ ನಿರ್ಮಾಣವನ್ನು ಹೆಚ್ಚಿಸಿಕೊಳ್ಳಲು ಟಿಡಿಅರ್ ಹಕ್ಕು ಹೊಂದಿರುವ ರೈತರಿಂದ ಖರೀದಿಸಿ ಅಪಾರ್ಟ್ಮೆಂಟ್ ಗಳ ಎತ್ತರವನ್ನು ಹೆಚ್ಚಿಸುತ್ತಾರೆ. ಟಿಡಿಅರ್ ಹಕ್ಕು ಖರೀದಿಗಾಗಿ ಡೆವಲಪರ್‌ ಗಳು ಅದರ ಹಕ್ಕಿನ ಮಾಲೀಕರಿಗೆ ಕೋಟ್ಯಂತರ ರೂಪಾಯಿ ಹಣ ನೀಡುತ್ತಾರೆ. ಇದು ಡಿಟಿಅರ್ ಹಿಂದಿನ ಸತ್ಯ.

ಬಿಡಿಎ ಟಿಡಿಅರ್ ಅಕ್ರಮ: ಎರಡು ವರ್ಷದ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ದೊಡ್ಡ ಹಗರಣವೇ ನಡೆದಿತ್ತು. ಟಿಡಿಆರ್ ವ್ಯಾಪ್ತಿಗೆ ಒಳಪಡದ ಆಸ್ತಿಗಳಿಗೆ ನಕಲಿ ಟಿಡಿಆರ್ ಸೃಷ್ಟಿಸಿ ಬಿಲ್ಡರ್‌ ಗಳಿಗೆ ಮಾರಾಟ ಮಾಡುವ ದೊಡ್ಡ ಜಾಲ ಇತ್ತು. ಇದರ ಜತೆಗೆ ಬಿಡಿಎ ರಸ್ತೆ ಗೆ ಸ್ವಾಧೀನಕ್ಕೆ ಒಳಪಡುವ ಆಸ್ತಿಗಳನ್ನು ಬ್ರೋಕರ್ ಗಳು ಖರೀದಿಸಿ ಅ ಟಿಡಿಆರ್ ಹಕ್ಕುಗಳನ್ನು ಬಿಲ್ಡರ್‌ ಗಳಿಗೆ ಮಾರಾಟ ಮಾಡಿ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದರು. ಇದರಲ್ಲಿ ಭಾರೀ ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ಕ್ರಿಮಿನಲ್ ಕೇಸುಗಳನ್ನು ದಾಖಲಿಸಿ ಹಲವರನ್ನು ಬಂಧಿಸಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಟಿಡಿಆರ್ ಹಕ್ಕುಗಳಿಗೆ ಬೇಡಿಕೆ ತೀರಾ ಕಡಿಮೆ. ಇದರಲ್ಲಿ ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ಟಿಡಿಅರ್ ಹಕ್ಕು ಮಾರಾಟ ಬೇಡಿಕೆ ಕಡಿಮೆ. ಟಿಡಿಆರ್ ನಿಂದ ಆಸ್ತಿ ಕಳೆದುಕೊಂಡ ಮಾಲೀಕರಿಗೆ ಅದರ ಮಾರಾಟ ಬೆಲೆಗಿಂತಲೂ ಶೇ. 50 ಪಟ್ಟು ಅಧಿಕೃತವಾಗಿ ನೀಡಲಾಗುತ್ತದೆ. ಅದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಬಹುದು.

Related News

spot_img

Revenue Alerts

spot_img

News

spot_img