ಟ್ರಸ್ಟ್ ಎಂದರೆ ನಂಬಿಕೆ. ತನ್ನ ಆಸ್ತಿಯ ಮೇಲಿನ ನಂಬಿಕೆಯನ್ನು ಇನ್ನೊಬ್ಬರಿಗೆ ವರ್ಗಾಯಿಸುವುದಕ್ಕೆ ಟ್ರಸ್ಟ್ ಎನ್ನುತ್ತಾರೆ.ಟ್ರಸ್ಟ್ ಪತ್ರವನ್ನು ಉಪನೋಂದಣಿ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಟ್ರಸ್ಟ್ ಗಳು ಎರಡು ತರಹವಾಗಿದ್ದು,ಸಾರ್ವಜನಿಕ ಕ್ಷೇಮಾಭಿವೃದ್ಧಿಗೆ ಸಾರ್ವಜನಿಕ ಟ್ರಸ್ಟ್ ಹಾಗೂ ಫಲಾನುಭವಿಗಳ ಕ್ಷೇಮಾಭಿವೃದ್ಧಿಗಾಗಿ ಖಾಸಗಿ ಟ್ರಸ್ಟ್ ,ವಿದ್ಯಾಬ್ಯಾಸಕ್ಕಾಗಿ ಟ್ರಸ್ಟ್ ಸ್ಥಾಪಿಸಬಹುದಾಗಿದೆ.
ಯಾರು ಬೇಕಾದರೂ ಟ್ರಸ್ಟ್ ಸ್ಥಾಪನೆ ಮಾಡಬಹುದು.
ಟ್ರಸ್ಟನ್ನು ನೋಂದಣಿ ಮಾಡಲು ಶುಲ್ಕಶೈಕ್ಷಣಿಕ,ಸಾಹಿತ್ಯ,ಕಲೆ,ಕ್ರೀಡೆ,ವಾಣಿಜ್ಯ,ಕೈಗಾರಿಕೆ,ಚರಿತ್ರಾರ್ಹ ಸ್ಮಾರಕಗಳ ಸಂಗ್ರಹ, ತಾಂತ್ರಿಕ ಮತ್ತು ತಂತ್ರಜ್ಞಾನದ ಅನ್ವೇಷಣೆ ಇವುಗಳನ್ನು ಅಭಿವೃದ್ದಿಪಡಿಸಿ ಬೆಳೆಸಲು ಟ್ರಸ್ಟ್ ಗಳನ್ನು ನೋಂದಾಯಿಸಿಕೊಡಲಾಗುತ್ತದೆ.ಸದಸ್ಯರುಗಳನ್ನು ಸೇರಿಸಿಕೊಳ್ಳಲು ಅವಕಾಶವಿರುವುದಿಲ್ಲ.ಇದುಸಂಸ್ಥೆ ಲೆಕ್ಕ ಪತ್ರಗಳನ್ನು ಸ್ಥಾಪಕನೇ ನಿರ್ವಹಿಸಬೇಕು.ಲಾಭವನ್ನು ಟ್ರಸ್ಟಿಗಳು ಹಂಚಿಕೊಳ್ಳತಕ್ಕದ್ದಲ್ಲ.ಪಲಾನುಭವಿಗಳು ಪಡೆಯಬಹುದು.
ಟ್ರಸ್ಟಿಗಳು ಅಪೇಕ್ಷೆಪಟ್ಟರೆ ಟ್ರಸ್ಟ್ ಅನ್ನು ರದ್ದುಪಡಿಸಬಹುದು.ನೋಂದಣಿಯಾದ ಟ್ರಸ್ಟ್ ಗಳಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಪಾನ್ ಕಾರ್ಡ್ ಹಾಗೂ ಇನ್ನಿತರ ಅಕೌಂಟ್ ಗಳನ್ನು ತೆರೆದು ತೆರಿಗೆಗಳನ್ನು ಪಾವತಿಸಬೇಕು.
ಟ್ರಸ್ಟ್ ಗಳ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸಬಹುದು.