17.9 C
Bengaluru
Thursday, January 23, 2025

ಇನಾಮು ಆಸ್ತಿ ಎಂದರೇನು ? ಇನಾಮುದಾರ ಎಂದರೆ ಯಾರು ?

Inam Grant order

ಬೆಂಗಳೂರು, ಡಿ. 21: ಹಳೇ ಕಾಲದ ಜನರನ್ನು ಈ ಜಮೀನು ಹೇಗೆ ಬಂತು ಅಂತ ಕೇಳಿದ್ರೆ ಹೇಳುವ ಪದವೇ ಇನಾಮು. ಹಾಗಾದ್ರೆ ಇನಾಮು ಎಂದರೇನು ? ಇನಾಮು ಜಮೀನು ಎಂದರೇನು ? ಜಮೀನಿನ ಇನಾಮು ಆದೇಶದ ಪ್ರತಿ ಎಲ್ಲಿ ಸಿಗುತ್ತದೆ. ಜಮೀನು ಇನಾಮು ನೀಡುವ ಪದ್ಧತಿ ಯಾವಾಗ ಅಸ್ತಿತ್ವದಲ್ಲಿತ್ತು ? ಎಂಬುದರ ಸಮಗ್ರ ವಿವರ ಇಲ್ಲಿದೆ.

ಇನಾಮು ಎಂದರೆ ಉಡುಗೊರೆ ಎಂದರ್ಥ. ರಾಜರ ಕಾಲದಲ್ಲಿ ಸೇವೆ ಸಲ್ಲಿಸುವ ವ್ಯಕ್ತಿಗಳಿಗೆ ಜೀವನಾಧಾರಕ್ಕಾಗಿ ಜಮೀನನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಈ ಪದ್ಧತಿ ಬ್ರಿಟೀಷರ ಆಳ್ವಿಕೆ ಅವಧಿಯಲ್ಲೂ ಭಾರತದಲ್ಲಿ ಅಸ್ತಿತ್ವದಲ್ಲಿತ್ತು. ಇನಾಮು ಜಮೀನು ಎಂದರೆ ಹಿಂದಿನ ಕಾಲದಲ್ಲಿ ರಾಜರಿಗೆ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡಿ ಬರೆದ ಪತ್ರ. ಇನಾಮು ಜಮೀನು ಪತ್ರ ಎಂಬುದು ಈಗಲು ಕಂದಾಯ ದಾಖಲೆಗಳಲ್ಲಿ ಅಸ್ತಿತ್ವದಲ್ಲಿದೆ. ಹಿಂದಿನ ಕಾಲದಲ್ಲಿ ಜಮೀನು ಇನಾಮು ನೀಡಿದಕ್ಕೆ ಸಂಬಂಧಪಟ್ಟಂತೆ ಹೊಂದಿರುವ ಪತ್ರ ಆಸ್ತಿಯ ಮಾಲಿಕತ್ವವನ್ನು ನಿರೂಪಿಸುವ ಕಂದಾಯ ದಾಖಲೆಯಾಗಿ ಈಗಲೂ ಅಸ್ತಿತ್ವದಲ್ಲಿದೆ.

ಭಾರತದಲ್ಲಿ ಮೊಗಲರ ಕಾಲದಲ್ಲಿ ಹಾಗೂ ಹಿಂದೂ ರಾಜರ ಆಳ್ವಿಕೆ ಕಾಲದಲ್ಲಿ ಅವರ ಸೇವಕರಾಗಿ, ಸೈನ್ಯದಲ್ಲಿ ಕೆಲಸ ಮಾಡುವರಿಗೆ, ಅಡುಗೆ ಮಾಡುವರಿಗೆ ಅವರ ನಿವೃತ್ತಿಯ ಬಳಿಕ ಅವರಿಗೆ ಉಡುಗೊರೆಯಾಗಿ ಜಮೀನನ್ನು ನೀಡುತ್ತಿದ್ದರು. ಇನ್ನೂ ಕೆಲವಡೆ ವೇತನದ ಭಾಗವಾಗಿ ರಾಜರ ಸೇವಕರಿಗೆ ಭುಮಿಯನ್ನು ನೀಡಲಾಗುತ್ತಿತ್ತು.

ಇಂತಹ ಜಮೀನಿನಲ್ಲಿ ಸೇವಕರು ಅಗತ್ಯ ಬೆಳೆ ಬೆಳೆದುಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದರು. ಹೀಗೆ ರಾಜರು ತಮ್ಮ ಸೇವಕರಿಗೆ, ಅಡುಗೆ ಮಾಡುವರಿಗೆ, ಸೈನಿಕರಿಗೆ ಉಡುಗೊರೆಯಾಗಿ ನೀಡಿದ ಜಮೀನನ್ನೇ ಇನಾಮು ಜಮೀನು ಎಂದು ಕರೆಯುತ್ತಾರೆ. ಈ ಇನಾಮು ಜಮೀನು ಪದ್ಧತಿ ದೇಶದಲ್ಲಿ ಈಗ ರದ್ದಾಗಿದೆ. ಕರ್ನಾಕಟದಲ್ಲಿ ಇನಾಮು ನಿರ್ಮೂಲನ ಕಾನೂನಿನಲ್ಲಿ ವಿವಿಧ ರೀತಿಯ ಇನಾಮು ಜಮೀನು ಬಗ್ಗೆ ಉಲ್ಲೇಖಿಸಲಾಗಿದೆ.

ಭಾರತ ಸ್ವಾತಂತ್ರ್ಯ ನಂತರ ಈ ಇನಾಮು ಭೂಮಿ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿತು. ಇನಾಮು ಭೂಮಿ ಅದೇಶದ ವಿಚಾರಕ್ಕೆ ಬಂದರೆ, ಈ ಇನಾಮು ಜಮೀನು ಆದೇಶದ ಪ್ರತಿ ಪಡೆಯಲು ಸರ್ಕಾರ ವಿಧಿಸಿದ ಹಲವು ಷರತ್ತುಗಳನ್ನು ಪೂರೈಸಬೇಕು. ಭೂ ರಹಿತರಿಗೆ ಸರ್ಕಾರ ಜಮೀನು ಮಂಜೂರು ಮಾಡುತ್ತದೆ. ಹೀಗೆ ಮಂಜೂರು ಮಾಡಿದ ಜಮೀನನ್ನು ಹದಿನೈದು ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ. ಸರ್ಕಾರ ಭೂ ರಹಿತರಿಗೆ ಮಂಜೂರು ಮಾಡಿದ ಆದೇಶದಲ್ಲಿಯೇ ಭೂ ಪರಭಾರೆ ನಿಯಂತ್ರಣ ಷರತ್ತುಗಳನ್ನು ಹಾಕಲಾಗಿರುತ್ತದೆ. ಹದಿನೈದು ವರ್ಷಗಳ ಬಳಿಕ ಸದರಿ ಭೂಮಿ ಖರೀದಿ ಮಾಡಲು ಇಚ್ಛಿಸಿದರೆ, ಅಂತಹವರು ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯವಾಗಿ ಪಡೆಯಬೇಕಾಗಿರುತ್ತದೆ.

ಇನಾಮು ಎಂದರೇನು ? ಇನಾಮುದಾರ ಯಾರು ?

ಇನಾಮು ಎಂದರೆ ಜಮೀನಿನ ಉಡುಗೊರೆ ಎಂದರ್ಥ. ಭಾರತದಲ್ಲಿ ರಾಜರ ಆಳ್ವಿಕೆ ಕಾಲದಲ್ಲಿ ಜಮೀನು ಇನಾಮು ನೀಡುವ ಪದ್ಧತಿ ಇತ್ತು. ಮೊಗಲರ ಆಳ್ವಿಕೆ ಕಾಲದಲ್ಲಿ ಇದು ಅಸ್ತಿತ್ವದಲ್ಲಿತ್ತು.

ಇನಾಮುದಾರ ಯಾರು ?

ಇನಾಮು ನಿಯಂತ್ರಣ ಕಾಯ್ದೆ ಅನ್ವಯ ಇನಾಮು ಜಮೀನು ಹಕ್ಕು ಉಳ್ಳವನೇ ಇನಾಮುದಾರ.

Related News

spot_img

Revenue Alerts

spot_img

News

spot_img