19.8 C
Bengaluru
Monday, December 23, 2024

ಗ್ರಾಮಠಾಣಾ ನಿವೇಶನ ಎಂದರೆ ಏನು ? ಗ್ರಾಮಠಾಣಾ ನಿವೇಶನ ಖರೀದಿಸುವುದು ಸುರಕ್ಷಿತವೇ ?

ಬೆಂಗಳೂರು, ಅ. 26:
ಗ್ರಾಮ ಠಾಣಾ ನಿವೇಶನ ಎಂದರೆ ಒಂದು ಗ್ರಾಮದಲ್ಲಿ ವಾಸಿಸುವ ಉದ್ದೇಶಕ್ಕಾಗಿ ನಿಗದಿ ಪಡಿಸಿರುವ ಜಾಗ ಅಥವಾ ಪ್ರದೇಶವನ್ನು ಗ್ರಾಮಠಾಣಾ ಎಂದು ಕರೆಯುತ್ತಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಕಂದಾಯ ವಸೂಲಿ ಮಾಡುವ ಉದ್ದೇಶದಿಂದ ಭೂಮಿಯನ್ನು ಸರ್ವೆ ಮಾಡಿಸಿದ್ದರು. ಈ ಸರ್ವೆ ಮಾಡುವ ವೇಳೆ ಜನರು ವಾಸಿಸುತ್ತಿದ್ದ ಜಾಗವನ್ನು ಬಿಟ್ಟು ಉಳಿದ ಜಮೀನುಗಳಿಗೆ ಸರ್ವೆ ನಂಬರ್ ನಿಗದಿ ಪಡಿಸಿರುತ್ತಾರೆ.

ಗ್ರಾಮ ಠಾಣಾ ಜಾಗವನ್ನು ವಾಸಿಸಲು ನಿಗದಿ ಪಡಿಸಿರುವ ಕಾರಣದಿಂದ ಅದಕ್ಕೆ ಸರ್ವೆ ನಂಬರ್ ನೀಡಿಲ್ಲ. ಬದಲಿಗೆ ಖಾನೇಶುನಾರಿ ನಂಬರ್ ಗಳನ್ನು ನೀಡಿದ್ದರು. ಕರ್ನಾಟಕದಲ್ಲಿ ಸರ್ವೆ ಮಾಡುವ ಕೆಲಸಕ್ಕೆ ಬಹುತೇಕರು ಮರಾಠಿ ಭಾಷಿಕರು ನಿಯೋಜನೆಗೊಂಡಿದ್ದರಿಂದ ಕರ್ನಾಟಕದಲ್ಲಿ ಭೂ ದಾಖಲೆಗಳಿಗೆ ಸಂಬಂಧಿಸಿದ ಪದಗಳನ್ನು ಮರಾಠಿ ಭಾಷೆಯಲ್ಲಿ ಬಳಸಿದ್ದು ಹಾಲಿ ಸರ್ಕಾರಿ ಭೂ ದಾಖಲೆಗಳಲ್ಲಿ ಈಗಲೂ ಪದೇ ಪದಗಳನ್ನು ಬಳಸಾಗುತ್ತಿದೆ. ಖಾನೇಶುಮಾರಿ ಪದ ಕೂಡ ಮರಾಠಿ ಭಾಷೆಯ ಪದ.

ಖಾನೇಶುಮಾರಿ ನಂಬರ್ ಎಂದರೆ ವಾಸದ ಜಾಗದ ಸಂಖ್ಯೆ ಎಂದರ್ಥ. ಗ್ರಾಮಠಾಣಾ ವ್ಯಾಪ್ತಿಯ ವಾಸಯೋಗ್ಯ ಜಾಗದಲ್ಲಿ ಅಲ್ಲಿ ನೆಲೆಸಿರುವರ, ಹಕ್ಕುದಾರರಿಗೆ ಪ್ರತ್ಯೇಕ ಖಾನೇಶುಮಾರಿ ನಂಬರ್ ನೀಡಲಾಗಿರುತ್ತದೆ. ಖಾನೇಶುಮಾರಿ ನಂಬರ್ ಗಳಿಗೆ ಅಂದರೆ ಗ್ರಾಮ ಠಾಣಾ ವ್ಯಾಪ್ತಿಯ ನಿವೇಶನಗಳನ್ನು ಭೂ ಪರಿವರ್ತನೆ ಮಾಡುವ ಅಗತ್ಯ ಇರುವುದಿಲ್ಲ. ಗ್ರಾಮಠಾಣಾ ಪ್ರದೇಶವು ಸಮಗ್ರ ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಹಸಿರು ವಲಯ ಎಂದಿದ್ದರೂ ಸಹ ಅದನ್ನು ಭೂ ಪರಿವರ್ತನೆ ಮಾಡುವ ಅಗತ್ಯ ಇರುವುದಿಲ್ಲ.

ಗ್ರಾಮಠಾಣಾ ನಿವೇಶನಗಳಿಗೆ ಯೋಜನಾ ಪ್ರಾಧಿಕಾರದಿಂದ ನಕ್ಷೆ ಮಂಜೂರು ಆಗದೇ ಇರುವುದರಿಂದ ಅನುಮೋದಿತ ಯೋಜನೆ ಪಡೆಯುವ ಅಗತ್ಯವಿಲ್ಲ. ಗ್ರಾಮ ಠಾಣಾ ನಿವೇಶನಳನ್ನು ಅಭಿವೃದ್ಧಿ ಪಡಿಸಲು ಬ್ಯಾಂಕ್ ಗಳು ಅನುಮೋದಿತ ನಕ್ಷೆಯನ್ನು ಕೇಳುವ ಪ್ರಮೇಯ ಇರುವುದಿಲ್ಲ.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಾಮಠಾಣಾ ನಿವೇಶನಗಳ ಖಾತಾ ನಿರ್ವಹಣೆ ಮಾಡುತ್ತಿದ್ದು, ಕಂದಾಯ ಇತರೆ ಕರಗಳನ್ನು ಪಂಚಾಯಿತಿ ವಸೂಲಿ ಮಾಡುತ್ತದೆ. ಪಂಚಾಯಿತಿ ಸ್ವತ್ತುಗಳನ್ನು ವ್ಯಕ್ತಿಗಳ ಹೆಸರಿಗೆ ಖಾತಾ ಮಾಡುವಾಗ ಬೇರೆ ಸರ್ವೆ ನಂಬರ್ ಗಳು ಇರುವ ಲೇಔಟ್ ಗಳಿಗೆ ಖಾತಾಮಾಡುವಾಗ ಕೇಳುವ ರೀತಿ ದಾಖಲೆಗಳನ್ನು ಗ್ರಾಮಠಾಣಾ ಸ್ವತ್ತುಗಳಿಗೆ ಕೇಳುವಂತಿಲ್ಲ.

ಒಬ್ಬ ವ್ಯಕ್ತಿ/ ಕುಟುಂಬ ಕಾನೂನು ಬದ್ಧವಾಗಿ ಎಷ್ಟು ಎಕರೆ ಜಮೀನು ಹೊಂದಬಹದು?

ಗ್ರಾಮ ಠಾಣಾ ನಿವೇಶನ ಖರೀದಿ ಮಾಡಬಹುದೇ ?
ಗ್ರಾಮ ಠಾಣಾ ನಿವೇಶನ ಖರೀದಿ ಮಾಡಲು ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ಯಾರು ಬೇಕಾದರೂ ಗ್ರಾಮ ಠಾಣಾ ನಿವೇಶನ ಖರೀದಿ ಮಾಡಬಹುದು. ಸರ್ವೆ ನಂಬರ್ ಇರುವ ಲೇಔಟ್ ನ ನಿವೇಶನಗಳಿಗೆ ಹೋಲಿಸಿದ್ರೆ, ಗ್ರಾಮಠಾಣಾ ನಿವೇಶನಗಳಿಳನ್ನ ಕ್ರಯ ಇನ್ನಿತರೆ ದಾಖಲೆ ನೋಂದಣಿ ಮಾಡುವಾಗ ಹಿಂದು ವಾರಸ ಕಾಯಿದೆ ಅನ್ವಯ ವಾರಸುದಾರರ ಕ್ರಮ ಬದ್ಧ ಪಾರ್ಟಿಗಳನ್ನುನೋಡಿಕೊಂಡರೆ ಸಾಕು.

ಈ ದಾಖಲೆಗಳನ್ನು ಕೊಟ್ಟು ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡರೆ ಸಾಕು. ಇದನ್ನು ಹೊರತು ಅತಿಯಾಗಿ ಬೇರೆ ದಾಖಲೆಗಳನ್ನು ಕೇಳುವ ಅವಶ್ಯಕತೆ ಇರುವುದಿಲ್ಲ. ಗ್ರಾಮ ಠಾಣಾ ನಿವೇಶನಗಳಿಗೆ ಹೆಚ್ಚು ದಾಖಲೆ ನೋಡುವ ಪ್ರಮೇಯ ಇರಲ್ಲ. ನಿವೇಶನದ ಅಸಲಿ ಮಾಲೀಕರಿಂದ ಒಮ್ಮೆ ಬರೆಸಿಕೊಂಡರೆ ಸಾಕು. ಗ್ರಾಮ ಠಾಣಾ ನಿವೇಶನಗಳು ಯೋಜನಾ ಪ್ರಾಧಿಕಾರದ ಪ್ರಕಾರ ರಸ್ತೆ ಇನ್ನಿತರೆ ಸೌಲಭ್ಯಗಳು ಇರುವುದಿಲ್ಲ. ಸಣ್ಣ ರಸ್ತೆಗಳು, ಮನೆಗಳು ಒಂದಕ್ಕೊಂದು ಅಂಟಿಕೊಂಡು ಇರುವ ಸಂಭವ ಇರುತ್ತವೆ.

Related News

spot_img

Revenue Alerts

spot_img

News

spot_img