21 C
Bengaluru
Sunday, October 27, 2024

ಫ್ಲ್ಯಾಟ್ /ಅಪಾರ್ಟ್ ‌ಮೆಂಟ್ ಎಂದರೆ ಏನು? ಖರೀದಿಸುವಾಗ ಗಮನಿಸಬೇಕಾದ ವಿಷಯಗಳು.

ಪ್ರತಿಯೊಬ್ಬರೂ ತನ್ನದೇ ಆದ ಗುರಿಯನ್ನಿಟ್ಟುಕೊಂಡಿರುತ್ತಾರೆ. ಅದರಲ್ಲಿ ಅತ್ಯಂತ ಹೆಚ್ಚಿನ ಜನರು ಇಟ್ಟುಕೊಂಡಿರುವ ಆಸೆ ಸ್ವಂತ ಮನೆ ನಿರ್ಮಿಸುವುದು. ಹೊಸ ಮನೆ ಅಥವಾ ಪ್ಲ್ಯಾಟ್‌ವೊಂದನ್ನ ಖರೀದಿಸುವುದಾಗಿದೆ.

ಹೊಸ ಮನೆ ಅಥವಾ ಫ್ಲ್ಯಾಟ್ ‌ನಲ್ಲಿ ಹಣ ಹೂಡಿಕೆ ಮಾಡುವುದು ನಿಮ್ಮ ಜೀವನದ ಅತ್ಯಂತ ನಿರ್ಣಾಯಕ ಹಾಗೂ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿರುತ್ತದೆ. ಏಕೆಂದರೆ ನೀವು ಚಿಕ್ಕ ವಯಸ್ಸಿನಿಂದಲೇ ಹೀಗೊಂದು ಕನಸು ಕಂಡಿರಬಹುದು. ಹೊಸ ಮನೆ ಅಥವಾ ಫ್ಲ್ಯಾಟ್ ಖರೀದಿಸಬೇಕು ಎಂದು. ಇದಕ್ಕಾಗಿ ನೀವು ಕಷ್ಟಪಟ್ಟು ದುಡಿದು ಹಣ ಕೂಡಿಟ್ಟಿರುತ್ತೀರ. ಹೀಗೆ ಅನೇಕ ವರ್ಷಗಳ ಉಳಿತಾಯವು ಕೆಲವೇ ಕ್ಷಣದಲ್ಲಿ ಹಾಳಾಗಲು ಯಾರೂ ಮನಸ್ಸು ಮಾಡುವುದಿಲ್ಲ.ಆದ್ದರಿಂದ, ನೀವು ಈ ಮಹತ್ತರ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ಕೆಲವು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಫ್ಲ್ಯಾಟ್ ಎಂದರೆ ಪ್ರತ್ಯೇಕವಾದ ಸ್ವತಂತ್ರ ವ್ಯವಸ್ಥೆಯುಳ್ಳ ವಾಸ, ಕಛೇರಿ,ಪ್ರದರ್ಶನ ಮಳಿಗೆ, ಅಂಗಡಿ, ಗೋಡೌನ್, ಗ್ಯಾರೇಜ್ ಗಳಿಗೆ ಉಪಯೋಗಿಸಬಹುದಾದ ಸ್ಥಳ.

ಫ್ಲ್ಯಾಟ್ ಖರೀದಿಸುವ ಕರಾರುಗಳೇನು?
ಫ್ಲ್ಯಾಟ್‌ಗಳನ್ನು ಕಟ್ಟುವ, ಅಭಿವೃದ್ಧಿ ಪಡಿಸುವ ವ್ಯಕ್ತಿಯು ಅದಕ್ಕಾಗಿ ಖರೀದಿದಾರರಿಂದ ಮುಂಗಡ ಹಣ, ಠೇವಣ ಪಡೆಯುವ ಮೊದಲು ಕರಾರು ಪತ್ರವನ್ನು ಕಡ್ಡಾಯವಾಗಿ ನೋಂದಾಯಿಸ ಬೇಕಾಗುತ್ತದೆ. ಸದರಿ ಮುಂಗಡ ಹಣ, ಠೇವಣಿ ಮಾರಾಟ ಒಪ್ಪಂದದ ಮೌಲ್ಯದ ಶೇ.20ಕ್ಕಿಂತ ಹೆಚ್ಚಿಗೆ ಇರಬಾರದು.

ಫ್ಲ್ಯಾಟ್ ಮಾಲೀಕತ್ವ ಹೇಗೆ ಬರುತ್ತದೆ ?
ಫ್ಲ್ಯಾಟ್ ಅಭಿವೃದ್ಧಿ ಪಡಿಸುವವನು ಕರಾರು ಪ್ರಕಾರ ಮಾಡಿಕೊಂಡ ಅವಧಿಯೊಳಗೆ ಫ್ಲ್ಯಾಟ್ ಪಡೆಯುವವರ ನೋಂದಾಯಿತ ಸಂಸ್ಥೆ, ಸಹಕಾರ ಸಂಘ, ಕಂಪನಿಗೆ ಹಸ್ತಾಂತರಿಸತಕ್ಕದ್ದು, ಈ ಮೊದಲು ಅಭಿವೃದ್ಧಿಪಡಿಸುವವನು ನಿಗದಿತ ಅವಧಿಯೊಳಗೆ ಅಂತಹ ಸಂಘ, ಸಹಕಾರ ಸ೦ಘ ಅಥವಾ ಕ೦ಪನಿ ರಚಿಸಲು ಕ್ರಮ ಕೈಗೊಳ್ಳತಕ್ಕದ್ದು, ಅಪಾರ್ಟ್ ಮೆಂಟ್ ಅಥವಾ ಫ್ಲ್ಯಾಟ್ ಗಳ ನೋಂದಣಿಗೆ ಸದರಿ
ಕಾಯಿದೆಗಳಲ್ಲಿ ನಮೂನೆಗಳನ್ನು ಕೊಡಲಾಗಿದೆ. ಅವುಗಳನ್ನು ನಿಗದಿತಮುದ್ರಾಂಕ ಶುಲ್ಕ ಪಾವತಿ ಮಾಡಿ ನೋಂದಾಯಿಸಬೇಕಾಗುತ್ತದೆ

ಫ್ಲ್ಯಾಟ್ / ಅಪಾರ್ಟ್ ‌ಮೆಂಟ್ ಖರೀದಿಸುವಾಗ ಗಮನಿಸಬೇಕಾದ
ಮುಖ್ಯಾಂಶಗಳು ಯಾವುವು ?
ಫ್ಲ್ಯಾಟ್ / ಅಪಾರ್ಟ್‌ಮೆಂಟ್ ಖರೀದಿಸುವಾಗ ಈ ಕೆಳಗೆ ವಿವರಿಸಿದ ವಿಷಯವನ್ನು ಪರಿಶೀಲಿಸಿ ಎಲ್ಲವೂ ಸರಿಯಾಗಿದೆಯೇ ಎಂಬುದನ
ಖಚಿತಪಡಿಸಿಕೊಳ್ಳತಕ್ಕದ್ದು:

(i) ಪ್ರೊಮೋಟರ್ರವರೊಂದಿಗೆ ಮಾರಾಟ ಮಾಡಲು ಮಾಡಿಕೊಂಡ ಒಪ್ಪಂದ ಪತ್ರವನ್ನು ಕಡ್ಡಾಯವಾಗಿ ಸಬ್ ರಜಿಸ್ಟಾರ್ ‌ ಕಚೇರಿಯಲ್ಲಿನೋಂದಾಯಿಸಿಕೊಳ್ಳತಕ್ಕದ್ದು, ತದನಂತರ ಖರೀದಿ ಪತ್ರವನ್ನು ಸಹ
ನೋಂದಾಯಿಸಿಕೊಳ್ಳತಕ್ಕದು.
(ii) ಫ್ಲ್ಯಾಟ್ / ಅಪಾರ್ಟ್ ‌ಮೆಂಟ್ ಕಟ್ಟಲು ನಗರಾಭಿವೃದ್ಧಿ ಪ್ರಾಧಿಕಾರ/ಮಹಾನಗರ ಸಭೆ / ಪುರಸಭೆ / ಪಂಚಾಯತ್ ಸಂಸ್ಥೆಯಿಂದ ನಕ್ಷೆಯ ಮಂಜೂರಾತಿ ಪಡೆದಿರಬೇಕು.
(iii) ಮಾರಾಟಗಾರ /ಪ್ರಮೋಟರ್ ರವರಿಗೆ ಆಸ್ತಿಯನ್ನು ಮಾರಾಟ ಮಾಡಲು ಹಕ್ಕು ಇದೆಯೇ ಎಂಬ ಬಗ್ಗೆ ತಿಳಿಯುವುದು.
(iv) ಜನರಲ್ ಪವರ್ ಆಫ್ ಅಟಾರ್ನಿ ಆಧಾರದ ಮೇಲೆ ಖರೀದಿ ವ್ಯವಹಾರ ನಡೆಯುವಂತಿದ್ದರೆ ಈ ಜನರಲ್ ಪವರ್ ಆಫ್ ಆಟಾರ್ನಿಯು ಜಾರಿಯಲ್ಲಿದೆಯೇ ಎಂಬುದನ್ನು ತಿಳಿಯುವುದು.
(v) ಮಂಜೂರಾದ ನಕ್ಷೆಯನ್ನು ಉಲ್ಲಂಘಿಸಿ ಕಟ್ಟಿರುವ ಫ್ಲ್ಯಾಟ್ /ಅಪಾರ್ಟ್ ‌ಮೆಂಟ್‌ಗಳನ್ನು ಖರೀದಿಸಬಾರದು.
(vi) ಸ್ಥಳೀಯ ಸಂಸ್ಥೆಯಿಂದ ಸ್ವಾಧೀನದ ಪ್ರಮಾಣ ಪತ್ರವನ್ನು(Occupancy certificate) ಪಡೆಯಲಾಗಿದೆಯೇ ಎಂದು ತಿಳಿಯುವುದು.
(vii) ಕಟ್ಟಡದ ನಿರ್ವಹಣೆಗೆ ಡಿಕ್ಲ ರೇಷನ್ ಡೀಡ್ (Declaration deed) ಹಾಗೂ ಸಹಕಾರ ಸಂಘ ಅಥವಾ ಕಂಪನಿಯನ್ನು
ನೋಂದಾಯಿಸಲಾಗಿದೆಯೇ ಎಂಬುದನ್ನು ತಿಳಿಯುವುದು.

Related News

spot_img

Revenue Alerts

spot_img

News

spot_img