22.1 C
Bengaluru
Friday, July 19, 2024

ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಯಾವುವು.?

ಬೆಂಗಳೂರು ಜುಲೈ1: ಸಮಾಜದ ಅಭಿವೃದ್ಧಿ, ಸರ್ಕಾರದ ಬೊಕ್ಕಸ ತುಂಬಲು ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಹೆಚ್ಚಿನ ಪ್ರಮಾಣದ ಕೊಡುಗೆಯನ್ನು ಕೊಡುತ್ತಿರು ಪ್ರಮುಖ ವರ್ಗಗಳಲ್ಲಿ ಕಾರ್ಮಿಕ ವರ್ಗ ಒಂದಾಗಿದ್ದು, ಅದರಲ್ಲೂ ಕಟ್ಟಡ ಹಾಗೂ ಇನ್ನಿತರ ನಿರ್ಮಾಣದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಪಾಲು ಹೆಚ್ಚಿನದಾಗಿದೆ. ಹೀಗಿರುವಾಗ ಸರ್ಕಾರಗಳು ಸಹ ಇಂತಹ ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಲು ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಲೇ ಬಂದಿವೆ.

ಆದ್ರೆ ದುರಂತ ಏನಪ್ಪ ಅಂದರೆ ಎಷ್ಟೋ ಜನ ಕಾರ್ಮಿಕರಿಗೆ ಅ ಎಲ್ಲಾ ಸೌಲಭ್ಯಗಳು ಇಂದಿಗೂ ಸಹ ಮರೀಚಿಕೆ ಆಗಿಯೇ ಉಳಿದಿವೆ. ಅಷ್ಟೇ ಏಕೆ ಕಾರ್ಮಿಕರ ಅಭಿವೃದ್ಧಿಗಾಗಿ ಒಂದು ಇಲಾಖೆ ಇದೆ, ಅನ್ನೋದೇ ಎಷ್ಟೋ ಕೂಲಿ‌ ಕಾರ್ಮಿಕರಿಗೆ ಗೊತ್ತೆಯಿಲ್ಲ, ಹೀಗಿರುವಾಗ ಕಾರ್ಮಿಕರ ನೋಂದಣಿ ಮಾಡಲಾಗುತ್ತದೆ, ಕಾರ್ಮಿಕರ ಗುರುತಿನ‌ಚೀಟಿ ಅಂತ ಒಂದು ಕಾರ್ಡ್ ಕೊಡ್ತಾರೆ ಅದ್ರಿಂದ ಹತ್ತು ಹಲವು ಸೌಲಭ್ಯಗಳು ಪಡೆದುಕೊಳ್ಳಬಹುದು ಅನ್ನೋದು ಗೊತ್ತಿರುಲು ಹೇಗೆತಾನೆ ಸಾಧ್ಯ ಹೇಳಿ. ಅಂತಹ ಸಾವಿರಾರು ಲಕ್ಷಾಂತರ ಮಂದಿ ಕಾರ್ಮಿಕರಿಗೆ ಉಪಯೋಗವಾಗಲಿ ಎಂಬುದೇ ಈ‌ ಲೇಖನದ ಉದ್ದೇಶ..

ಕಾರ್ಮಿಕರ ಗುರುತಿನ ಚೀಟಿ ಒಂದೇ; ಸರ್ಕಾರದ ಸೌಲಭ್ಯಗಳು ಹತ್ತು ಹಲವು

ದಿನದ ಇಪ್ಪತ್ನಾಲ್ಕು ಗಂಟೆ ಒಂದಿಲ್ಲ ಒಂದು ರೀತಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಆ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದಾರೆ ಅನ್ನೋದು ಎಷ್ಟು ಸತ್ಯವೋ ಅವರ ದುಡಿಮೆಯಿಂದ ಪರೋಕ್ಷವಾಗಿ ಅಥವಾ ಪ್ರತ್ಯೇಕ್ಷವಾಗಿ ದೇಶದ, ರಾಜ್ಯದ ಬೊಕ್ಕಸವನ್ನು ತುಂಬಿಸುವ ಕೆಲಸ ಮಾಡುತ್ತಿದ್ದಾರೆ ಅವರಿಗೆ ಅರಿವಿಲ್ಲದೆಯೇ ಅವರಿಗಾಗಿ ಸರ್ಕಾರ ಸಹ ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಸಹಾಯ ಹಸ್ತ ಚಾಚುತಿದೆ ಅದು, ನಿಜವಾದ ಫಲಾನುಭವಿಗಳಿಗೆ ತಲುಬೇಕು ಅಷ್ಟೇ. ಇನ್ನು ಸದ್ಯ ಸರ್ಕಾರದಿಂದ ಯಾವೇಲ್ಲ ಸೌಲಭ್ಯಗಳು ಸಿಗುತ್ತಿವೆ ಅಂತ ನೋಡುವುದಾದರೆ…

ನೊಂದಣಿ ಆಗಿದ್ದು ಗುರುತಿನ ಚೀಟಿ ಹೊಂದಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು

* ಪಿಂಚಣಿ ಸೌಲಭ್ಯ ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ತಿಂಗಳಿಗೆ 1,೦೦೦ ರೂಪಾಯಿ

* ನೋಂದಾಯಿತ ಫಲಾನುಭವಿ ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದ್ದರೆ ಪ್ರತೀ ತಿಂಗಳು 1,೦೦೦ ರೂಪಾಯಿ ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ 2,೦೦,೦೦೦ದವರೆಗೆ ಅನುಗ್ರಹ ರಾಶಿ ಸಹಾಯಧನ ಪಡೆದುಕೊಳ್ಳಬಹುದು

* ಟ್ರೈನಿಂಗ್-ಕಮ್-ಟೂಲ್‌ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ)2೦,೦೦೦ವರೆಗೆ ಲಭ್ಯ

*ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ) 2,೦೦,೦೦೦ದವರೆಗೆ ಮುಂಗಡ ಸೌಲಭ್ಯ

ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್)

ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ನೀಡುವ ಸೌಲಭ್ಯವಾಗಿದ್ದು, ಹೆಣ್ಣು ಮಗುವಿನ ಜನನವಾದರೆ 3೦,೦೦೦ ಮತ್ತು ಗಂಡು ಮಗುವಿನ ಜನನವಾಗಿದ್ದರೆ 2೦,೦೦೦ ರೂಪಾಯಿ ಪಡೆಯಲು ಅರ್ಹರಾಗಿರುತ್ತಾರೆ.

* ಅಂತ್ಯಕ್ರಿಯೆ ವೆಚ್ಚ 4,೦೦೦ ರೂಪಾಯ ಹಾಗೂ ಅನುಗ್ರಹ ರಾಶಿ 5೦,೦೦೦ ರೂಪಾಯಿ ಸಹಾಯಧನ

ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ) ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ

1, 2 ಹಾಗೂ 3ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 2,೦೦೦ ರೂಪಾಯಿ,
4, 5 ಹಾಗೂ 6ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 3,೦೦೦ ರೂಪಾಯಿ,
7 ಹಾಗೂ 8ನೇ ತರಗತಿ ಉತ್ತೀರ್ಣರಾದವರಿಗೆ ರೂ. 4,೦೦೦ ರೂಪಾಯಿ, 9, 10 ನೇ ತರಗತಿ ಹಾಗೂ ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6,೦೦೦ ರೂಪಾಯಿ, ದ್ವಿತೀಯ ಪಿ.ಯು.ಸಿ ಉತ್ತೀರ್ಣರಾದವರಿಗೆ 8,೦೦೦ ರೂಪಾಯಿ, ಐಟಿಐ ಮತ್ತು ಡಿಪ್ಲೋಮಾ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7,೦೦೦ ರೂಪಾಯಿ, ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 1೦,೦೦೦ ರೂಪಾಯಿ, ಸ್ನಾತಕೋತ್ತರ ಪದವಿ ಸೇರ್ಪಡೆಗೆ 2೦,೦೦೦ ಅದು ಪ್ರತಿ ವರ್ಷ 1೦,೦೦೦/-ಗಳಂತೆ ಎರಡು ವರ್ಷಗಳಿಗೆ ಪಡೆದುಕೊಳ್ಳಬಹುದು.

ಇಂಜಿನಿಯರಿಂಗ್ ಕೋರ್ಸ್ ಗೆ ಸೇರ್ಪಡೆಗೆ 25,೦೦೦ ಹಾಗೂ ಪ್ರತಿ ವರ್ಷ ತೇರ್ಗಡೆಗೆ 2೦,೦೦೦ ರೂಪಾಯಿ, ವೈದ್ಯಕೀಯ ಕೋರ್ಸ್ ಗೆ ಸೇರ್ಪಡೆಗೆ 3೦,೦೦೦ ಹಾಗೂ ಪ್ರತಿ ವರ್ಷ ತೇರ್ಗಡೆಗೆ 25,೦೦೦ ರೂಪಾಯಿ ಪಡೆದುಕೊಳ್ಳಬಹುದು, ಇನ್ನು ಉನ್ನತ ವ್ಯಾಸಂಗ ಪಿಹೆಚ್‌ಡಿ ಕೋರ್ಸ್ಗೆ ಪ್ರತಿ ವರ್ಷಕ್ಕೆ 2೦,೦೦೦/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿಹೆಚ್‌ಡಿ ಪ್ರಬಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ 2೦,೦೦೦ ನೀಡಲಾಗುತ್ತದೆ.

ಇನ್ನು ಪ್ರತಿಭಾವಂತ ಮಕ್ಕಳಿಗಾಗಿ ಪ್ರೋತ್ಸಾಹ ಧನಸಹಾಯ

ಎಸ್.ಎಸ್‌ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ 5,೦೦೦ರೂಪಾಯಿ

ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ. 75 ಅಂಕ ಪಡೆದವರಿಗೆ 7,೦೦೦ ರೂಪವನ್ನು

ಪದವಿ ಅಥವಾ ತತ್ಸಮಾನ ಕೋರ್ಸ್ನಲ್ಲಿ ಶೇ. 75 ಅಂಕ ಪಡೆದವರಿಗೆ 1೦,೦೦೦ ರೂಪಾಯಿ

ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ ನಲ್ಲಿ ಶೇ. 75 ಅಂಕ ಪಡೆದವರಿಗೆ 15,೦೦೦ ರೂಪಾಯಿ

ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ)

ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ 3೦೦ ರಿಂದ 1೦,೦೦೦ ರೂಪಾಯಿಗಳವರೆಗೆ ಪಡೆಯಬಹುದು

*ಅಪಘಾತ ಪರಿಹಾರ ಮರಣ ಹೊಂದಿದ್ದಲ್ಲಿ 5,೦೦,೦೦೦ ಪರಿಹಾರ ಸರ್ಕಾರದವತಿಯಿಂದ ಆದ್ರೆ ಕೆಲಸ ಮಾಡುತ್ತಿದ್ದ ಕಟ್ಟಡದ ಅಥವಾ ಇನ್ನಿತರ ನಿರ್ಮಾಣಕಾರ್ಯದ ಗುತ್ತಿಗೆದಾರ ಅಥವಾ ಮಾಲೀಕರಿಂದ ಪರಿಹಾರಕ್ಕೆ ಅರ್ಹತೆಯಿದೆ.

ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ 2,೦೦,೦೦೦ ರೂ.ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ 1,೦೦,೦೦೦ ರೂ. ಮತ್ತಿತರೆ ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಗೆ 2,೦೦,೦೦೦ ರೂಪಾಯಿಗಳವರೆಗೆ ಸಹಾಯ

ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್)

ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ 5೦,೦೦೦ ರೂಪಾಯಿ

* LPG ಸಂಪರ್ಕ ಸೌಲಭ್ಯ (ಕಾರ್ಮಿಕ ಅನಿಲ ಭಾಗ್ಯ)
ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟೌವ್

* ಬಿಎಂಟಿಸಿ ಬಸ್ ಪಾಸ್ ಸೌಲಭ್ಯ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಂತಹ ಕಾರ್ಮಿಕರ ವಾಸಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ

* ಕೆಎಸ್‌ಆರ್‌ಟಿಸಿ ಬಸ್ ಪಾಸ್‌ನ ಸೌಲಭ್ಯ ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ

* ತಾಯಿ ಮಗು ಸಹಾಯ ಹಸ್ತ
ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ 6,೦೦೦ ರೂಫಾಯಿಗಳವರೆಗೆ ಸಹಾಯಧನ ಪ್ರತೀತಿಂಗಳು‌500 ರೂಪಾಯಿಗಳಂತೆ ನೀಡಲಾಗುತ್ತದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಣಿ ಪ್ರಕ್ರಿಯೆ ಹೇಗೆ.? ಅರ್ಹತೆಗಳೇನು.?

ಫಲಾನುಭವಿಗಳ ವಯೋಮಿತಿ 18 ರಿಂದ 60 ವರ್ಷದೊಳಗಿರಬೇಕು

* ನೋಂದಣಿ ಮಾಡುವ ಕಛೇರಿಗಳು: ಕಾರ್ಮಿಕ ಅಧಿಕಾರಿಗಳು/ಹಿರಿಯ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ನಿರೀಕ್ಷಕರು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಮುಖ್ಯ ಅಭಿಯಂತರರು

ನೋಂದಣಿಗಾಗಿ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು

* ನಮೂನೆ-V-I ರಲ್ಲಿ ಅರ್ಜಿ

* ಕಾಮಗಾರಿ ನಡೆಯುವ ಕಟ್ಟಡದ ಮಾಲೀಕರು/ ಗುತ್ತಿಗೆದಾರರು, CREDAI (Confederation of Real Estate Developers Association of India), BAI (Builders Association of India) ಅಥವಾ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ ಅಸೋಸಿಯೇಷನ್ ನವರು ನಮೂನೆ-V (A) ರಲ್ಲಿ ನೀಡುವಂತಹ ಉದ್ಯೋಗದ ದೃಢೀಕರಣ ಪತ್ರ ಅಥವಾ ನೋಂದಾಯಿತ ಕಾರ್ಮಿಕ ಸಂಘಗಳು ನಮೂನೆ-V(B)ರಲ್ಲಿ ನೀಡುವಂತಹ ಉದ್ಯೋಗದ ದೃಢೀಕರಣ ಪತ್ರ ಅಥವಾ ಕಾರ್ಮಿಕ ಅಧಿಕಾರಿ / ಹಿರಿಯ ಕಾರ್ಮಿಕ ನಿರೀಕ್ಷಕರು / ಕಾರ್ಮಿಕ ನಿರೀಕ್ಷಕರು ನಮೂನೆ-V (C) ರಲ್ಲಿ ನೀಡುವಂತಹ ಉದ್ಯೋಗದ ದೃಢೀಕರಣ ಪತ್ರ ಅಥವಾ ಪಂಚಾಯತಿ ಅಭಿವೃದ್ಧಿ ಅಧಿಕಾರಿ / ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ನಮೂನೆ- V (D)ರಲ್ಲಿ ನೀಡುವಂತಹ ಉದ್ಯೋಗದ ದೃಢೀಕರಣ ಪತ್ರ

* ಮೂರು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು

*ವಯಸ್ಸಿನ ದೃಢೀಕರಣ ಪತ್ರ: ಶಾಲಾ ದಾಖಲಾತಿ, ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಎಪಿಕ್‌ಕಾರ್ಡ್, ಆಧಾರ್‌ಕಾರ್ಡ್,

ಇನ್ನು ಬಹಳ ಮುಖ್ಯವಾಗಿ ತಿಳಿದವರು ತಿಳಿಯದವರಿಗೆ,ತಿಳಿದಿರುವ ಅಥವಾ ಈ ವಿಚಾರದ ಬಗ್ಗೆ ತಿಳಿದುಕೊಂಡು ಹೇಳುವ ಮನೋಭಾವ ಹಾಗೂ‌ ಸೂಕ್ತ ಕಾಲದಲ್ಲಿ ಸೂಕ್ತ ಕಾನೂನು ರೀತಿಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕ ಮಾಡುವ ಮೂಲಕ, ನಿತ್ಯ ಕಾಯಕ ಯೋಗಿಯಾಗಿ ದುಡಿಯುವ ವರ್ಗದ ಜನರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಕ್ಕರೆ ಅವರ ಶ್ರಮದಾನದ ಶಕ್ತಿ ಹಾಗೂ ನಾಡಿಗೆ ಅವರ ಕೊಡುಗೆ ಮತ್ತಷ್ಟು ಹೆಚ್ಚಾಗುವುದಲ್ಲದೆ ಅವರೂ ಎಲ್ಲರಂತೆ ಸಮಾನತೆಯ ಹಾಗೂ ಸುಖಕರ ಜೀವನ ನಡೆಸಲು ಅನುವುವಾಗುವುದರಲ್ಲಿ ಎರಡು ಮಾತಿಲ್ಲ ಅನ್ನೋದು ನಮ್ಮ ರೆವಿನ್ಯೂ ಫ್ಯಾಕ್ಟ್ ನ್ಯೂಸ್ ನ ಮಹದಾಶಯವಾಗಿದೆ ಎಂದು ನಾವಾದರೂ ಭಾವಿಸಿದ್ದೇವೆ.

ಲಕ್ಷ್ಮೀಪತಿ ಹಿರಿಯ ವರದಿಗಾರರರು

Related News

spot_img

Revenue Alerts

spot_img

News

spot_img