22.6 C
Bengaluru
Saturday, July 27, 2024

Voters List;ದೇಶದಾದ್ಯಂತ ಇಂದು ಮತ್ತು ನಾಳೆ ವಿಶೇಷ ಪರಿಷ್ಕರಣೆ

#Voterslist #special revision #today tomrow #acrosscountry 

ಬೆಂಗಳೂರು;ಭಾರತ ಚುನಾವಣಾ ಆಯೋಗ(Election commission of india) ಹಮ್ಮಿಕೊಂಡಿರುವ ಮತದಾರರ(voters) ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ ರಾಜ್ಯದಲ್ಲಿರುವ ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ಶನಿವಾರ ಮತ್ತು ಭಾನುವಾರದಂದು ವಿಶೇಷ ನೋಂದಣಿ ಅಭಿಯಾನ(Special Registration Campaign) ನಡೆಸಲಿದೆ.ಮತಗಟ್ಟೆ ಅಧಿಕಾರಿಗಳು ಈ ಎರಡೂ ದಿನಗಳಂದು ಬೆಳಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ಮತಗಟ್ಟೆಯಲ್ಲಿ ಉಪಸ್ಥಿತರಿದ್ದು ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲಿದ್ದು, ಮತದಾರರು ತಮ್ಮ ಮತಗಟ್ಟೆಗೆ (polling station)ನೇರವಾಗಿ ಭೇಟಿ ನೀಡಿ ಹೊಸದಾಗಿ ಹೆಸರು ಸೇರ್ಪಡೆ ಸೇರಿದಂತೆ ತಿದ್ದುಪಡಿ ಅಥವಾ ಬದಲಾವಣೆಗಳಿದ್ದಲ್ಲಿ ನೇರವಾಗಿ ಮಾಡಿಸಿಕೊಳ್ಳಬಹುದಾಗಿದೆ.

ಮತದಾರರ ಪಟ್ಟಿಯಲ್ಲಿ ಈಗಾಗಲೇ ನೋಂದಣಿ ಇರುವ ಪ್ರತಿಯೊಬ್ಬ ಮತದಾರರು ಅ. 27ರಂದು ಪ್ರಕಟಿಸಿದ ಕರಡು ಮತದಾರರ(Draft voters) ಪಟ್ಟಿಯಲ್ಲಿ ಹೆಸರು ನಮೂದು ಇರುವ ಬಗ್ಗೆ ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕು. ಮತದಾರರ ಪಟ್ಟಿಯಿಂದ ಹೊರಗುಳಿದ ಯುವ ಮತದಾರರು, ನಿರೀಕ್ಷಿತ ಯುವ ಮತದಾರರು ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ/ಬದಲಾವಣೆ ಮಾಡಬಯಸಿದ್ದಲ್ಲಿ Voter ಸ Helpline Application ಡೌನ್ ಲೋಡ್ ಮಾಡಿಕೊಂಡು ನ ಅಥವಾ https://voters.eci.gov.in ವೆಬ್ಬೆಟ್‌ಗೆ ಲಾಗಿನ್ 2 ಆಗಿ ಆನ್ನೈನ್‌ ಮೂಲಕ ಸಹ ಅರ್ಜಿ ಸಲ್ಲಿಸಬಹುದಾಗಿದೆ. ಸಂಬಂಧಿಸಿದ ಮತಗಟ್ಟೆಯ ಅಧಿಕಾರಿ ಅಥವಾ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಡಿಸೆಂಬರ್ 9 ರವರೆಗೆ ನಡೆಯಲಿದ್ದು, ಸಾರ್ವಜನಿಕರ ಸಹಾಯಕ್ಕಾಗಿ ವಿಶೇಷ ನೋಂದಣಿ ಅಭಿಯಾನವನ್ನು ನವೆಂಬರ್ ತಿಂಗಳ 18 ಮತ್ತು 19 ಹಾಗೂ ಡಿಸೆಂಬರ್ ಮತ್ತು 3 ಶನಿವಾರ ಹಾಗೂ ಭಾನುವಾರಗಳಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸದಾಗಿ ಸೇರ್ಪಡೆಗೊಳ್ಳುವವರು ನಮೂನೆ -6 ರಲ್ಲಿ ಈ ಕೆಳಗಿನ ದಾಖಲೆಗಳ ಜೆರಾಕ್ಸ್‌ ಪ್ರತಿಯನ್ನು ಆಯಾ ಬೂತ್‌ನಲ್ಲಿ ಸಲ್ಲಿಸಬೇಕು :

ಪೋಟೋ – 1
ಆಧಾರ್ ಜೆರಾಕ್ಸ್ – 1
ಪಡಿತರ ಚೀಟಿ ಜೆರಾಕ್ಸ್ – 1
ಶಾಲಾ ಟಿ.ಸಿ ಅಥವಾ ಜನನ ಸರ್ಟಿಫಿಕೇಟ್ ಜೆರಾಕ್ಸ್ – 1
ಮನೆತೆರಿಗೆ ರಶೀದಿ ಜೆರಾಕ್ಸ್-1
ಮೊಬೈಲ್ ನಂಬರ್‌

Related News

spot_img

Revenue Alerts

spot_img

News

spot_img