ಬೆಂಗಳೂರು;ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲು 10 ಕೋಟಿ ಹಿಂದೂ ಕುಟುಂಬಗಳಿಗೆ ಆಹ್ವಾನ ನೀಡಲಾಗುತ್ತದೆ ಎಂದು ವಿಶ್ವ ಹಿಂದು ಪರಿಷದ್ ಹೇಳಿದೆ. ಪರಿಷದ್‌ನ ಕಾರ್ಯಕರ್ತರು ಮನೆಮನೆಗೆ ತೆರಳಿ ಆಹ್ವಾನ ನೀಡಲಿದ್ದಾರೆ. ರಾಮಜನ್ಮಭೂಮಿ ಹೋರಾಟದಲ್ಲಿ ಮಡಿದವರುಟುಂಬಕ್ಕೆ ವಿಶೇಷ ಆಹ್ವಾನ ನೀಡಲಾಗುತ್ತದೆ. ಅವರಿಗೆ ಜ.27ರಿಂದ ಫೆ.22ರವರೆಗೆ ಗುಂಪುಗಳಾಗಿ ಮಾಡಿ ಸ್ವಾಮಿ ದರ್ಶನ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ. ಪ್ರತಿಷ್ಠಾಪನೆಯ ಸುಸಂದರ್ಭದಲ್ಲಿ ದೇಶದ ಎಲ್ಲರೂ ಬರಲಾಗದ ಕಾರಣ ಜನರು ತಮ್ಮ ಸಮೀಪದ ದೇಗುಲಗಳಲ್ಲಿ ಪೂಜೆ ಸಲ್ಲಿಸಿ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಿ ತಮ್ಮ ಮನೆಗಳಲ್ಲಿ ಕನಿಷ್ಠ 5 ದೀಪಗಳನ್ನು ಬೆಳಗಿಸಿ. ನಂತರದ ದಿನದಲ್ಲಿ ರಾಮ ಮಂದಿರಕ್ಕೆ ಭೇಟಿ ನೀಡಬೇಕೆಂದು ಅವರು ಮನವಿ ಮಾಡಿದರು.ಇಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿರುವ ಬೆನ್ನಲ್ಲೇ, ಅಯೋಧ್ಯೆಗೆ ತೆರಳುವ ತಮ್ಮ ರಾಜ್ಯಗಳ ಭಕ್ತರಿಗೆ ವಸತಿ ಸೌಕರ್ಯಕ್ಕಾಗಿ ಕಟ್ಟಡ ನಿರ್ಮಿಸಲು ವಿವಿಧ ರಾಜ್ಯ ಸರ್ಕಾರಗಳು, ವಿವಿಧ ದೇಶಗಳು ಮತ್ತು ನೂರಾರು ಮಠಗಳು ಮುಂದಾಗಿವೆ. ಈ ನಿಟ್ಟಿನಲ್ಲಿ ಉತ್ತರಪ್ರದೇಶ ಸರ್ಕಾರ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಆಸಕ್ತ ರಾಜ್ಯಗಳಿಂದ ನ.10ರಿಂದ ಅರ್ಜಿ ಸ್ವೀಕರಿಸಲು ನಿರ್ಧರಿಸಿದೆ.ವಸತಿ ಗೃಹಗಳ ನಿರ್ಮಾಣಕ್ಕೆಂದೇ ಅಯೋಧ್ಯೆ ಜಿಲ್ಲಾಡಳಿತವು 1405 ಎಕರೆ ಮೀಸಲಿರಿಸಿದ್ದು, ಅಗತ್ಯ ಬಿದ್ದರೆ ಅದನ್ನು 1800 ಎಕರೆಗೆ ವಿಸ್ತರಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ರಾಜಧಾನಿ ನವದೆಹಲಿ ಮತ್ತು ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಹೊಂದಿರುವಂತೆ ಅಯೋಧ್ಯೆಯಲ್ಲೂ ತಮ್ಮ ವಸತಿ ಗೃಹ ನಿರ್ಮಾಣಕ್ಕೆ ರಾಜ್ಯ ಸರ್ಕಾರಗಳು, ಮಠಗಳು ನಿರ್ಧರಿಸಿವೆ.