22.6 C
Bengaluru
Saturday, July 27, 2024

ವಾಸ್ತು ಪ್ರಕಾರ ಮಳೆ ನೀರು ಕೊಯ್ಲು ಅನ್ನು ಯಾವ ದಿಕ್ಕಿನಲ್ಲಿ ಮಾಡಬೇಕು..?

ಬೆಂಗಳೂರು, ಮೇ. 18 : ಈಗ ಎಲ್ಲರೂ ಮನೆಯನ್ನು ನಿರ್ಮಾಣ ಮಾಡುವಾಗ ಮಳೆ ನೀರು ಕೊಯ್ಲು ಅನ್ನು ಅಳವಡಿಸುತ್ತಾರೆ. ಈಗಾಗಲೇ ಭೂಮಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಎಲ್ಲೆಡೆ ನೀರಿನ ಕೊಯ್ಲನ್ನು ಅಳವಡಿಸಲಾಗುತ್ತಿದೆ. ಉತ್ತರ ಕರ್ನಾಟಕದ ಕಡೆಗಳಲ್ಲೆಲ್ಲಾ ಸಾವಿರಾರು ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಮಳೆ ಬಂದಾಗ ನೀರು ಭೂಮಿಯಲ್ಲಿ ಇಂಗದೇ ಇರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮಳೆ ನೀರು ಕೋಯ್ಲು ಮಾಡಿ, ನೀರು ಭೂಮಿಗೆ ಇಂಗುವಂತೆಯೂ, ಮಳೆ ನೀರ ನ್ನು ಕೃಷಿ ಸೇರಿದಂತೆ ಇತರೆ ಕೆಲಸಗಳಿಗೆ ಬಳಸಿಕೊಳ್ಳಬಹುದಾಗುದೆ.

ಇನ್ನು ಮಳೆ ನೀರು ಅಂದರೆ ಅದು ಮೇಲಿಂದ ಸುರಿದು, ಮನೆಯ ಟೆರೆಸ್ ಮೇಲೆ ಬರುತ್ತದೆ. ಅಲ್ಲಿಂದ ಪೈಪ್ ಮುಖಾಂತರ ಸಂಪು ಅಥವಾ ತೊಟ್ಟಿಗಳಿಗೆ ಸೇರುತ್ತವೆ. ಈ ನೀರು ಹೆಚ್ಚಾಗಿ ಕೊಳೆಯಿಂದ ಕೂಡಿರುತ್ತದೆ. ಹಾಗಾಗಿ ಇದನ್ನು ನೇರವಾಗಿ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇದಕ್ಕೋಸ್ಕರ ಸಪರೇಟ್ ಆಗಿ ಸಂಪ್ ಅನ್ನು ಹಾಕಿಸಿ ಅದರಲ್ಲಿ ಫಿಲ್ಟರ್ ಮಾಡಿ ಅದನ್ನು ಕೈ ಕಾಲು ತೊಳೆದುಕೊಳ್ಳುವುದಕ್ಕೆ ಸೇರಿದಂತೆ ಇತರೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ.

ಹೀಗೆ ಮಳೆ ನೀರು ಕೋಯ್ಲು ಮಾಡುವುದಕ್ಕೆ ವಾಸ್ತು ಪ್ರಕಾರ ವಾಯುವ್ಯ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು. ಇದು ಬದಲಾವಣೆ ಹಾಗೂ ರಿಸೈಕಲ್ ಮಾಡುವುದರಿಂದ ವಾಯುವ್ಯ ದಿಕ್ಕು ಬಹಳ ಸಮರ್ಪಕ. ಆದರೆ, ಈಶಾನ್ಯದಲ್ಲಿ ಇರುವ ನೀರು ಎಲ್ಲವುದಕ್ಕೂ ಬಳಸಿಕೊಳ್ಳುವುದಕ್ಕಾಗಿ ಮಾತ್ರವೇ ಸೂಕ್ತ. ವಾಯುವ್ಯದಲ್ಲಿ ಮಳೆ ನೀರು ಕೊಯ್ಲು ಇರುವುದು ತುಂಬಾ ಒಳ್ಳೆಯದು. ಇದರಿಂದ ಈ ನೀರು ಭೂಮಿಯಲ್ಲಿ ಇಂಗುವುದಕ್ಕೂ ಚಂದ್ರ ಸಹಾಯ ಮಾಡುತ್ತಾನೆ. ಹಾಗಾಗಿ ವಾಯುವ್ಯ ಮಳೆ ನೀರು ಕೊಯ್ಲಿಗೆ ಬೆಸ್ಟ್ ದಿಕ್ಕು.

Related News

spot_img

Revenue Alerts

spot_img

News

spot_img