ಮನೆಯ ಸದಸ್ಯರ ಪೈಕಿ ಯಾರು ಹೆಚ್ಚು ಧನಾತ್ಮಕ ಯಾರು ಹೆಚ್ಚು ಋಣಾತ್ಮಕ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಬಿಗ್ ಬಾಸ್ ಒಂದು ಚಟುವಟಿಕೆಯನ್ನು ನೀಡಿದ್ದರು. ನೆಗೆಟಿವಿಟಿಗೆ ಬೇರು ನಾನಾದರೆ ಅದಕ್ಕೆ ಬೀಜ ಬಿತ್ತಿರೋದೇ ಸಂಗೀತ ಎಂದು ಮುಖಕ್ಕೆ ಹೊಡೆದಾಗ ವಿನಯ್ ಹೇಳಿದ್ರು. ಈ ಮನೆಯಲ್ಲಿ ನೆಗೆಟಿವಿಟಿ ಗೆ ಕಾರಣ ಆಗಿರೋದೇ ಸಂಗೀತ ಅಂತ ನನಗನಿಸುತ್ತೆ ಎಂದು ವಿನಯ್ ವಿಚಿತ್ರವಾಗಿ ಆಕ್ಷನ್ ಮಾಡಿ ನೆಗೆಟಿವ್ ನಲ್ಲಾದ್ರೂ ಗೆಲ್ಸೋಣ ನಿಮ್ನ ಅಂತ ಇತರ ಮಾಡ್ದೆ ಅಂತ ಆಕ್ಷನ್ ಮಾಡ್ತಾ ಹೇಳಿದ್ರು.
ಸಂಗೀತ ಕೈ ಸೇರಿದ ಅತಿ ಹೆಚ್ಚು ಬ್ಲಾಕ್ ರೋಜ್…!
ಈ ಚಟುವಟಿಕೆಯಲ್ಲಿ ಅತಿ ಹೆಚ್ಚು ಧನಾತ್ಮಕ ಬಿಳಿಯರೋದನ್ನು ವರ್ತೂರ್ ಸಂತೋಷ್ ಪಡೆದುಕೊಂಡ್ರು, ಮನೆಯವರ ಮೆಚ್ಚುಗೆಗೆ ವರ್ತು ಸಂತೋಷ್ ಪಾತ್ರರಾಗಿದ್ದಾರೆ. ಅತಿ ಹೆಚ್ಚು ಬ್ಲಾಕ್ ಕಲರ್ ಗುಲಾಬಿಯನ್ನು ಸಂಗೀತ ಅವ್ರ್ ಪಡೆದುಕೊಂಡು ಮನೆಯವರೆಲ್ಲ ಅವ್ರ್ನ ನೆಗೆಟಿವ್ ಎಂದು ಬಿಂಬಿಸಿದ್ದಾರೆ.
ಧನಾತ್ಮಕ ಟೀಮ್ ಲೀಡರ್ ಯಾರು…?
ಬಿಗ್ ಬಾಸ್ ಮತ್ತೆ ಒಂದು ಟಾಸ್ಕ್ ನೀಡಿದ್ರು. ಒಂದು ಗುಂಪಿನ ಲೀಡರ್ ಆಗಿ ವರ್ತುರ್ ಸಂತೋಷ್ ಒಂದು ಟೀಮ್ ಸಂಗೀತಾಜ ಎಂದು ಹೇಳ್ತಾರೆ. ಋಣಾತ್ಮಕ ಮತ್ತು ಧನಾತ್ಮಕ ಮನಸ್ಥಿತಿ ತುಂಬಿರುವ ಜಗತ್ತನ್ನು ಪ್ರತಿಬಿಂಬಿಸಿ ಈ ಟಾಸ್ಕ್ ಅನ್ನ ಬಿಗ್ ಬಾಸ್ ರೂಪಿಸಿ ಎರಡು ಟೀಮ್ ಮಾಡ್ತಾರೆ ಒಂದು ಗಂಧರ್ವರು ಮತ್ತು ರಾಕ್ಷಸರು. ಸಂಗೀತ ಗುಂಪು ರಾಕ್ಷಸರು ಮತ್ತು ವರ್ತೂರ್ ಸಂತೋಷ್ ಗುಂಪು ಗಂಧರ್ವರು.
ರಾಕ್ಷಸನಂತೆ ವರ್ತಿಸುವ ವಿನಯ್ ಗಂಧರ್ವ ಟೀಮ್ …!
ಬಿಗ್ ಬಾಸ್ ನೋಡುವ ಪ್ರೇಕ್ಷಕರ ಮನಸಲ್ಲಿ ರಾಕ್ಷಸನಂತೆ ವರ್ತಿಸುವ ವಿನಯ್ ಗಂಧರ್ವನಾಗಿದ್ದಾನಲ್ಲ ಎಂದು ನಗೆಯ ಕಾಮೆಂಟ್ ಮಾಡಿದ್ದಾರೆ. ಸ್ನೇಹಿತ್ ಮೇಲೆ ತನಿಷಾ ಕಿರಚಾಡಿ ಕ್ಯಾಪ್ಟನ್ ಆದ ಮೇಲೆ ಪಕ್ಷಪಾತ ಮಾಡ್ತಿದ್ದಾರೆ ವಾರದಂತ್ಯದಲ್ಲಿ ಕ್ಲಾಸ್ ತಗೊಂಡ್ರು ಸ್ನೇಹಿತ್ ಗೆ ಬುದ್ಧಿ ಬಂದಿಲ್ಲ ಅಣ್ಣ ಅಣ್ಣ ಅನ್ಕೊಂಡು ವಿನಯ್ ವಿನಯ್ ನಾ ಸೇಫ್ ಮಾಡ್ಕೊಂಡು ಆಟ ಆಡ್ತಾ ಇದ್ದಾರೆ ಎಂದು ಹೇಳಿದ್ರು.