21.4 C
Bengaluru
Saturday, July 27, 2024

ಬಿಗ್ ಬಾಸ್ ಮನೆಯ ಆಟದಲ್ಲಿ ವರ್ತು ಸಂತೋಷ್ ಹಿಂದೆ ಇದ್ದಾರಾ..?

ಬಿಗ್ ಬಾಸ್ ಮನೆಯಲ್ಲಿ 11 ವಾರಗಳ ಪ್ರದರ್ಶನವನ್ನು ಗಮನಿಸಿದಂತಹ ಬಿಗ್ ಬಾಸ್ ಯಾವ ವ್ಯಕ್ತಿ ಆಟದಲ್ಲಿ ಹಿಂದೆ ಇದ್ದಾರೆ, ಇಲ್ಲಿ ಇರಲು ಅರ್ಹತೆ ಇರದವರನ್ನು ಆಯ್ಕೆ ಮಾಡಿ ಎಂದು ‘ಬಿಗ್ ಬಾಸ್’ ಹೇಳಿತ್ತು. ಅದರಂತೆ ಬಹುತೇಕರು ವರ್ತೂರು ಸಂತೋಷ್ ಅವರು ಆಟದಲ್ಲಿ ಹಿಂದೆ ಇದ್ದಾರೆ ಎಂದು ತಮ್ಮ ಅಭಿಪ್ರಾಯವನ್ನ ಹೊರಹಾಕಿದ್ದರು. ಇನ್ನು ಯಾವ್ಯಾವ್ ಸ್ಪರ್ಧಿ ಈ ಬಗ್ಗೆ ಏನೇನು ಹೇಳಿದ್ದರು ಬನ್ನಿ ನೋಡೋಣ..!

ನಮ್ರತಾ ಗೌಡ: ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಲೈಟ್ ಆಗಿ ತಗೊಂಡರು. ಮನೆಯಲ್ಲಿ ಎಲ್ಲರ ಗ್ರಾಫ್‌ಗಿಂತ ಇವರ ಗ್ರಾಫ್ ಒಂದೇ ಥರ ಇದೆ.

ಕಾರ್ತಿಕ್: ವರ್ತೂರು ಸಂತೋಷ್ ಕಾರಣ ನೀಡುವಾಗ ತೂಕ ಕಾಣಿಸೋದಿಲ್ಲ. ನನ್ನ ಜೊತೆ ಅಷ್ಟು ಕನೆಕ್ಟ್ ಆಗಿಲ್ಲ. ಪ್ರತಿಯೊಂದು ಮಾತಿಗೂ ಅವರು ಜನರಿದ್ದಾರೆ, ಜನರು ಮತ ಹಾಕ್ತಾರೆ ಅಂತ ಹೇಳ್ತಾರೆ. ಅವರಿಗೆ ಸಿಕ್ಕಷ್ಟು ಮಹತ್ವ ಯಾರಿಗೂ ಸಿಕ್ಕಿಲ್ಲ ಅಂತ ಭಾವಿಸ್ತೀನಿ.

ತುಕಾಲಿ ಸ್ಟಾರ್ ಸಂತು: ಡ್ರೋನ್ ಪ್ರತಾಪ್ ಎಲ್ಲರ ಜೊತೆ ಮಿಂಗಲ್ ಆಗಿ ಬೆರೆಯೋದಿಲ್ಲ. ಗೇಮ್ ಉಸ್ತುವಾರಿ, ಲೆಟರ್ ಬಂದಾಗ ಆಡಿದ್ದು ಬಿಟ್ಟರೆ ಅವರು ವೀಕ್ ಅಂತ ಅನಿಸುತ್ತದೆ.

ಸಂಗೀತಾ: ಹಿಂದೆ ಉಳಿಯುತ್ತಿರೋದು ವರ್ತೂರು ಸಂತೋಷ್

ವಿನಯ್ ಗೌಡ: ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಅವರು ಒಂದೇ ತಕ್ಕಡಿಯಲ್ಲಿ ತೂಗುತ್ತಾರೆ. ಆದರೆ ವರ್ತೂರು ಸಂತೋಷ್ ಸ್ಲೋ ಉಳಿದರು ಅಂತ ಅನಿಸುತ್ತದೆ.

ವರ್ತೂರು ಸಂತೋಷ್: ಗೇಮ್ ಅಂತ ಬಂದಾಗ ನಾನು ಯಾವುದೇ ಆಟ ಆಡಿಲ್ಲ ಅಂತ ಹಿಂದೆ ಉಳಿದಿಲ್ಲ. ಕ್ಯಾಪ್ಟನ್ಸಿ ಟಾಸ್ಕ್ ಅವರ ವೈಯಕ್ತಿಯ ಇಷ್ಟ. ಕಾರ್ತಿಕ್ ಹೇಳಿದ ಅಭಿಪ್ರಾಯ ನನಗೆ ಇಷ್ಟ ಆಗಿಲ್ಲ. ಜನರ ಅಭಿಪ್ರಾಯ ತುಂಬ ಮುಖ್ಯ ಆಗುತ್ತದೆ. ಅದಿಕ್ಕೆ ನಾನು ಕಾರ್ತಿಕ್‌ಗೆ Pause ಕೊಡ್ತಿದೀನಿ. ಕಾರ್ತಿಕ್ ಅವರು ಮಾತಾಡಿದ್ರೆ ಮಾತ್ರ ನಾನು ಮಾತಾಡ್ತೀನಿ.

ವರ್ತೂರು ಸಂತೋಷ್ ಹೇಳಿದ ಅದೊಂದು ಮಾತಿಗೆ ಕಣ್ಣೀರು ಹಾಕಿದ ‘ಬೆಂಕಿ’; ‘ಮುಗ್ಧರು ಅಂತ ಅನ್ಕೊಂಡಿದ್ದೆ’ ಎಂದ ತನಿಷಾ

ಮೈಕಲ್: ರಿಯಾಲಿಟಿ ಶೋನಲ್ಲಿ ಮತ ತುಂಬ ಮಹತ್ವ. ವರ್ತೂರು ಸಂತೋಷ್ ಅವರಿಗೆ ಪ್ರೇಕ್ಷಕರ ಬೆಂಬಲ ಜಾಸ್ತಿ ಇದೆ. ಆದರೆ ಆಟದಲ್ಲಿ ಅಷ್ಟೇನೂ ಕಾಣಿಸ್ತಿಲ್ಲ.

ಡ್ರೋನ್ ಪ್ರತಾಪ್: ಅಭಿಪ್ರಾಯ ವ್ಯಕ್ತಪಡಿಸೋದು ತುಂಬ ಮುಖ್ಯ. ನಾವು ನಾವಾಗಿದ್ದೀವೋ ಎನ್ನೋದು ಮುಖ್ಯ ಆಗುತ್ತದೆ. ಮೊದಲ ದಿನದಿಂದ ಅಭಿಪ್ರಾಯ ವ್ಯಕ್ತಪಡಿಸೋದರಲ್ಲಿ ಸಿರಿ ಅವರು ಹಿಂದೆ ಉಳಿದರು ಅಂತ ಅನಿಸುತ್ತದೆ.

ಈ ರೀತಿಯಾದಂತಹ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದಂತಹ ಮನೆ ಮಂದಿ ನೇರವಾಗಿ ವರ್ತೂರ್ ಸಂತೋಷ್ ಅವರನ್ನ ಟಾರ್ಗೇಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಭಾನುವಾರದವರೆಗೂ ಕಾದು ನೋಡಬೇಕಿದೆ ಯಾರು ಮನೆಯಿಂದ ಹೊರ ಬರುತ್ತಾರೆ ಅಂತ..!

Related News

spot_img

Revenue Alerts

spot_img

News

spot_img