#UPI #Now in France# India’s #UPI # France #launched #today
ನವದೆಹಲಿ;ಭಾರತದ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (Unified Payments Interface) ಸೇವೆಗಳು ಈಗ ಫ್ರಾನ್ಸ್(France)ನಲ್ಲಿಯೂ ಲಭ್ಯವಿರುತ್ತವೆ. ಫ್ರಾನ್ಸ್‌ನಲ್ಲಿ ನಡೆದ ಗಣರಾಜ್ಯೋತ್ಸವ (Republic Day )ಸಮಾರಂಭದಲ್ಲಿ ಯುಪಿಐ(UPI) ಪಾವತಿಗೆ ಚಾಲನೆ ನೀಡಲಾಗಿದೆ. ಭಾರತೀಯ ಪ್ರವಾಸಿಗರು UPI ಮೂಲಕ ಐಫೆಲ್ ಟವರ್ ಟಿಕೆಟ್‌ಗಳನ್ನು ಖರೀದಿಸಬಹುದು. ಭಾರತದ UPI ಅನ್ನು ಫ್ರಾನ್ಸ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ಮೋದಿ ಈ ಹಿಂದೆ ಘೋಷಿಸಿದ್ದು ಗೊತ್ತೇ ಇದೆ. ಇತ್ತೀಚಿನ ಬೆಳವಣಿಗೆಯೊಂದಿಗೆ, ಭಾರತದ UPI ಕಾರ್ಯನಿರ್ವಹಿಸುತ್ತಿರುವ ಮೊದಲ ಯುರೋಪಿಯನ್ ರಾಷ್ಟ್ರ ಫ್ರಾನ್ಸ್ ಆಗಿದೆ.ಫ್ರಾನ್ಸ್ ತನ್ನ ದೇಶದಲ್ಲಿ ಯುಪಿಐ ಅಂದರೆ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಅನ್ನು ಅಳವಡಿಸುತ್ತಿದೆ. ಇದರ ಮೊದಲ ವ್ಯವಹಾರ(Transaction) ಐಫೆಲ್ ಟವರ್‌ನಲ್ಲಿ ( Eiffel Tower ) ನಡೆಯಲಿದೆ. ಭಾರತೀಯ ಪ್ರವಾಸಿಗರು UPI ಮೂಲಕ ಭಾರತೀಯ ಕರೆನ್ಸಿಯಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತದೆ. ಅವರು ಇನ್ನು ಮುಂದೆ ಹಣ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ,ಭಾರತೀಯ ಪ್ರವಾಸಿಗರು ಈಗ ಯುಪಿಐ ಬಳಸಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು ಮತ್ತು ಐಫೆಲ್ ಟವರ್‌ಗೆ ಭೇಟಿ ನೀಡಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಎನ್‌ಪಿಸಿಐ ಹೇಳಿದೆ.ವಿಶ್ವಾದ್ಯಂತ ಎಲ್ಲಾ ವಹಿವಾಟುಗಳಲ್ಲಿ 46 ಪ್ರತಿಶತದಷ್ಟು UPI ಮೂಲಕ ಮಾಡಲಾಗುತ್ತದೆ. ಯುಪಿಐ ಪಾವತಿ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದು ರಾಯಭಾರಿ ಕಚೇರಿ ತಿಳಿಸಿದೆ.ಐಫೆಲ್ ಟವರ್‌ಗೆ ಭೇಟಿ ನೀಡುವ ಅಂತರರಾಷ್ಟ್ರೀಯ ಪ್ರವಾಸಿಗರಲ್ಲಿ ಭಾರತೀಯರು 2ನೇ ಸ್ಥಾನದಲ್ಲಿದ್ದಾರೆ . ಹಾಗಾಗಿ ಈ ಸೌಲಭ್ಯವನ್ನು ಜಾರಿ ಮಾಡಲಾಗಿದ್ದು, ಭಾರತೀಯ ಪ್ರವಾಸಿಗರು QR ಕೋಡ್ ಮೂಲಕ ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದಾಗಿದೆ.