25.5 C
Bengaluru
Friday, September 20, 2024

ಬೆಂಗಳೂರಿನಲ್ಲಿ ಭಾರತದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

#Union Minister #Ashwini vaishnav #inagurates #3D printed #postoffice

ನವದೆಹಲಿ: ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿಯನ್ನು ಶುಕ್ರವಾರ ಬೆಂಗಳೂರಿನಲ್ಲಿ ಕೇಂದ್ರ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದರು.ಬಳಿಕ ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಕಚೇರಿಯ ಮಾದರಿ​ ಬಿಡುಗಡೆ ಮಾಡಿದರು.ಕೇಂದ್ರ ಸಚಿವರು ತಮ್ಮ ಉದ್ಘಾಟನಾ ಭಾಷಣದಲ್ಲಿ 3ಡಿ-ಮುದ್ರಿತ ಅಂಚೆ ಕಚೇರಿಯ ಪ್ರಾರಂಭವು ಪ್ರಸ್ತುತ ದಿನದಲ್ಲಿ ದೇಶವು ಪ್ರಗತಿಯಲ್ಲಿರುವ ಮನೋಭಾವವನ್ನು ಸೂಚಿಸುತ್ತದೆ ಎಂದು ಹೇಳಿದರು.

ಮಾರ್ಚ್ 21 ರಂದು ಅಂಚೆ ಕಚೇರಿ ನಿರ್ಮಾಣ ಕೆಲಸ ಶುರುವಾಗಿತ್ತು, ಹಲಸೂರಿನ ಕೇಂಬ್ರಿಡ್ಜ್ ಲೇಔಟ್‌ನ ಜನನಿಬಿಡ ಪ್ರದೇಶದಲ್ಲಿ, 1,000 ಚದರ ಅಡಿಯ ಅಂಚೆ ಕಚೇರಿಯನ್ನು ಕೇವಲ 45 ದಿನಗಳ ಬಿಗಿಯಾದ ಕಾಲಮಿತಿಯಲ್ಲಿ ಈ ಕ್ರಾಂತಿಕಾರಿ ತಂತ್ರಜ್ಞಾನವನ್ನು ಬಳಸಿಕೊಂಡು ವಿನ್ಯಾಸಗೊಳಿಸಲಾಗಿದೆ ಮತ್ತು ಪೂರ್ಣಗೊಳಿಸಲಾಗಿದೆ. ‘ಕೆಲಬ್ರಿಡ್ ಲೆವೆಟ್ ಅಂಚೆ ಕಚೇರಿ ಎಂದು ಹೆಸರಿಸಲಾಗಿದೆ.ಕಟ್ಟಡದ ನಿರ್ಮಾಣ ಕಾರ್ಯ ಮೇ 3ರ ಒಳಗಡೆಯೇ ಪೂರ್ಣಗೊಂಡಿದ್ದರೂ, ಒಳಚರಂಡಿ ಮತ್ತು ನೀರಿನ ಸಂಪರ್ಕ ಸಂಬಂಧ ಎರಡು ತಿಂಗಳು ಸಮಯ ತೆಗೆದುಕೊಂಡಿತು.

ಭಾರತವು ತನ್ನದೇ ಆದ 4G ಮತ್ತು 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ. ಭಾರತವು ತನ್ನದೇ ಆದ ಸಂಕೀರ್ಣವಾದ ಟೆಲಿಕಾಂ ಸಾಧನಗಳನ್ನು ಉತ್ಪಾದಿಸುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ.ಭಾರತವು ಟೆಲಿಕಾಂ ತಂತ್ರಜ್ಞಾನದ ತಯಾರಕ ಮತ್ತು ಡೆವಲಪರ್ ಆಗಿ ಹೊರಹೊಮ್ಮಬಹುದು ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ವೈಷ್ಣವ್ ಹೇಳಿದ್ದಾರೆ.ಎಲ್ ಟಿ ಲಾರ್ಸನ್ ಮತ್ತು ಟೂರು ನಿರ್ಮಿಸಿರುವ ಕಟ್ಟಿದವ ಸುಮಾರು 1100 ಚದರ ಅಡಿ ವಿಸ್ತೀರ್ಣದಲ್ಲಿದೆ. 3ಡಿ ತಂತ್ರಜ್ಞಾನ ಅಳವಡಿಸಲು ತೆರಿಗೆ ಸೇರಿ ಸುಮಾರು 2 ಲಕ್ಷ ರು. ವೆಚ್ಚವಾಗಿದೆ.ಡ್ರೈನೇಜ್ ಸಂಪರ್ಕ ಮತ್ತು ನೀರಿನ ಸಂಪರ್ಕದಂತಹ ಇತರ ವೆಚ್ಚಗಳು ಸೇರಿ ಸುಮಾರು 40 ಲಕ್ಷ ರೂಪಾಯಿ ವೆಚ್ಚವಾಗಿದೆ.

Related News

spot_img

Revenue Alerts

spot_img

News

spot_img