20.8 C
Bengaluru
Saturday, July 27, 2024

ರಾಜ್ಯದ ಐವರು ಪೊಲೀಸ್‌ ಸಿಬ್ಬಂದಿಗಳಿಗೆ ಕೇಂದ್ರ ಗೃಹ ಸಚಿವರ ಶ್ರೇಷ್ಠ ಪದಕ,

#homeminister medal #Exelence medal #Police personnel

ನವದೆಹಲಿ: ಅತ್ಯುತ್ತಮ ತನಿಖೆಗಾಗಿ ನೀಡಲಾಗುವ 2023ರ ಸಾಲಿನ ಗೃಹಮಂತ್ರಿಗಳ ಪದಕವನ್ನು ಕೇಂದ್ರ ಗೃಹ ಸಚಿವಾಲಯ ಶನಿವಾರ ಪ್ರಕಟಿಸಿದ್ದು, ರಾಜ್ಯದ ಐವರು ಪೊಲೀಸ್ ಅಧಿಕಾರಿಗಳು ಈ ಪಟ್ಟಿಯಲ್ಲಿದ್ದಾರೆ. ಅಪರಾಧ ಪ್ರಕರಣಗಳ ಅತ್ಯತ್ತಮ ತನಿಖೆಗಾಗಿ ಕೇಂದ್ರ ಗೃಹ ಇಲಾಖೆಯು ಪ್ರತಿ ವರ್ಷ ನೀಡುವ ಕೇಂದ್ರ ಗೃಹ ಸಚಿವರ ಪದಕಕ್ಕೆ ಕರ್ನಾಟಕದ ಐವರು ಪೊಲೀಸ್‌ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಶಂಕರ್ ಎಂ. ರಾಗಿ, ತಾವರೆಕೆರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ರಾಮಪ್ಪ ಬಿ.ಗುತ್ತೇದಾರ್, ಬೆಂಗಳೂರು ಹೈ ಗ್ರೌಂಡ್ ಠಾಣೆಯ ಇನ್ ಸ್ಪೆಕ್ಟರ್ ಶಿವಸ್ವಾಮಿ ಸಿ.ಬಿ., ಶಿವಮೊಗ್ಗ ವಿನೋಬ್ ನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ರುದ್ರೇಗೌಡ ಆರ್.ಪಾಟೀಲ್, ಬೆಂಗಳೂರು ಆರ್ ಎಂಸಿ ಯಾರ್ಡ್ ಠಾಣೆಯ ಇನ್ ಸ್ಪೆಕ್ಟರ್ ಪಿ. ಸುರೇಶ್ ಅವರು ಕೇಂದ್ರ ಗೃಹ ಸಚಿವರ ಪದಕಕ್ಕೆ ಆಯ್ಕೆಯಾಗಿದ್ದಾರೆ.ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೇಶದ ಒಟ್ಟು 140 ಮಂದಿ ಅತ್ಯುತ್ತಮ ಅಧಿಕಾರಿಗಳನ್ನು ಈ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಇದರಲ್ಲಿ 15 ಸಿಬಿಐ, 12ಎನ್ ಐಎ ಹಾಗೂ ಉತ್ತರ ಪ್ರದೇಶದ 10, ಕೇರಳ ಹಾಗೂ ರಾಜಸ್ಥಾನದಿಂದ 9, ತಮಿಳುನಾಡಿನ 8, ಮಧ್ಯಪ್ರದೇಶದ 7 ಗುಜರಾತ್ ನ 6 ಹಾಗೂ ಕರ್ನಾಟಕದ 5 ಪೊಲೀಸ್ ಅಧಿಕಾರಿಗಳು ಸೇರಿದಂತೆ ಪದಕಕ್ಕೆ ಆಯ್ಕೆಯಾಗಿದ್ದಾರೆ. ಈ ಪದಕ ಪುರಸ್ಕೃತರಲ್ಲಿ 22 ಮಹಿಳಾ ಅಧಿಕಾರಿಗಳು ಇದ್ದಾರೆ.2018ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರತಿ ವರ್ಷ ಆ.12 ರಂದು ಪ್ರಶಸ್ತಿ ಪಡೆದವರ ಹೆಸರು ಘೋಷಣೆ ಮಾಡಲಾಗುತ್ತದೆ.

Related News

spot_img

Revenue Alerts

spot_img

News

spot_img