25.4 C
Bengaluru
Saturday, July 27, 2024

Union Finance Ministry Order;ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್ ಮತ್ತು ಪ್ಯಾನ್ ಕಡ್ಡಾಯ

ನವದೆಹಲಿ ಏ3;ಧಾರ್‌ ಮತ್ತು ಪ್ಯಾನ್‌ ಲಿಂಕ್‌ ಮಾಡುವ ಕೊನೆಯ ದಿನಾಂಕವನ್ನು ಜೂನ್‌ 30ರವರೆಗೆ ವಿಸ್ತರಿಸಲಾಗಿದೆ. ಕೆವೈಸಿ ಪ್ರಕ್ರಿಯೆಗೆ ಇವೆರಡು ದಾಖಲೆಗಳು ಈಗ ಅವಶ್ಯವಾಗಿದೆ. ಇದಿಗ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆ ಕಡ್ಡಾಯವೆಂದು ಹಣಕಾಸು ಸಚಿವಾಲಯ ತಿಳಿಸಿದೆ.ಸಾರ್ವಜನಿಕ ಭವಿಷ್ಯ ನಿಧಿ PPF, ಸುಕನ್ಯಾ ಸಮೃದ್ಧಿ ಯೋಜನೆ (SSY), ಅಂಚೆ ಕಚೇರಿ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಮುಂತಾದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ಯಾನ್ ಮತ್ತು ಆಧಾರ್ ಸಂಖ್ಯೆ ಕಡ್ಡಾಯವಾಗಿದೆ.ಕೇಂದ್ರ ಸರ್ಕಾರದ ಈ ಅಧಿಸೂಚನೆಗೂ ಮುನ್ನ ಆಧಾರ್ ಸಂಖ್ಯೆಯನ್ನು ಸಲ್ಲಿಸದೆಯೇ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾಗಿತ್ತು. ಆದರೆ, ಇನ್ನು ಮುಂದೆ, ಸರ್ಕಾರಿ ಬೆಂಬಲಿತ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಕನಿಷ್ಠ ಆಧಾರ್ ನೋಂದಣಿ ಸಂಖ್ಯೆಯನ್ನು ಸಲ್ಲಿಸಬೇಕಾಗುತ್ತದೆ. ಅಲ್ಲದೆ, ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹೂಡಿಕೆಯನ್ನು ಮಾಡಿದರೆ, ಬಳಕೆದಾರರು ಪ್ಯಾನ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಸಣ್ಣ ಉಳಿತಾಯ ಚಂದಾದಾರರು ಪಿಪಿಎಫ್, ಎಸ್ ಎಸ್ ವೈ, ಎನ್ ಎಸ್ ಸಿ, ಎಸ್ ಸಿಎಸ್ ಎಸ್ ಅಥವಾ ಯಾವುದೇ ಇತರ ಸಣ್ಣ ಉಳಿತಾಯ ಖಾತೆಯನ್ನು ತೆರೆಯುವಾಗ ತಮ್ಮ ಆಧಾರ್ ಸಂಖ್ಯೆಯನ್ನು ಸಲ್ಲಿಸದಿದ್ದರೆ 30ನೇ ಸೆಪ್ಟೆಂಬರ್ 2023 ರೊಳಗೆ ಒಬ್ಬರ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕಾಗುತ್ತದೆ. ಆಧಾರ್ ಸಂಖ್ಯೆ ಇಲ್ಲದೆ ಯಾವುದೇ ಸಣ್ಣ ಉಳಿತಾಯ ಯೋಜನೆಯನ್ನು ತೆರೆಯಲು ಬಯಸುವ ಹೊಸ ಚಂದಾದಾರರು ಖಾತೆ ತೆರೆದ ಆರು ತಿಂಗಳೊಳಗೆ ಆಧಾರ್ ಸಂಖ್ಯೆಯನ್ನು ಒದಗಿಸಬೇಕು ಎಂದು ಅಧಿಸೂಚನೆಯು ಸ್ಪಷ್ಟಪಡಿಸಿದೆ. ಒಂದು ಸಣ್ಣ ಉಳಿತಾಯ ಯೋಜನೆಯ ಚಂದಾದಾರರು UIDAI ನಿಂದ ತನ್ನ ಆಧಾರ್ ಸಂಖ್ಯೆಯನ್ನು ಇನ್ನೂ ಪಡೆಯದಿದ್ದಲ್ಲಿ ಒಬ್ಬರ ಆಧಾರ್ ನೋಂದಣಿ ಸಂಖ್ಯೆ ಕಾರ್ಯನಿರ್ವಹಿಸುತ್ತದೆ.ಈಗಾಗಲೇ ಸಣ್ಣ ಉಳಿತಾಯ ಯೋಜನೆಗಳಲ್ಲಿ ಖಾತೆ ಹೊಂದಿದ್ದು, ಆಧಾರ್ ಸಂಖ್ಯೆ ಒದಗಿಸಲು ವಿಫಲರಾಗಿರೋರ ಖಾತೆಯನ್ನು 2023ರ ಅಕ್ಟೋಬರ್ 1ರಿಂದ ಫ್ರೀಜ್ ಮಾಡಲಾಗುತ್ತದೆ.

ಸಣ್ಣ ಉಳಿತಾಯ ಯೋಜನೆಗಳ ಖಾತೆ ತೆರೆಯುವಾಗ ಪ್ಯಾನ್ ಸೇರ್ಪಡೆಗೊಳಿಸೋದು ಅಗತ್ಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಖಾತೆ ತೆರೆಯುವ ಸಮಯದಲ್ಲಿ ಪ್ಯಾನ್ ಸಲ್ಲಿಕೆ ಮಾಡದಿದ್ರೆ, ಈ ಕೆಳಗಿನ ಸಂದರ್ಭಗಳಲ್ಲಿ ಖಾತೆ ತೆರೆದ ಎರಡು ತಿಂಗಳೊಳಗೆ ಸಲ್ಲಿಕೆ ಮಾಡಬೇಕು. ಖಾತೆ ತೆರೆಯುವ ಸಮಯದಲ್ಲಿ ಪ್ಯಾನ್‌ ಸಂಖ್ಯೆ ಸಲ್ಲಿಸದೆ ಇದ್ದರೆ ಎರಡು ತಿಂಗಳೊಳಗೆ ಸಲ್ಲಿಸಬೇಕು. ಉಳಿತಾಯ ಖಾತೆಯಲ್ಲಿ ಬ್ಯಾಲೆನ್ಸ್‌ ಮೊತ್ತ 50,000 ರೂ.ಗಿಂತ ಹೆಚ್ಚಿದ್ದರೆ ಪ್ಯಾನ್‌ ಕಾರ್ಡ್‌ ಸಲ್ಲಿಸಲೇಬೇಕು.ಒಂದು ತಿಂಗಳಲ್ಲಿ ಎಲ್ಲಾ ಹಿಂಪಡೆಯುವಿಕೆ ಮತ್ತು ವರ್ಗಾವಣೆಗಳ ಒಟ್ಟು ಮೊತ್ತವು 10,000 ರೂ.ಗಿಂತ ಹೆಚ್ಚಿದ್ದರೆ ಮತ್ತು ಯಾವುದೇ ಹಣಕಾಸಿನ ವರ್ಷದಲ್ಲಿ ಖಾತೆಯಲ್ಲಿನ ಎಲ್ಲಾ ಕ್ರೆಡಿಟ್‌ಗಳ ಒಟ್ಟು ಮೊತ್ತವು 1 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಪ್ಯಾನ್‌ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹಣಕಾಸು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ

ಠೇವಣಿದಾರನು ಎರಡು ತಿಂಗಳ ನಿರ್ದಿಷ್ಟ ಅವಧಿಯೊಳಗೆ ಪ್ಯಾನ್ ಸಂಖ್ಯೆಯನ್ನು (PAN) ಸಲ್ಲಿಸಲು ವಿಫಲವಾದಲ್ಲಿ, ಅವನು ಖಾತೆಗಳ ಕಚೇರಿಗೆ ಪ್ಯಾನ್ ಸಂಖ್ಯೆಯನ್ನು ಸಲ್ಲಿಸುವವರೆಗೆ ಅವನ ಖಾತೆಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ

Related News

spot_img

Revenue Alerts

spot_img

News

spot_img