ಬೆಂಗಳೂರು, ಮೇ. 08 : ಉಚ್ಚಸ್ಥಾನ ಪ್ರಭಾವಗಳ ಬಗ್ಗೆ ಹೇಳುವ ಮುಂಚಿತವಾಗಿಯೇ ಎಲ್ಲೆಲ್ಲಿ ಬರುತ್ತದೆ ಎಂದು ತಿಳಿಯೋಣ. ಈ ಬಗ್ಗೆ ಡಾ. ರೇವತಿ ವೀ ಕುಮಾರ್ ಅವರು ಸರಳವಾಗಿ ಹೇಳಿದ್ದಾರೆ. ವಾಸ್ತು ಶಾಸ್ತ್ರದ ಬಗ್ಗೆ ಸಾಕಷ್ಟು ಅಧ್ಯಯನವನ್ನು ಡಾ.ರೇವತಿ ವೀ ಕುಮಾರ್ ಅವರು ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಕಳೆದ 20 ವರ್ಷಗಳಿಂದ ಇದೇ ವಿಷಯವಾಗಿ ಬೋಧನೆ ಮಾಡುತ್ತಿದ್ದಾರೆ. ಜೋತಿಷಿ ಹಾಗೂ ಸಂಖ್ಯಾ ಶಾಸ್ತ್ರಜ್ಞರು ಆಗಿರುವ ಡಾ. ರೇವತಿ ವೀ ಕುಮಾರ್ ವಾಸ್ತು ಬಗ್ಗೆ ಜನರಲ್ಲಿ ಇರುವ ಸಾಕಷ್ಟು ಪ್ರಶ್ನೆಗಳಿಗೆ, ಗೊಂದಲ ಹಾಗೂ ಅನುಮಾನಗಳಿಗೆ ಸರಳವಾಗಿ ಉತ್ತರ ಕೊಡುತ್ತಾರೆ.
ಉತ್ತರ ಮತ್ತು ಪೂರ್ವ ದಿಕ್ಕನ್ನು ಉಚ್ಛಸ್ಥಾನ ಎಂದು ಹೇಳುತ್ತೀವಿ. ನೈರುತ್ಯದಲ್ಲಿ ಅಂದರೆ ಪಶ್ಚಿಮ ನೈರುತ್ಯ ಹಾಗೂ ದಕ್ಷಿಣ ನೈರುತ್ಯ ನೀಚಸ್ಥಾನ, ದಕ್ಷಿಣ ಆಗ್ನೇಯದಲ್ಲಿ ಉಚ್ಛಸ್ಥಾನ, ಪೂರ್ವ ಆಗ್ನೇಯ ನೀಚಸ್ಥಾನ, ವಾಯುವ್ಯದಲ್ಲಿ ಪಶ್ಚಿಮ ವಾಯುವ್ಯ ಉಚ್ಛಸ್ಥಾನ ಉತ್ತರ ವಾಯುವ್ಯ ನೀಚಸ್ಥಾನವಾಗಿದೆ. ಉತ್ತರ ಮತ್ತು ಪೂರ್ವ, ದಕ್ಷಿಣ ಆಗ್ನೇಯದಲ್ಲಿ ಉಚ್ಛಸ್ಥಾನ, ಪಶ್ಚಿಮ ವಾಯುವ್ಯ ಉಚ್ಛಸ್ಥಾನಗಳಾಗಿವೆ.
ನಮಗೆ ಸೂರ್ಯನ ಕಿರಣಗಳು ಬಹಳ ಮುಖ್ಯ. ಉತ್ತರದಲ್ಲಿ ಬರುವಂತಹ ಸೋಲಾರ್ ಹಾಗೂ ಮ್ಯಾಗ್ನೆಟಿಕ್ ಎನರ್ಜಿ ಬರುತ್ತದೆ. ಹೀಗಾಗಿ ಈಶಾನ್ಯ ಅತಿ ಮುಖ್ಯ ದಿಕ್ಕಾಗಿದೆ. ಉಚ್ಚ ಸ್ಥಾನದಲ್ಲಿ ಸರಿಯಾಗಿ ಯುಟಿಲಿಗಳು ಮನೆಗೆ ಬಹಳ ಶುಭ ಇರುತ್ತದೆ. ಉಚ್ಚ ಸ್ಥಾನ ಹಾಗೂ ನೀಚ ಸ್ಥಾನವನ್ನು ಬಹಳ ಎಚ್ಚರಿಕೆಯಿಂದ ನೋಡಿ ಮನೆಯನ್ನು ನಿರ್ಮಾಣ ಮಾಡಬೇಕು. ಉಚ್ಚಸ್ಥಾನಗಳು ಮನೆಗೆ ಬಹಳ ಪ್ರಭಾವ ಬೀರುತ್ತದೆ. ಸರಿಯಾದ ಕ್ರಮದಲ್ಲಿ ಉಚ್ಛ ಸ್ಥಾನ ಹಾಗೂ ನೀಚಸ್ಥಾನವನ್ನು ನೋಡಿ ಮನೆ ನಿರ್ಮಾಣ ಮಾಡಬೇಕು.
ಪೂರ್ವ ಈಶಾನ್ಯ, ಉತ್ತರ ಈಶಾನ್ಯ, ದಕ್ಷಿಣ ಆಗ್ನೇಯ ಮತ್ತು ಪಶ್ಚಿಮ ವಾಯುವ್ಯ ದಿಕ್ಕುಗಳು ಉಚ್ಛಸ್ಥಾನವಿದ್ದು, ಈ ಉಚ್ಛಸ್ಥಾನಗಳ ಅಗಲಕ್ಕೆ ಸರಿಯಾಗಿ ಐುಟಿಲಿಟಿಗಳು ಬರಬೇಕು. ಈ ಉಚ್ಚಸ್ಥಾನ ದಿಕ್ಕುಗಳಿಂದಾಗಿ ಮನೆಗೆ ಅಶುಭ ಉಂಟಾಗುತ್ತದೆ. ಇದರಿಂದ ಪರಿಹಾರ ಪಡೆದುಕೊಳ್ಳಲು ವಾಸ್ತುವಿನಲ್ಲಿ ಹಲವು ಬಗಡ ಇವೆ.