ಬೆಂಗಳೂರು, ಜು.24:ರಾಜ್ಯ ಸರ್ಕಾರ ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಎಎಸ್ ಅಧಿಕಾರಿ ಪವನ್ ಕುಮಾರ್ ಮಲಪತಿ ಅವನ್ನು ಬಳ್ಳಾರಿ ಜಿಲ್ಲಾಧಿಕಾರಿ ಹುದ್ದೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಮೀಷನರ್ ಆಗಿ ನಿಯೋಜಿಸಲಾಗಿದೆ. ಅದೇ ರೀತಿ ಐಎಎಸ್ ಅಧಿಕಾರಿ ರಮೇಶ್ ಕೆ.ಎನ್ ಅವರನ್ನು ಸಮಗ್ರ ಶಿಕ್ಷಣ ಇಲಾಖೆಯ ಪ್ರೋಜೆಕ್ಟ್ ಡೈರೆಕ್ಟರ್ ಆಗಿಯೂ ಹಾಗು ಕೆ ಎಸ್ ಆರ್ ಟಿ ಸಿ ಡೈರೆಕ್ಟರ್ ಆಗಿದ್ದಂತ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು, ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲು ಆದೇಶಿಸಲಾಗಿದೆ.