ಬೆಂಗಳೂರು, ಏ. 19: ಈಗ ಪ್ರತಿಯೊಬ್ಬರ ಮನೆಯಲ್ಲೂ ಡೈನಿಂಗ್ ಹಅಲ್ ಗಳು ಕಂಪಲ್ಸರಿ ಇದ್ದೇ ಇರುತ್ತದೆ. ಒಟ್ಟಿಗೆ ಊಟ ಮಾಡು, ಟೇಬಲ್ ಮೇಲೆ ಶಿಸ್ತಿನಿಂದ ಆಹಾರ ಸೇವಿಸಲು ಹಾಗೂ ವಯಸ್ಸಾದವರಿಗೆ ಕೆಳಗೆ ಕೂರಲು ಸಾಧ್ಯವಿರದ ಕಾರಣ, ಎಲ್ಲರೂ ಡೈನಿಂನಗ್ ಹಾಲ್ ಇರಿಸುತ್ತಾರೆ. ಇದರಲ್ಲಿ ತಮ್ಮಿಷ್ಟದ ಡೈನಿಂಗ್ ಟೇಬಲ್ ಅನ್ನು ಇರಿಸಿರುತ್ತಾರೆ. ನಿಮ್ಮ ಮನೆಯ ಡೈನಿಂಗ್ ಹಾಲ್ ಅನ್ನು ಹೈಲೈಟ್ ಮಾಡಲು ಟೇಬಲ್, ನೆಲದ ಮೇಲಿನ ಕಾರ್ಪೆಟ್, ಟೇಬಲ್ ಮೇಲೆ ಹೂವಿನ ಗುಚ್ಛ, ಲೈಟ್ಸ್, ಗೋಡೆಯ ಬಣ್ಣಗಳನ್ನು ಬಳಸಿ ವಿನ್ಯಾಸಗೊಳಿಸುವುದು ಬಹಳ ಮುಖ್ಯ.
ಡೈನಿಂಗ್ ಹಾಲ್ ಅನ್ನು ಅಲಂಕರಿಸುವ ಮೂಲಕ ಊಟಕ್ಕೆ ಬರುವವರ ಮೇಲೆಯೂ ಕೊಂಚ ಹೆಚ್ಚು ಪ್ರೀತಿಯನ್ನು ತೋರಿಸಬಹುದು. ನೆಲದ ಮೇಲೆ ಕಾರ್ಪೆಟ್ನಿಂದ ವಿಭಿನ್ನ ಗಾತ್ರಗಳು ಮತ್ತು ಆಕಾರಗಳನ್ನು ನಿಮ್ಮ ಜಾಗಕ್ಕೆ ಪೂರಕವಾಗಿ ನಿಮ್ಮ ಶೈಲಿಯನ್ನು ಆರಿಸಿ. ಮನೆಯ ಗೋಡೆ ಹಾಗೂ ನೆಲದ ಬಣ್ಣಕ್ಕೆ ಸರಿ ಹೊಂದುವಂತಿರಲಿ. ಊಟದ ಕೋಣೆಗೆ ಗಾಢ ಬಣ್ಣದ ದಪ್ಪ ಹೀರಿಕೊಳ್ಳುವ ರಗ್ ಬಟ್ಟೆಗಳು ಯೋಗ್ಯವಾಗಿರುತ್ತವೆ. ಡೈನಿಂಗ್ ಹಾಲ್ ನಲ್ಲಿ ಸುಂದರವಾಗಿ ಕಾಣುವಂತಹ ವಾಲ್ ಪೇಪರ್ ಅನ್ನು ಅಳವಡಿಸಿ. ವಾಲ್ಪೇಪರ್ ಸ್ಟೈಲ್ ಕೋಣೆಯ ವಾತಾವರಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಊಟದ ಕೋಣೆಯಲ್ಲಿ ನೈಸರ್ಗಿಕ ಅಂಶಗಳಿದ್ದರೆ, ವಾತಾವರಣ ತಾಜಾವಾಗಿರುತ್ತದೆ. ಡೈನಿಂಗ್ ಟೇಬಲ್ ಅನ್ನು ಸುಂದರವಾಗಿ ಕಾಣುವಂತೆ ಮಾಡಲು ಮಧ್ಯಭಾಗದಲ್ಲಿ ಹೂವನ್ನು ಇಡಿ. ಹಸಿರು, ಕೆಂಪು, ಮರದ ಬಣ್ಣದಿಂದ ಕೂಡಿದ ವಾಸ್ ಮತ್ತು ಅದಕ್ಕೆ ಹೊಂದುವ ಬಣ್ಣದ ಹೂವು ಇದ್ದರೆ ನೋಡಲು ಆಕರ್ಷಣೀಯವಾಗಿರುತ್ತದೆ. ನಿಮ್ಮ ಊಟದ ಮನೆಯ ಲೈಟಿಂಗ್ ಕೂಡ ಆಕರ್ಷಣೀಯವಾಗಿರುವಂತೆ ಆರಿಸಿ. ನಿಮ್ಮ ಟೇಬಲ್-ಸ್ಕೇಪ್ ಅನ್ನು ಬದಲಾಯಿಸಿ. ವಿವಿಧ ರೀತಿಯ ಟೇಬಲ್ ರನ್ನರ್ಗಳು, ಸೀಟ್ ಕವರ್ಗಳು ಮತ್ತು ನ್ಯಾಪ್ಕಿನ್ಗಳಿಂದ ಆಯ್ಕೆ ಮಾಡಿ.
ಮೃದುವಾದ ಊಟದ ಕುಶನ್ ಗಳು ಜಾಗಕ್ಕೆ ಹೆಚ್ಚಿನ ಸೌಕರ್ಯವನ್ನು ತರುತ್ತವೆ. ಡೈನಿಂಗ್ ಟೇಬಲಕ್ ನಲ್ಲಿ ಊಟ ಸವಿಯಲು ಬಳಸುವ ತಟ್ಟೆ, ಲೋಟ, ಸ್ಪೂನ್, ಆಹಾರ ತುಂಬಿದ ಪಾತ್ರೆಗಳನ್ನು ಕೂಡ ಆರಿಸುವಾಗ ಎಚ್ಚರವಿರಲಿ. ಹೀಗೆ ನಿಮ್ಮ ಡೈನಿಂಗ್ ರೂಮ್ ಅನ್ನು ಅಲಂಕರಿಸಿದರೆ, ನಿಮಗೂ ಹಾಗೂ ಮನೆಗೆ ಬಂದ ಅತಿಥಿಗಳಿಗೂ ಊಟ ಮಾಡುವ ವೇಳೆ, ಖುಷಿ ಕೊಡುತ್ತದೆ.