24.4 C
Bengaluru
Sunday, September 8, 2024

ಗ್ಲೋಬಲ್‌ ಸಿಟಿ ಮಾಡಲು, ಲೂಟಿ ಮಾಡಲು, ಕೋರ್ಟ್ ಸ್ಥಳಾಂತರ ಮಾಡ್ತಿದ್ದಾರೆ- ಹೆಚ್ ಡಿಕೆ ಆಕ್ರೋಶ

ರಾಮನಗರ: ಜಿಲ್ಲಾ ಕೇಂದ್ರದಲ್ಲಿಯೇ ಸಿವಿಲ್ ಪ್ರಕರಣಗಳನ್ನು ವಿಚಾರಣೆ ನಡೆಸುವ ಎಸಿ ಕೋರ್ಟ್ ಅನ್ನು ಕನಕಪುರಕ್ಕೆ ವರ್ಗಾವಣೆ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇದು ಮಕ್ಕಳ ಆಟಾನ.? ಅಂತ ಕಿಡಿಕಾರಿದ್ದಾರೆ.

ಎಸಿ ಕೋರ್ಟ್ ಅನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವುದನ್ನು ವಿರೋಧಿಸಿ, ರಾಮನಗರದಲ್ಲಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ ಎಸಿ ಕೋರ್ಟ್ ಅನ್ನು ವಾರದಲ್ಲಿ ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಇದನ್ನು ಇಡೀ ರಾಜ್ಯದ ಪ್ರತಿ ತಾಲೂಕಿನಲ್ಲೂ ಮಾಡಿ, ಪ್ರತಿ ತಾಲೂಕಿಗೆ ಒಂದೊಂದು ಎಸಿ ಕೋರ್ಟ್ ಮಾಡಿ ಎಂದರು. ಇದು ಸರ್ವಾಧಿಕಾರಿ ಧೋರಣೆ. ಕೋರ್ಟ್ ಸ್ಥಳಾಂತರಕ್ಕೆ ಅಂತಹ ತರಾತುರಿ ಏನಿದೆ? ಹೆದರಿಸಿ, ಬೆದರಿಸಿ ಅಕ್ರಮವಾಗಿ ಬೇಲಿ ಹಾಕಿಕೊಂಡಿರುವ ಎಲ್ಲಾ ಭೂಮಿಗಳ ಪೋಡಿ ಮಾಡಿಸುವುದಕ್ಕೆ, ಲೂಟಿ ಮಾಡುವುದಕ್ಕೆ ಹೀಗೆ ಮಾಡ್ತಿದ್ದಾರೆ. ಅದೆಂತದ್ದೋ ಗ್ಲೋಬಲ್ ಸಿಟಿ ಮಾಡಲು, ಲೂಟಿ ಮಾಡೋಕೆ ಈ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಯಾರ ಹೆಸರನ್ನು ಹೇಳದೆ ಟಾಂಗ್ ನೀಡಿದ್ದಾರೆ.

Related News

spot_img

Revenue Alerts

spot_img

News

spot_img