26.4 C
Bengaluru
Wednesday, December 4, 2024

2023ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ

ಬೆಂಗಳೂರು: 2023ನೇ ಸಾಲಿನಲ್ಲಿ ರಾಜ್ಯಾದ್ಯಂತ 19 ಸಾರ್ವತ್ರಿಕ ರಜೆ ಹಾಗೂ ಸರ್ಕಾರಿ ನೌಕರರಿಗೆ 17 ಪರಿಮಿತ ರಜಾ ಒಳಗೊಂಡು ಒಟ್ಟು 36 ರಜೆಗಳನ್ನು ಘೋಷಿಸಲಾಗಿದೆ. ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅದರ ವಿವರ ಹೀಗಿದೆ.2023ನೇ ಸಾಲಿನಲ್ಲಿ ರಾಜ್ಯಾದ್ಯಂತ 19 ಸಾರ್ವತ್ರಿಕ ರಜೆ ಮತ್ತು ಸರ್ಕಾರಿ ನೌಕರರಿಗೆ 17 ಪರಿಮಿತ ರಜೆಯೂ ಸೇರಿದಂತೆ ಒಟ್ಟು 36 ರಜೆಗಳನ್ನು ಘೋಷಿಸಲಾಗಿದೆ.

2023ರ ಸಾರ್ವತ್ರಿಕ ರಜಾ ದಿನಗಳ ವಿವರ ಇಲ್ಲಿದೆ 

ಜನವರಿ 26, ಗುರುವಾರ – ಗಣರಾಜ್ಯೋತ್ಸವ
ಫೆಬ್ರವರಿ 18, ಶನಿವಾರ – ಮಹಾಶಿವರಾತ್ರಿ
ಮಾರ್ಚ್‌ 22, ಬುಧವಾರ – ಯುಗಾದಿ ಹಬ್ಬ
ಏಪ್ರಿಲ್ 3, ಸೋಮವಾರ – ಮಹಾವೀರ ಜಯಂತಿ
ಏಪ್ರಿಲ್ 7, ಶುಕ್ರವಾರ – ಗುಡ್‌ಫ್ರೈಡೇ
ಏಪ್ರಿಲ್ 14, ಶುಕ್ರವಾರ – ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ
ಮೇ 1, ಸೋಮವಾರ – ಕಾರ್ಮಿಕರ ದಿನಾಚರಣೆ
ಜೂನ್ 29, ಗುರುವಾರ – ಬಕ್ರೀದ್‌
ಜುಲೈ 29, ಶನಿವಾರ – ಮೊಹರಂ ಕಡೇ ದಿನ
ಆಗಸ್ಟ್‌ 15, ಮಂಗಳವಾರ – ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್ 18, ಸೋಮವಾರ – ವರಸಿದ್ಧಿ ವಿನಾಯಕ ವ್ರತ
ಸೆಪ್ಟೆಂಬರ್ 28, ಗುರುವಾರ – ಈದ್‌ ಮಿಲಾದ್‌
ಅಕ್ಟೋಬರ್ 2, ಸೋಮವಾರ – ಗಾಂಧಿ ಜಯಂತಿ
ಅಕ್ಟೋಬರ್ 23, ಸೋಮವಾರ – ಮಹಾನವಮಿ, ಆಯುಧ ಪೂಜೆ
ಅಕ್ಟೋಬರ್ 24, ಮಂಗಳವಾರ – ವಿಜಯದಶಮಿ
ನವೆಂಬರ್ 1, ಬುಧವಾರ – ಕನ್ನಡ ರಾಜ್ಯೋತ್ಸವ
ನವೆಂಬರ್ 14, ಮಂಗಳವಾರ – ಬಲಿಪಾಡ್ಯಮಿ ದೀಪಾವಳಿ
ನವೆಂಬರ್ 30, ಗುರುವಾರ – ಕನಕದಾಸ ಜಯಂತಿ
ಡಿಸೆಂಬರ್ 25, ಸೋಮವಾರ – ಕ್ರಿಸ್‌ಮಸ್‌

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (15.01.2023), ಬಸವ ಜಯಂತಿ/ಅಕ್ಷಯ ತೃತೀಯ (23.04.2023) ಮತ್ತು ನರಕ ಚತುರ್ದಶಿ (12.11.2023) ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (14.10.2023) ಹಾಗೂ ನಾಲ್ಕನೇ ಶನಿವಾರದಂದು ಬರುವ ಖುತುಬ್-ಎ-ರಂಜಾನ್ (22.04.2023) ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ (28.10.2023) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.|

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.ದಿನಾಂಕ:03.09.2023 (ಭಾನುವಾರ) ಕೈಲ್ ಮೂಹೂರ್ತ, ದಿನಾಂಕ:18.10.2023 (ಬುಧವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:28.11.2023 (ಮಂಗಳವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.5. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸುವರು.6. ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ 2023ನೇ ವರ್ಷದಲ್ಲಿ ಅಧಿಸೂಚನೆ-1ರ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪರಿಮಿತ ರಜಾದಿನಗಳ ಪಟ್ಟಿ

30.01.2023 ಮಧ್ವ ನವಮಿ
7.03.2023 ಷಬ್- ಎ- ಬರಾತ್
8.03.2023 ಹೋಳಿ ಹಬ್ಬ
30.03.2023 ರಾಮನವಮಿ
18.04.2023 ಷಬ್-ಎ-ಖದರ್
21.04.2023 ಜಮಾತ್- ಉಲ್-ವಿದಾ
25.04.2023 ಶಂಕರಾಚಾರ್ಯ ಜಯಂತಿ, ರಾಮಾನುಜಾಚಾರ್ಯ ಜಯಂತಿ
5.5.2023 ಬುದ್ಧ ಪೂರ್ಣಿಮಾ
25.08.2023 ವರಮಹಾಲಕ್ಷ್ಮಿ ವ್ರತ
29.08.2023 ಋಗ್ ಉಪಕರ್ಮ, ತಿರು ಓಣಂ
30.08.2023 ಯಜುರ್ ಉಪಕರ್ಮ
31.08.2023 ಬ್ರಹ್ಮಶ್ರೀ ನಾರಾಯಣಗುರು ಜಯಂತಿ
6.09.2023 ಶ್ರೀ ಕೃಷ್ಣ ಜನ್ಮಾಷ್ಟಮಿ
8.09.2023 ಕನ್ಯಾ ಮರಿಯಮ್ಮ ಜಯಂತಿ
18.10.2023 ತುಲಾ ಸಂಕ್ರಮಣ
27.11.202 ಗುರು ನಾನಕ್ ಜಯಂತಿ
28.11.2023 ಹುತ್ತರಿ ಹಬ್ಬ

ನೂತನ ವರ್ಷಾರಂಭ (1.01.2023), ದೇವರ ದಾಸಿಮಯ್ಯ ಜಯಂತಿ (26.03.2023), ವಿಶ್ವ ಕರ್ಮ ಜಯಂತಿ(17.09.2023) ಮತ್ತು ಕ್ರಿಸ್‌ಮಸ್ ಈವ್ (24.12.2023). ಭಾನುವಾರದಂದು ಹಾಗು ಹೋಲಿ ಸ್ಯಾಟರ್ ಡೇ (8.04.2023) ಎರಡನೇ ಶನಿವಾರದಂದು ಬರುವುದರಿಂದ, ಈ ರಜೆ ಪಟ್ಟಿಯಲ್ಲಿ ನಮೂದಿಸಿಲ್ಲ.ಸೌರಮಾನ ಯುಗಾದಿ (14.04.2023) ಶುಕ್ರವಾರ ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ.ಸ್ವರ್ಣಗೌರಿ ವ್ರತ (18.09.2023) ಸೋಮವಾರ ವರಸಿದ್ಧಿ ವಿನಾಯಕ ವ್ರತ ಹಾಗೂ ಅನಂತ ಪದ್ಮನಾಭ ವ್ರತ (28.09.2023) ಗುರುವಾರ ಈದ್-ಮಿಲಾದ್ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿಯಾಗಿರುವ ಅಪೇಕ್ಷಾ ಸತೀಶ್ ಪವಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

 

 

 

Related News

spot_img

Revenue Alerts

spot_img

News

spot_img