#The land given # Nice #organization # quickly returned
ಬೆಂಗಳೂರು;ರಾಜ್ಯ ಸರಕಾರದಿಂದ ನೈಸ್ ಸಂಸ್ಥೆಗೆ ನೀಡಿರುವ 554 ಎಕರೆ ಭೂಮಿಯನ್ನು ಶೀಘ್ರವೇ ಹಿಂಪಡೆಯಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.ಪ್ರಶೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಮುನಿ ರಾಜುಗೌಡ ಪ್ರಶ್ನೆಗೆ ಉತ್ತರಿಸಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಬಿಎಂಐಸಿಪಿ(BMICP) ಯೋಜನೆಗೆ ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳ ಪೈಕಿ ನೈಸ್ ಸಂಸ್ಥೆಗೆ ನೀಡಿದ್ದ 554 ಎಕರೆ ಹೆಚ್ಚುವರಿ ಜಮೀ ನನ್ನು ಶೀಘ್ರವೇ ಹಿಂಪಡೆಯಲಾಗುವುದು. ಹೆಚ್ಚುವರಿ ಜಮೀನು ಹಿಂಪಡೆಯುವ ಸಂಬಂಧ ಸದನ ಸಮಿತಿ ನೀಡಿ ರುವ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ನೈಸ್ ಸಂಸ್ಥೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿರುವ 559 ಎಕರೆ ಜಮೀನಿನ ಸರ್ವೇ ನಂ. ಮತ್ತು ವಿಸ್ತೀರ್ಣಗಳಲ್ಲಿ ವ್ಯತ್ಯಾಸವಾಗಿರುವ ಕಾರಣ ಹಿಂಪಡೆಯುವ ಪ್ರಕ್ರಿಯೆ ವಿಳಂಬವಾಗಿದೆ. ಆದಷ್ಟು ಶೀಘ್ರ ಜಮೀನು ಹಿಂಪಡೆದು ಬಳಿಕ ಮುಂದೇನು ಮಾಡಬೇಕು ಎಂದು ಪರಿಶೀಲಿಸಲಾಗುವುದು ಎಂದರು,ಸ್ಪಷ್ಟವಾದ ವರದಿ ಪಡೆದು ಹೆಚ್ಚುವರಿ ಭೂಮಿಯನ್ನು ಹಿಂಪಡೆಯಲು ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಭೂಮಿ ಹಿಂಪಡೆದ ಬಳಿಕ ಯಾವ ಉದ್ದೇಶಕ್ಕೆ ಬಳಸಬೇಕು ಎಂಬುದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.