ಬೆಂಗಳೂರು;ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ 8 ಜನ ಶಿಕ್ಷಣ ತಜ್ಞರನ್ನು ಉನ್ನತ ಶಿಕ್ಷಣ ಇಲಾಖೆ ನಾಮನಿರ್ದೇಶನ ಮಾಡಿದೆ.ಮುಂದಿನ ಐದು ವರ್ಷಗಳ ಅವಧಿಗೆ ಅಥವಾ ಅವರಿಗೆ 70 ವರ್ಷ ತುಂಬುವವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ಉನ್ನತ ಶಿಕ್ಷಣ ಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ತುಮಕೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ರಾಜಾಸಾಬ್, ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಎಚ್. ಸಿ. ಬೋರಲಿಂಗಯ್ಯ, ರಾಣಿ ಚನ್ನಮ್ಮ ವಿವಿಯ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರಗೌಡ, ವಿಎಸ್‌ಕೆಯು ಮಾಜಿ ಕುಲಪತಿ ಪ್ರೊ. ಎಂ. ಎಸ್. ಸುಭಾಷ್, ಅಕ್ಕಮಹಾದೇವಿ ಮಹಿಳಾ ವಿವಿಯ ನಿವೃತ್ತ ರಿಜಿಸ್ಟ್ರಾರ್ ಪ್ರೊ. ಸುನಂದಮ್ಮ, ಭಾರತೀಯ ಅಂಕಿ ಅಂಶ ಸಂಸ್ಥೆಯ ಪ್ರೊ. ದೇವಿಕ ಪಿ., ಮಾದಳ್ಳಿ, ಮಂಗಳೂರು ಅಕಾಡೆಮಿ ಅಫ್ ಪ್ರೊಫೆಷನಲ್ ಸ್ಟಡೀಸ್‌ನ ನಿರ್ದೇಶಕ ದಿನೇಶ್ ಕುಮಾರ್ ಆಳ್ವ ಮತ್ತು ಶಿಕ್ಷಣ ತಜ್ಞ ಜಯರಾಂ ಮೇಲುಕೋಟೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.