23 C
Bengaluru
Tuesday, November 12, 2024

ಎರಡನೇ ಉಡ್ಡಯನ ಕೇಂದ್ರಕ್ಕೆ ಇಂದು ಶಿಲಾನ್ಯಾಸ

ಬೆಂಗಳೂರು; ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಎರಡನೇ ಬಾಹ್ಯಾಕಾಶ ಉಡ್ಡಯನ ಕೇಂದ್ರ ನಿರ್ಮಾಣವಾಗಲಿದೆ. ಈ ಬಾಹ್ಯಾಕಾಶ(outer space) ಕೇಂದ್ರಕ್ಕೆ ಇಂದು ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಗವರ್ನರ್ ತಮಿಳಿಸೈ ಸೌಂದರರಾಜನ್‌ ತಿಳಿಸಿದ್ದಾರೆ. ಶ್ರೀಹರಿಕೋಟಾದ ಬಾಹ್ಯಾಕಾಶ ಉಡಾವಣಾ ಕೇಂದ್ರವು ಎರಡು ಉಡಾವಣಾ ಪ್ಯಾಡ್‌ಗಳನ್ನು ಹೊಂದಿದೆ (1,2), ಕುಲಶೇಖರಪಟ್ಟಿಣಂನಲ್ಲಿ 3 & 4 ಲಾಂಚಿಂಗ್ ಪ್ಯಾಡ್‌ಗಳನ್ನು(launching pad) ನಿರ್ಮಿಸಲಾಗುವುದು. ಇದಕ್ಕಾಗಿ ಕೇಂದ್ರದಿಂದ 2000 ಎಕರೆ ಗುರುತಿಸಲಾಗಿದೆ.2035 ರ ವೇಳೆಗೆ ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಲಿದ್ದು, ಬಾಹ್ಯಾಕಾಶದ ಅಜ್ಞಾತ ವಿಸ್ತಾರಗಳ ಅಧ್ಯಯನಕ್ಕೆ ಇದು ಸಹಕಾರಿಯಾಗಲಿದೆ.ಕಳೆದ 10 ವರ್ಷಗಳಲ್ಲಿ ಭಾರತ 400 ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದೆ, 10 ವರ್ಷಗಳ ಹಿಂದೆ ಕೇವಲ 33 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದು, ಗಗನ್‌ಯಾನ್ ಮಿಷನ್‌ನಲ್ಲಿ ಬಳಸಲಾಗುತ್ತಿರುವ ಉಪಕರಣಗಳು ಹೆಚ್ಚಾಗಿ ಭಾರತದಲ್ಲಿಯೇ ತಯಾರಿಸಲ್ಪಟ್ಟಿರುವ ಬಗ್ಗೆ ಪ್ರಧಾನಿ ಮೋದಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.ಕೇರಳ ರಾಜ್ಯದ ರಾಜಧಾನಿ ಬಳಿಯ ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗಗನಯಾನ ಮಿಷನ್ ಗೆ ಆಯ್ಕೆಯಾಗಿರುವ ನಾಲ್ಕು ಮಂದಿ ಗಗನಯಾನಿಗಳ ಹೆಸರನ್ನು ಘೋಷಣೆ ಮಾಡಿದ್ದಾರೆ.ಇದಲ್ಲದೆ, ವಿವಿಧ ಯೋಜನೆಗಳನ್ನು ಪ್ರಾರಂಭಿಸಲು ತೂತುಕುಡಿ ಬಂದರಿನಲ್ಲಿ ನಡೆಯಲಿರುವ ಸರ್ಕಾರಿ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ರಾಮೇಶ್ವರಂ ಪಂಬನ್ ಸಮುದ್ರದ ಮಧ್ಯದಲ್ಲಿ 550 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ಹೊಸ ರೈಲ್ವೆ ತೂಗು ಸೇತುವೆಯನ್ನು ಪ್ರಧಾನಿ ಮೋದಿ ದೇಶಕ್ಕೆ ಸಮರ್ಪಿಸಲಿದ್ದಾರೆ.

Related News

spot_img

Revenue Alerts

spot_img

News

spot_img