21.2 C
Bengaluru
Tuesday, December 3, 2024

ಸಿಎಂ ಕೈ ಸೇರಿದ ಪಿಎಸ್‌ಐ ನೇಮಕಾತಿ ಅಕ್ರಮ ವರದಿ ನೀಡಿದ ಆಯೋಗ

# commission issued # report # illegal# recruitment # PSI belonging # CM

ಬೆಂಗಳೂರು;ರಾಜ್ಯ ಸರ್ಕಾರವು ಕಳೆದ ವರ್ಷದ ಜುಲೈ 21 ರಂದು ಅಕ್ರಮ ನಡೆದಿರುವ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿತ್ತು. ಕಳೆದ ಬಿಜೆಪಿ(BJP) ಸರ್ಕಾರದಲ್ಲಿ ಪಿಎಸ್‌ಐ(PSI) ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಭಾರಿ ಸದ್ದು ಮಾಡಿತ್ತುಪಿಎಸ್‌ಐ ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾ. ಬಿ. ವೀರಪ್ಪ ಅವರ ಅಧ್ಯಕ್ಷತೆಯ ಏಕ ಸದಸ್ಯ ಆಯೋಗದ ವರದಿಯು ಸಿಎಂ ಸಿದ್ದರಾಮಯ್ಯ ಅವರ ಕೈಗೆ ಸೇರಿದೆ ಎಂದು ವರದಿಯಾಗಿದೆ.ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ನಸೀರ್ ಅಹ್ಮದ್ ಅವರುಗಳು ಉಪಸ್ಥಿತರಿದ್ದರು. ರಾಜ್ಯದಲ್ಲಿ ನಡೆದ 545 PSI ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಸಮಿತಿ ರಚಿಸಲಾಗಿತ್ತು. ಹಗರಣಕ್ಕೆ ಸಂಬಂಧಿಸಿದಂತೆ 110 ಜನರನ್ನು ಬಂಧಿಸಲಾಗಿತ್ತು. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟಾಚಾರ(Corruption) ಪ್ರಕರಣದಲ್ಲಿ ADGP ಶ್ರೇಣಿಯ IPS ಅಧಿಕಾರಿ ಅಮೃತ್‌ ಪಾಲ್ ಅವರನ್ನೂ ಬಂಧಿಸಲಾಗಿತ್ತು

Related News

spot_img

Revenue Alerts

spot_img

News

spot_img