25.5 C
Bengaluru
Friday, September 20, 2024

ನಾಮನಿರ್ದೇಶನ ಸ್ಥಾನಗಳಿಗೆ ಮೂರು ಹೆಸರು ಶಿಫಾರಸ್ಸು ಮಾಡಲಿರುವ ಸಿಎಂ

#CM #Recomnded #namination #position

ಬೆಂಗಳೂರು;ನಾಮನಿರ್ದೇಶನ ಸ್ಥಾನಗಳಿಗೆ ಮೂರು ಹೆಸರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಶಿಫಾರಸು ಮಾಡಲಿದ್ದಾರೆ.ಎಂ ಆರ್ ಸೀತಾರಾಮ, ಉಮಾಶ್ರೀ, ಸುಧಾಮ್‌ ದಾಸ್ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಿದ್ದಾರೆ.ಶಿಫಾರಸ್ಸು ಮಾಡುವಂತೆ ಸಿಎಂಗೆ ಎಐಸಿಸಿ ಆದೇಶಿಸಿದ್ದು, ಈ ನಡುವೆ ಪರಿಷತ್ ಸ್ಥಾನದ ಆಕಾಂಕ್ಷಿಗಳಿಗೆ ನಿಗಮ‌ಮಂಡಳಿಗಳಲ್ಲಿ ಸ್ಥಾನಮಾನ‌ ಕಲ್ಪಿಸಲಾಗುತ್ತದೆ. ಶೀಘ್ರವೇ ನಿಗಮ ಮಂಡಳಿಗಳಿಗೆ ಆಯ್ಕೆ ನಡೆಯಲಿದೆ. ಅಂದಹಾಗೆ, ಕಲಾವಿದರ ಕೋಟಾದಡಿ ಉಮಾಶ್ರೀ ಅವರಿಗೆ ಸ್ಥಾನ ನೀಡಿದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಮಾಜಿ ಸಚಿವ ಎಂ.ಆರ್.ಸೀತಾರಾಮ್​ ಹಾಗೂ ಸಮಾಜಸೇವೆ ಕೋಟಾದಡಿ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್​ ಅವರಿಗೆ ಸ್ಥಾನ ಪರಿಷತ್ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

Related News

spot_img

Revenue Alerts

spot_img

News

spot_img