24.8 C
Bengaluru
Sunday, May 19, 2024

ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ!ಜಗತ್ತಿನ ಪ್ರಮುಖ ತಂತ್ರಜ್ಞಾನಗಳ ಪಟ್ಟಿ!;

ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿದಿನವೂ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ವಿಜ್ಞಾನಿಗಳು, ಸಂಶೋಧಕರ ಸಾಧನೆಗಳನ್ನು ಸ್ಮರಿಸಲು ಭಾರತದಲ್ಲಿ ಪ್ರತಿ ವರ್ಷ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ.ಈ ಹಿನ್ನೆಲೆಯಲ್ಲಿ, ಜಗತ್ತಿನ ಮೇಲೆ ಪ್ರಭಾವ ಬೀರುತ್ತಿರುವ ಕೆಲವು ಟಾಪ್ ತಂತ್ರಜ್ಞಾನ ಆವಿಷ್ಕಾರಗಳತ್ತ ಒಂದು ನೋಟ.

ಪ್ಲಸ್ ಆದ ಬುದ್ಧಿಮತ್ತೆ!
ಈಚೆಗೆ ಬಹುರ್ಚಚಿತ ತಾಂತ್ರಿಕ ಆವಿಷ್ಕಾರ ವೆಂದರೆ- ಚಾಟ್ ಜಿಪಿಟಿ. ಈ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು ಎಲ್ಲರಿಗೂ ತಿಳಿದಿದೆ. ಅದರ ಪ್ಲಸ್ ಆವೃತ್ತಿ ಈಗ ಭಾರತದಲ್ಲಿ ಲಭ್ಯವಿದೆ. ಚಾಟ್ ಜಿಪಿಟಿ ಪ್ಲಸ್​ನಿಂದ ಚಂದಾದಾರರಿಗೆ ಸಿಗುವ ಪ್ರಮುಖ ಲಾಭವೆಂದರೆ ಹೆಚ್ಚಿನ ಬೇಡಿಕೆ ಇದ್ದಾಗ ಕೂಡ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ ಮತ್ತು ಪ್ರತಿಕ್ರಿಯೆಯ ವೇಗ ಹೆಚ್ಚಿರುತ್ತದೆ. ಅದರೊಂದಿಗೆ ‘ಓಪನ್ ಏಐ’ನ ಹೊಸ ವೈಶಿಷ್ಟ್ಯಗಳು ಇತರರು ಬಳಸುವ ಮೊದಲೇ ಚಂದಾದಾರರಿಗೆ ಲಭ್ಯವಿರುತ್ತದೆ. ಚಾಟ್ ಜಿಪಿಟಿ ಮಾಹಿತಿ ಮತ್ತು ಸಂವಹನ ಕ್ಷೇತ್ರದಲ್ಲಿ ಸಂಚಲನ ಹುಟ್ಟಿಸಿದ ಆವಿಷ್ಕಾರ. ಇದನ್ನು ದುರುಪಯೋಗಪಡಿಸಿಕೊಳ್ಳದೆ ಸರಿಯಾಗಿ ಬಳಸಿಕೊಳ್ಳುವುದು ಎಲ್ಲ್ಲ ಜವಾಬ್ದಾರಿ.

ಬೂಸ್ಟ್ ನೀಡಿದ 5ಜಿ
ಒಂದು ಕಾಲದಲ್ಲಿ 1ಜಿಬಿ 2ಜಿ ಇಂಟರ್​ನೆಟ್​ಗೆ ನೂರಾರು ರೂ. ನೀಡಬೇಕಿತ್ತು. ಈಗ ಕಡಿಮೆ ದರದಲ್ಲಿ ಹೈ ಸ್ಪೀಡ್ ಇಂಟರ್​ನೆಟ್ ಲಭ್ಯವಿದೆ. 5ಜಿ ಕಡೆಗೆ ಜಗತ್ತು ಸಾಗುತ್ತಿದೆ. ಇದನ್ನು ವಸ್ತುಗಳು, ಸಾಧನಗಳು, ಯಂತ್ರಗಳನ್ನು ಮತ್ತು ಮನುಷ್ಯರನ್ನು ಒಟ್ಟಿಗೆ ಸಂರ್ಪಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಸ್ಮಾರ್ಟ್ ಡಿವೈಸ್​ಗಳಿಗೆ ಸುಲಭವಾಗಿ ಮತ್ತು ವೇಗವಾಗಿ ಸಂಪರ್ಕ ಸಾಧಿಸಬಹುದು. 4ಜಿಗೆ ಹೋಲಿಸಿದರೆ 5ಜಿಯಲ್ಲಿ ಡೌನ್ಲೋಡ್ ವೇಗ ಹೆಚ್ಚಾಗಿದೆ. 4ಕೆ ವಿಡಿಯೋವನ್ನು ಕೆಲವೇ ಕ್ಷಣದಲ್ಲಿ ಡೌನ್ಲೋಡ್ ಮಾಡಬಹುದು. ಅದರೊಂದಿಗೆ ಗೇಮಿಂಗ್ ಮತ್ತು ವರ್ಚುಯಲ್-ರಿಯಾಲಿಟಿ ಅನುಭವವನ್ನು ಹೆಚ್ಚಿಸುತ್ತದೆ. ಸ್ಮಾರ್ಟ್ ಲೈಟ್, ಫ್ಯಾನ್ ಮುಂತಾದ ಸ್ಮಾರ್ಟ್ ಉಪಕರಣಗಳನ್ನು ಕೂತ ಜಾಗದಲ್ಲಿಯೇ ನಿಯಂತ್ರಿಸಬಹುದಾದ ಇಂಟರ್​ನೆಟ್ ಆಫ್ ಥಿಂಗ್ಸ್ (ಐಓಟಿ) ತಂತ್ರಜ್ಞಾನಕ್ಕೆ 5ಜಿಯ ಮೂಲಕ ಶಕ್ತಿ ಬಂದಂತಾಗಿದೆ. ಭವಿಷ್ಯದಲ್ಲಿ ಇದನ್ನು ಬಳಸಿಕೊಂಡು ಸ್ಮಾರ್ಟ್ ಕೃಷಿಯನ್ನು ಪ್ರಾರಂಭಿಸಬಹುದು. 5ಜಿಯ ವೈರ್​ಲೆಸ್ ನೆಟ್​ವರ್ಕ್ ಮತ್ತು ಜಿಪಿಎಸ್ ಸಹಾಯದೊಂದಿಗೆ ಜಾನುವಾರುಗಳ ಲೈವ್ ಲೊಕೇಶನ್ ತಿಳಿಯಬಹುದು ಮತ್ತು ನೀರಾವರಿ ನಿಯಂತ್ರಣ ಮುಂತಾದ ಕೃಷಿ ಕಾರ್ಯಗಳಿಗೆ ಬಳಸಬಹುದು. ಸ್ಮಾರ್ಟ್ ಸಿಟಿ, ಕೈಗಾರಿಕಾ ಐಓಟಿ, ಸ್ವಯಂಚಾಲಿತ ಕಾರ್​ಗಳ ನವೀಕರಣ ಮತ್ತು ಅನ್ವೇಷಣೆಗೆ 5ಜಿ ಬೂಸ್ಟ್ ನೀಡಿದೆ.

ಜೀವ ಉಳಿಸುವ ತಂತ್ರಜ್ಞಾನ
ನ್ಯಾನೋ ತಂತ್ರಜ್ಞಾನ ಬಳಸಿ ಸಂಪೂರ್ಣವಾಗಿ ಹೊಸ ವೈಶಿಷ್ಟ್ಯಗಳೊಂದಿಗೆ ವಸ್ತುಗಳನ್ನು ತಯಾರಿಸಬಹುದು. ನೀರನ್ನು ಪ್ರತಿರೋಧಿಸುವುದು ಮತ್ತು ಸ್ವಯಂ ಗುಣಪಡಿಸುವ ಸಾಮರ್ಥ್ಯವನ್ನು ಇದರ ಮುಖಾಂತರ ಪಡೆಯಬಹುದು. ಸಿಆರ್​ಐಎಸ್​ಪಿಆರ್/ಸಿಎಸ್9 ಮತ್ತು ಟಿಎಎಲ್​ಇಎನ್ (ಖಅಔಉಘ) ಜೀನೋಮ್ ಎಡಿಟಿಂಗ್ ಟೂಲ್​ಗಳು ಬಹಳ ವರ್ಷಗಳಿಂದ ಇವೆ. ಅದರ ಮುಖಾಂತರ ಜೀನ್ಸ್​ಗಳನ್ನು ತಿದ್ದಬಹುದು. ಒಂದು ಕಥೆಯಲ್ಲಿ ಪದಗಳನ್ನು ಬದಲಾಯಿಸುವಂತೆ ಜೀನ್​ಗಳನ್ನು ಕೂಡ ಬೇಕಾದ ರೀತಿಯಲ್ಲಿ ಬದಲಾಯಿಸಬಹುದಾದ ತಂತ್ರಜ್ಞಾನ ಇದು. ಇದನ್ನು ಬಳಸಿ ಸಿಕಲ್ ಸೆಲ್​ನಂತಹ ಅನುವಂಶಿಕ ಮತ್ತು ರಕ್ತದ ಅಸ್ವಸ್ಥತೆಗಳನ್ನು ದೂರಗೊಳಿಸಿ ಜೀವವನ್ನು ಉಳಿಸಬಹುದು. ಕೃಷಿ ಕ್ಷೇತ್ರದಲ್ಲಿ ಕೂಡ ಇದನ್ನು ಉಪಯೋಗಿಸಿಕೊಳ್ಳಬಹುದು. 2023-24ರ ಕೇಂದ್ರ ಬಜೆಟ್​ನಲ್ಲಿ ಕೂಡ ಇದಕ್ಕೆ ಮಾನ್ಯತೆ ನೀಡಲಾಗಿದೆ. ಈ ತಂತ್ರಜ್ಞಾನ ಕೈಗೆಟಕುವ ಬೆಲೆಯಲ್ಲಿ ಸಿಗುವಂತಾದರೆ ಅನುಕೂಲ.

ಭಾವನೆ ಅರಿಯುವ ಬ್ಲ್ಯಾಕ್​ಚೈನ್
ಬ್ಲ್ಯಾಕ್​ಚೈನ್ ತಂತ್ರಜ್ಞಾನ ಬೆಳವಣಿಗೆ ಹಾದಿಯಲ್ಲಿದೆ. ಅದರಿಂದ ಡೇಟಾವನ್ನು ಸುರಕ್ಷಿತಗೊಳಿಸಿ ಅದನ್ನು ಬಳಸಲು ವಿವಿಧ ಮಾರ್ಗಗಳನ್ನು ಕಂಡುಕೊಳ್ಳಬಹುದು. ಇದು ಸಾಧ್ಯವಾಗಬೇಕೆಂದರೆ ಗಗಗನ ಮೂರನೇ ತಲೆಮಾರಾದ ವೆಬ್ 3ರ ಅವಶ್ಯಕತೆ ಇದೆ. ವೆಬ್ 1 ರಲ್ಲಿ ಕೇವಲ ಓದಬಹುದಿತ್ತು, ವೆಬ್ 2ರಲ್ಲಿ ಓದುವುದು ಮತ್ತು ಬರೆಯುವ ಅವಕಾಶವಿತ್ತು. ವೆಬ್ 3ರಲ್ಲಿ ಓದಿ ಬರೆದು ಕಾರ್ಯರೂಪಕ್ಕೆ ಕೂಡ ತರಬಹುದು. ಇದರಲ್ಲಿ ಕೃತಕ ಬುದ್ಧಿಮತ್ತೆ ಮನುಷ್ಯನ ಭಾಷೆಯನ್ನು ಅರ್ಥ ಮಾಡಿಕೊಂಡು ಕೆಲಸವನ್ನು ಮಾಡಬಹುದಾದ ವಿಶಿಷ್ಟ ತಂತ್ರಜ್ಞಾನವನ್ನು ಕಾಣಬಹುದು. ಇದು ಮನುಷ್ಯನ ಮುಖಚರ್ಯುಯನ್ನು ಕೂಡ ಅರ್ಥೈಸಿಕೊಳ್ಳಬಲ್ಲದು. ಇನ್​ಸ್ಟಾಗ್ರಾಂನಲ್ಲಿ ಇಷ್ಟವಾಗದ ರೀಲ್ ನೋಡಿ ಮುಖ ಗಂಟು ಹಾಕಿಕೊಂಡರೆ ಸ್ವಯಂಚಾಲಿತವಾಗಿ ಬೇರೆ ವಿಷಯದ ರೀಲ್ ಅನ್ನು ತೋರಿಸಲು ಪ್ರಾರಂಭಿಸುತ್ತದೆ. ಇದರೊಂದಿಗೆ ಕ್ರಿಪ್ಟೋ ಕರೆನ್ಸಿ, ಐಓಟಿ, ಆಟೋಮೊಬೈಲ್ ಕ್ಷೇತ್ರಕ್ಕೆ ಕೂಡ ಇದರಿಂದ ಬಹಳಷ್ಟು ಪ್ರಯೋಜನವಿದೆ. ಈ ತಂತ್ರಜ್ಞಾನ ಅಭಿವೃದ್ಧಿಯ ಹಂತದಲ್ಲಿದ್ದು, ಇದನ್ನು ಬಳಸಲು ಟೆಕ್​ಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಸಾಫ್ಟ್​ವೇರ್ ರೋಬಾಟ್ ಕಮಾಲ್

ಮಾವನ ಜವಾಬ್ದಾರಿಯನ್ನು ಕಡಿಮೆಗೊಳಿಸುವ ತಾಂತ್ರಿಕ ಸಾಧನವೆಂದರೆ ರೊಬಾಟಿಕ್ ಪ್ರೊಸೆಸ್ ಆಟೋಮೇಷನ್ (ಆರ್​ಪಿಎ). ಸಾಫ್ಟ್ ವೇರ್ ರೋಬಾಟ್​ಗಳನ್ನು ಸುಲಭವಾಗಿ ನಿರ್ವಿುಸಿ, ನಿಯೋಜಿಸಿ, ನಿಯಂತ್ರಿಸಲು ಇದನ್ನು ಬಳಸುತ್ತಾರೆ. ಈ ರೋಬಾಟ್​ಗಳು ಡಿಜಿಟಲ್ ಮತ್ತು ಸಾಫ್ಟ್ ವೇರ್ ಸಿಸ್ಟಮ್ಳ ಮೂಲಕ ಮನುಷ್ಯನ ಸಂವಹನ ಕ್ರಿಯೆಗಳನ್ನು ಅನುಕರಿಸುತ್ತವೆ. ಇವು ಪ್ರೋಗ್ರಾಮ್ ಮಾಡಿರುವ ಕ್ರಮದಲ್ಲಿ ಡೇಟಾವನ್ನು ಪರಿಶೀಲಿಸಿ, ಅವಶ್ಯಕತೆ ಇರುವ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡುತ್ತವೆ. ಉದಾಹರಣೆಗೆ, ವಿವಿಧ ವಿಷಯಕ್ಕೆ ಸಂಬಂಧಪಟ್ಟ ಇ-ಮೇಲ್​ಗಳನ್ನು ನಿಗದಿತ ಸಮಯಕ್ಕೆ, ಒಬ್ಬ ಮನುಷ್ಯನೇ ಬರೆದ ರೀತಿಯಲ್ಲಿ ಒಂದು ಲಕ್ಷ ಜನರಿಗೆ ಕಳಿಸಿಕೊಡುತ್ತದೆ. ಇದರಿಂದ ಕೆಲಸದ ಒತ್ತಡ ತಗ್ಗಿಸಬಹುದು ಮತ್ತು ಸಮಯ ಉಳಿಸಿ ಖರ್ಚನ್ನು ಕಡಿಮೆ ಮಾಡಬಹುದು. ಯುಐ ಪಾತ್, ಬ್ಲೂ ಪ್ರಿಸಮ್ ಆಟೋಮೇಷನ್ ಎನಿವೇರ್ ಮೊದಲಾದ ಹಲವಾರು ಆರ್​ಪಿಎ ಟೂಲ್​ಗಳಿವೆ.

Related News

spot_img

Revenue Alerts

spot_img

News

spot_img