22.3 C
Bengaluru
Thursday, June 20, 2024

ತೆರಿಗೆ ವಂಚನೆ: ಬೆಳ್ಳಂಬೆಳಗ್ಗೆ ಬೆಂಗಳೂರಿನ ಹಲವೆಡೆ ಐಟಿ ದಾಳಿ

#Tax evasion #IT raids # many parts # Bengaluru # hours # morning

ಬೆಂಗಳೂರು:ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ 10ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.15ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡಗಳು ರಾತ್ರೋರಾತ್ರಿ ಚೆನ್ನೈ, ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ವಿಜಯನಗರ, ಬಿಟಿಎಂ ಲೇಔಟ್ , ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಚಿನ್ನದ ಅಂಗಡಿಗಳು, ಮೆಡಿಕಲ್ ಶಾಪ್‌ಗಳು, ಆಸ್ಪತ್ರೆಗಳ ಮಾಲೀಕರ ಮನೆ ಹಾಗೂ ಉದ್ಯಮಿಗಳ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ವಿಜಯನಗರ, ಬಿಟಿಎಂ ಲೇಔಟ್, ಹುಳಿಮಾವು, ಸದಾಶಿವನಗರದಲ್ಲಿ ಐಟಿ ಅಧಿಕಾರಿಗಳು ತಲಾಶ್ ನಡೆಸುತ್ತಿದ್ದಾರೆ. ಶಾಂತಿನಗರದಲ್ಲಿರುವ ಉದ್ಯಮಿಯೊಬ್ಬರ ಮನೆ ಮೇಲೂ ರೇಡ್ ಆಗಿದೆ.ವಿಜಯನಗರದಲ್ಲಿ ವೈದ್ಯೆ ನಿವಾಸದ ಮೇಲೆ ಸಹ ಐಟಿ ದಾಳಿಯಾಗಿದೆ. ಪ್ರಶಾಂತನಗರದ ವೈದ್ಯೆ ಮನೆಯಲ್ಲಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.ಬೆಂಗಳೂರಿನ ಮೇಕ್ರಿಸರ್ಕಲ್ ಬಳಿಯ ಗಜರಾಜ ಜುವೆಲರ್ಸ್ ಮೇಲೆ ದಾಳಿ ಮಾಡಲಾಗಿದ್ದು, ಅಧಿಕಾರಿಗಳು ಅಂಗಡಿ ಬಾಗಿಲು ಮುಚ್ಚಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.ಬೆಂಗಳೂರಿನ ಶಾಂತಿನಗರದ ಉದ್ಯಮಿ ನವೀನ್​ ಮನೆ ಮೇಲೂ ಐಟಿ ದಾಳಿಯಾಗಿದೆ. ಎರಡು ಇನೋವಾ ಕಾರಿನಲ್ಲಿ ಬಂದಿರುವ ಎಂಟು ಮಂದಿ ಐಟಿ ಅಧಿಕಾರಿಗಳು, ನವೀನ್ ಅವರ ಶಾಂತಿನಗರದಲ್ಲಿನ ದೊಡ್ಡ ಐಶಾರಾಮಿ ಬಂಗಲೆಯಲ್ಲಿ ದಾಖಲೆ ಪರಿಶೀಲಿಸುತ್ತಿದ್ದಾರೆ.

Related News

spot_img

Revenue Alerts

spot_img

News

spot_img