25.5 C
Bengaluru
Friday, September 20, 2024

12 ಸಾವಿರ ರೂ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದತಹಶೀಲ್ದಾರ್‌

ಹಾವೇರಿ : ಹಾವೇರಿ (Haveri) ಜಿಲ್ಲೆಯ ರಾಣೆಬೆನ್ನೂರಿನ (Ranebennur) ತಹಶೀಲ್ದಾರ್‌ ಮತ್ತು ಚಾಲಕ ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಮರಳಿನ ಗಾಡಿ ಬಿಡಲು 12 ಸಾವಿರ ರೂ. ಲಂಚ ಸ್ವೀಕರಿಸುವಾಗ ಇಲ್ಲಿಯ ತಹಸೀಲ್ದಾರ್ ಹಾಗೂ ಆತನ ಡ್ರೈವರ್ ಲೋಕಾಯುಕ್ತ(Lokayukta) ಪೊಲೀಸರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಬಿದ್ದ ಘಟನೆ ಶುಕ್ರವಾರ ನಡೆದಿದೆ,ತನ್ನ ಜೀಪ್ ಡ್ರೈವರ್ ಮಾಲತೇಶ್ ಮಡಿವಾಳರ ಮೂಲಕ 12 ಸಾವಿರ ರೂ‌. ಲಂಚ ಸ್ವೀಕರಿಸುತ್ತಿದ್ದ ರಾಣೆಬೆನ್ನೂರು ತಹಶೀಲ್ದಾರ್ (Tahasildar) ಹನುಮಂತ ಶಿರಹಟ್ಟಿ ಹಾಗೂ ಆತನ ಚಾಲಕ ಮಾಲತೇಶ ಲೋಕಾಯುಕ್ತ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.ಅಕ್ರಮವಾಗಿ ಮರಳು ಸಾಗಣೆ (transportation) ಮಾಡುತ್ತಿದ್ದ ಎರಡು ಲಾರಿಗಳನ್ನು ಬಿಡಲು ತಹಶೀಲ್ದಾರ್ ಹನುಮಂತ ಶಿರಹಟ್ಟಿ 12 ಸಾವಿರ ರೂ. ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಶುಕ್ರವಾರ ನಗರದ ವೀರಭದ್ರೇಶ್ವರ ನಗರದಲ್ಲಿರುವ ತಹಸೀಲ್ದಾರ್ ಮನೆಗೆ ಮಂಜುನಾಥನನ್ನು ಕರೆಯಿಸಿಕೊಂಡು ಹಣ ಪಡೆಯುತ್ತಿದ್ದ ಅದೇ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಇಬ್ಬರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.ದಾವಣಗೆರೆ ಲೋಕಾಯುಕ್ತ SP ವಿ.ವಿ. ಕೌಲಾಪುರೆ, ಹಾವೇರಿ ಲೋಕಾಯುಕ್ತ DYSP ಚಂದ್ರಶೇಖರ ಬಿ.ಪಿ., ಅಧಿಕಾರಿ ಎಚ್. ಆಂಜನೇಯ, ಮಂಜುನಾಥ ಪಂಡಿತ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿ ದಾಳಿಯಲ್ಲಿದ್ದರು.

Related News

spot_img

Revenue Alerts

spot_img

News

spot_img