#Suvarna Karnataka #Kannada #means #things # come to mind
ಬೆಂಗಳೂರು;ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಶತಮಾನಗಳ ಹಿಂದೆಯೇ ಕನ್ನಡ ನಾಡನ್ನು ಕನ್ನಡಿಗರೇ ಆಳಿದ್ದರು. ಹೀಗಿದ್ದರೂ ಕನ್ನಡ ನಾಡಿನ ಪರಿಪೂರ್ಣ ಪರಿಕಲ್ಪನೆ ಸಾಕಾರಗೊಂಡಿದ್ದು, ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ 1956ರ ನವೆಂಬರ್ 1 ರಂದು ವಿಶಾಲ ಮೈಸೂರು ರಾಜ್ಯ , 1973 ರ ನವೆಂಬರ್ 1 ರಂದು ರಾಜ್ಯಕ್ಕೆ ಕರ್ನಾಟಕ ಎಂದು ಕನ್ನಡ ನಾಡು ಮರುನಾಮಕರಣಗೊಂಡಾಗ ಕನ್ನಡಿಗರೆಲ್ಲರೂ ಸಾಂಸ್ಕೃತಿಕವಾಗಿ ಹಾಗೂ ಭಾವನಾತ್ಮಕವಾಗಿ ಸಂಪೂರ್ಣವಾಗಿ ಒಂದಾದವು. ಈ ಸಂಭ್ರಮದ ಸುವರ್ಣಮಹೋತ್ಸವವನ್ನೂ ನಾವಿಂದು ಆಚರಿಸುತ್ತಿದ್ದೇವೆ.
* ಶ್ರವಣಬೆಳಗೊಳದ ಬಾಹುಬಲಿಯ ಸುಮಾರು 58 ಮೀ ಎತ್ತರದ ಮತ್ತು ಏಕಶಿಲೆಯ ಪ್ರತಿಮೆ. ಈ ಪ್ರತಿಮೆಯು ವಿಶ್ವದ ಅತಿದೊಡ್ಡ ಏಕಶಿಲಾ ಪ್ರತಿಮೆಯಾಗಿದೆ.
*ಮೈಸೂರು ಪಾಕು ಕರ್ನಾಟಕ ರಾಜ್ಯದ ಮಿಷ್ಟ ಸಿಹಿತಿನಿಸಾಗಿದ್ದು, ಇದು ಮೈಸೂರು ಸಂಸ್ಥಾನದಲ್ಲಿ ಮೊದಲಿಗೆ ತಯಾರಿಸಿದ ಕಾರಣ ಈ ಹೆಸರು ಬಂದಿದೆ.
*ಜೋಗ ಜಲಪಾತವು ರಾಜ್ಯದ ಅತ್ಯಂತ ರಮಣೀಯವಾದ ಜಲಪಾತವಾಗಿದೆ. ಜೋಗ ಜಲಪಾತವು ಭಾರತದ ಎರಡನೇ ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ.
*ತುಳು, ಕೊಡವ, ಕೊಂಕಣಿ, ಬ್ಯಾರಿ ಸೇರಿ 13 ಉಪಭಾಷೆಗಳು ಕರ್ನಾಟಕದಲ್ಲಿದೆ. ಕರ್ನಾಟಕದಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ತೆರಳಿದರೆ ಮತ್ತೊಂದು ರಾಜ್ಯಕ್ಕೆ ತೆರಳಿದ ಅನುಭವವಾಗಲಿದೆ.
*ಭಾರತದಲ್ಲೇ ಮೊದಲ ಬಾರಿಗೆ ಸಮುದ್ರದಾಳದಲ್ಲಿ ಚಿತ್ರೀಕರಣ ನಡೆಸಿದ ಕೀರ್ತಿ ಕನ್ನಡದ ಹೆಸರಾಂತ ನಟ, ನಿರ್ದೇಶಕ ಶಂಕರ್‌ನಾಗ
*ಕ್ರೀಡಾಲೋಕಕ್ಕೆ ಅನಿಲ್ ಕುಂಬ್ಳೆ, ಪ್ರಕಾಶ್ ಪಡುಕೋಣೆ, ಸ್ಟುವರ್ಟ್ ಬಿನ್ನಿ, ಅರ್ಜುನ್ ಹಾಲಪ್ಪ, ಅಶ್ವಿನಿ ನಾಚಪ್ಪರಂತಹ ಸಾಧಕರನ್ನು ಕರ್ನಾಟಕ ನೀಡಿದೆ.
*ದಾವಣಗೆರೆಯ ಬೆಣ್ಣೆದೋಸೆಯ ರುಚಿಯಿಂದ ಬೆಣ್ಣೆನಗರಿ ಎಂಬ ಹೆಸರು ಜಿಲ್ಲೆಗೆ ದೊರೆತಿದೆ. ವಿಭಿನ್ನವಾದ ರುಚಿಯಿಂದ ಈ ತಿನಿಸು ಜಗವನ್ನು ಸೆಳೆದಿದೆ.
*ಇಳಕಲ್ ಸೀರೆಯು ಉತ್ತರ ಕರ್ನಾಟಕದ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಬಾಗಲಕೋಟೆಯ ಇಳಕಲ್ಲಿ ನೇಯ್ದ ಮಾಡಲಾಗುವ ಸೀರೆ ನೀರೆಯರ ಸೌಂದರ್ಯಕ್ಕೆ ಮೆರುಗು
*ಬ್ಯಾಡಗಿಯ ಮೆಣಸಿನಕಾಯಿ ಹೆಸರಿಗಷ್ಟೇ ಘಾಟು ಹದವಾದ ಖಾರ ಉತ್ತಮ ಬಣ್ಣದ ಬ್ಯಾಡಗಿ ಮೆಣಸು ದಕ್ಷಿಣ ಭಾರತದ ಅಡುಗೆಮನೆಗಳಲ್ಲಿ ಇರಲೇಬೇಕಾದ ಮಸಾಲೆ.
*ಪೇಢಾಗೆ ಪ್ರಸಿದ್ಧಿ ಪಡೆದಿರುವುದು ನಮ್ಮ ಧಾರವಾಡ, ಅಲ್ಲಿನ ಪೇಢಾ ಧಾರವಾಡದಿಂದ ವಿದೇಶಕ್ಕೂ ರವಾನೆಯಾಗುತ್ತದೆ ಎಂದರೆ ಆ ತಿನಿಸಿಗೆ ಇರುವ ಬೇಡಿಕೆಯಷ್ಟು.
*ಮೈಸೂರಿನ ಮಲ್ಲಿಗೆ ಹಾಗೂ ವೀಳ್ಯ ಎಲ್ಲೆಡೆ ಇನ್ನಿಲ್ಲದಷ್ಟು ಬೇಡಿಕೆಯಿದೆ. ಮಲ್ಲಿಗೆಯ ಘಮಕ್ಕೆ ಮಾರುಹೋಗದವರಿಲ್ಲ. ವೀಳ್ಯಯ ಖಾರಕ್ಕೆ ಮನಸೂರೆಗೊಳ್ಳದವರಿಲ್ಲ.
*ಐಟಿ ಹಬ್ ಬೆಂಗಳೂರು ಬಹುರಾಷ್ಟ್ರೀಯ ಕಂಪನಿಗಳಿಗೆ ಅತ್ಯಂತ ಮೆಚ್ಚಿನ ತಾಣ. ದೇಶದಲ್ಲೇ ಅತಿಹೆಚ್ಚು ಸ್ಟಾರ್ಟ್ ಅಪ್ ಗಳು ಹಾಗೂ ಐಟಿ ಕಂಪನಿಗಳನ್ನು ಬೆಂಗಳೂರು ಹೊಂದಿದೆ.
*ಇದುವರೆಗೆ ಕರ್ನಾಟಕದ 8 ಸಾಹಿತಿಗಳಿಗೆ ಜ್ಞಾನಪೀಠ ಪುರಸ್ಕಾರ ಲಭಿಸಿದೆ. ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ, ವಿ.ಕೃ. ಗೋಕಾಕ, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರ ಈ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟ ಮಹನೀಯರು.
*’ನಮ್ಮ ಮೆಟ್ರೋ’ ಬೆಂಗಳೂರು ನಗರದೊಳಗೆ ಸೇವೆ ಸಲ್ಲಿಸುವ ಕ್ಷಿಪ್ರ ರೈಲು ವ್ಯವಸ್ಥೆ. ದೆಹಲಿ ನಂತರ ಇದು ದೇಶದ 2ನೇ ಅತಿ ಉದ್ದದ ಕಾರ್ಯಾಚರಣೆಯ ಮೆಟ್ರೋ ಜಾಲ. ದಕ್ಷಿಣ ಭಾರತದ ಮೊದಲ ಭೂಗತ (ಅಂಡರ್ಗ್ರೌಂಡ್) ಮೆಟ್ರೋ.
*ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 1 ರೂ.ಗೆ 1 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ದಿನವೇ ಘೊಷಿಸಿದರು. ನಂತರದ ವರ್ಷಗಳಲ್ಲಿ ಯೋಜನೆಗೆ ಬದಲಾವಣೆ ಮಾಡಿ ಪ್ರತಿ ಕುಟುಂಬ ಸದಸ್ಯನಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಲು ಆರಂಭಿಸಲಾಯಿತು.
*ಶಾಲಾಮಕ್ಕಳಿಗಾಗಿ ಕ್ಷೀರಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಜಾರಿಗೆ ತಂದರು. ಅರಸು ಅವಧಿಯ ಉಳುವವನೇ ಹೊಲದೊಡೆಯ ಕಾಯ್ದೆ ರೀತಿಯಲ್ಲೇ ಸಿದ್ದರಾಮಯ್ಯ 2017ರಲ್ಲಿ ವಾಸಿಸುವವನೇ ಮನೆದೊಡೆಯ ಕಾನೂನು ಜಾರಿಗೆ ತಂದರು.
*ಅವಳಿ ನಗರ ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕ ಭಾಗದ ಅತಿದೊಡ್ಡ ಆರ್ಥಿಕ ಆಧಾರಸ್ಥಂಭ, ಬೆಂಗಳೂರು ನಂತರ ರಾಜ್ಯಕ್ಕೆ ಹೆಚ್ಚಿನ ಆದಾಯ ಅಥವಾ ವಹಿವಾಟು ಇಲ್ಲಿಂದಲೇ,
*ಕರ್ನಾಟವು ಭಾರತ ದೇಶದಲ್ಲಿಯೇ ಅತಿ ಹೆಚ್ಚು ಕಾಫಿ ರಫ್ತು ಮಾಡುವರಾಜ್ಯವಾಗಿದೆ. ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಕಾಫಿ ಉತ್ಪಾದಿಸುವ ಪ್ರಮುಖ ಪ್ರದೇಶಗಳಾಗಿವೆ.