#Surveyor fell # Lokayukta’s trap # receiving# bribe #money
ಯಲ್ಲಾಪುರ: ಇಲ್ಲಿನ ತಹಸೀಲ್ದಾರ್ ಕಚೇರಿ ಭೂಮಾಪನ ವಿಭಾಗದ ಮೇಲೆ ಬುಧವಾರ ಲೋಕಾಯುಕ್ತ ದಾಳಿ(Lokayukta ride) ನಡೆದಿದೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ (yallapura )ಆಡಳಿತ ಸೌದ ಕಚೇರಿಯಲ್ಲಿ ಜಮೀನು ಮಾಲೀಕನಿಂದ ಲಂಚ(Bribe) ಸ್ವೀಕರಿಸುತ್ತಿದ್ದ ವೇಳೆ ಪರವಾನಿಗೆ ಭೂಮಾಪಕ(surveyor) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ,ಪೋಡಿ ಕಾರ್ಯಕ್ಕೆ ಲಂಚ ಪಡೆಯುತ್ತಿದ್ದ ಭೂಮಾಪಕ ಚಂದ್ರಮೋಹನ ವಶಕ್ಕೆ ಪಡೆಯಲಾಗಿದೆ.ಯಲ್ಲಾಪುರದ ರವೀಂದ್ರ ನಗರದ ದೀರಜ್ ವಿಠಲ ತಿನೇಕರ್ ಎಂಬುವವರಿಂದ 2500 ಲಂಚಕ್ಕೆ ಭೂಮಾಪಕ ಚಂದ್ರಮೋಹನ್ ಬೇಡಿಕೆ ಇಟ್ಟಿದ್ದರು, ಲಂಚ ಪಡೆಯುವಾಗ ಚಂದ್ರಮೋಹನ್ ರನ್ನು ಲೋಕಾಯುಕ್ತ ಎಸ್.ಪಿ ಕುಮಾರ್ ಚಂದ್ರ ನೇತೃತ್ವದ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದ್ದು ಕಾರವಾರ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.