20.8 C
Bengaluru
Saturday, July 27, 2024

“ಹಾಜರಾತಿ ಕೊರತೆಯಿಂದ ಪರೀಕ್ಷೇಗೆ ಹಾಜರಾಗದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಅವಕಾಶ:

ಬೆಂಗಳೂರು: ಮೇ-18:
ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಕಲಾ ಮತ್ತು ವಾಣಿಜ್ಯ ವಿಭಾಗದ 2022-23ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ) ವಿದ್ಯಾರ್ಥಿಗಳಿಗೆ ಇದೇ ಮೊದಲು ಈ ರೀತಿಯ ಅವಕಾಶ ನೀಡಿದ್ದು ಇದರಿಂದ 12,385 ಅಭ್ಯರ್ಥಿಗಳಿಗೆ ಪ್ರಯೋಜನವಾಗಲಿದೆ.
ಈ ವಿದ್ಯಾರ್ಥಿಗಳು ಖಾಸಗಿ ಅಭ್ಯರ್ಥಿಗಳಾಗಿ ಪೂರಕ ಪರೀಕ್ಷೆಗೆ ದಾಖಲಾಗಬೇಕು. ಆದರೆ ಪ್ರಾಯೋಗಿಕ ಪರೀಕ್ಷೆಗಳನ್ನು ನೀಡಬೇಕಾಗಿರುವುದರಿಂದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಈ ಸೌಲಭ್ಯವಿಲ್ಲ. II PU ಪರೀಕ್ಷೆಗೆ ಹಾಜರಾಗಲು ಕನಿಷ್ಠ 75% ಹಾಜರಾತಿ ಕಡ್ಡಾಯವಾಗಿದೆ. ಆದರೆ ಹಾಜರಾತಿ ಕೊರತೆಯಿಂದ ಕಲಾ ವಿಭಾಗದ 7,985 ಹಾಗೂ ವಾಣಿಜ್ಯ ವಿಭಾಗದ 4,400 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.
ಈ ವಿದ್ಯಾರ್ಥಿಗಳಿಗೆ ಪರಿಹಾರ ಒದಗಿಸಿ, ಕೆಎಸ್ಇಎಬಿ ಖಾಸಗಿ ಅಭ್ಯರ್ಥಿಗಳಾಗಿ ಪೂರಕ ಪರೀಕ್ಷೆ ಬರೆಯಲು ಅವಕಾಶ ನೀಡಲು ನಿರ್ಧರಿಸಿದೆ ಮತ್ತು ದಾಖಲಾಗಲು ಮೂರು ದಿನಗಳ ಕಾಲಾವಕಾಶ ನೀಡಿದ್ದು ಇದೇ ಮೇ 20 ದಾಖಲಾತಿಗೆ ಕೊನೆಯದಿನವಾಗಿರಲಿದೆ. ಈ ಪೂರಕ ಪರೀಕ್ಷೆಗಳು ಪರೀಕ್ಷೆಯು ಮೇ 23 ರಿಂದ ಪ್ರಾರಂಭವಾಗಲಿವೆ . ಈ ಬಗ್ಗೆ ಮಾತನಾಡಿರುವ ಕೆಎಸ್ಇಎಬಿ ಅಧ್ಯಕ್ಷ ರಾಮಚಂದ್ರನ್ ಆರ್ ರವರು “ಮೊದಲ ಬಾರಿಗೆ ಕಡಿಮೆ ಹಾಜರಾತಿ ಹೊಂದಿರುವವರಿಗೆ ನಾವು ಈ ಸೌಲಭ್ಯವನ್ನು ಒದಗಿಸುತ್ತಿದ್ದೇವೆ. ವಿದ್ಯಾರ್ಥಿಗಳು ತಮ್ಮ ಸಂಬಂಧಿತ ಕಾಲೇಜುಗಳಿಗೆ ಹೋಗಿ ಮೇ 20 ರ ಮೊದಲು ಖಾಸಗಿ ಅಭ್ಯರ್ಥಿಯಾಗಿ ದಾಖಲಾಗಬೇಕು ಎಂದು ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img